
ಪ್ರಗತಿವಾಹಿನಿ ಸುದ್ದಿ; ನೈನಿತಾಲ್: ದೇಶದ ಹಲವು ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಅಸ್ಸಾಂ, ಉತ್ತರಾಖಂಡದಲ್ಲಿ ಪ್ರವಾಹವುಂಟಾಗಿದೆ. ಮಳೆಯ ಅಬ್ಬರದ ನಡುವೆಯೇ ಪ್ರವಾಸ ಹೊರಟಿದ್ದ ಕಾರೊಂದು ಧೇಲಾ ನದಿಗೆ ಉರುಳಿ ಬಿದ್ದ ಪರಿಣಾಮ 9 ಜನರು ಸಾವನ್ನಪ್ಪಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ಉತ್ತರಾಖಂಡದ ರಾಮನಗರದಲ್ಲಿ ಈ ದುರಂತ ಸಂಭವಿಸಿದೆ. ಪ್ರವಾಸಿಗರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಾರು ಧೇಲಾ ನದಿಗೆ ನುಗ್ಗಿದ್ದು, ಕಾರು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ. ಪಂಜಾಮ್ ಮೂಲದ 9 ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ದುರ್ಘಟನೆಯಲ್ಲಿ ಓರ್ವರನ್ನು ರಕ್ಷಿಸಲಾಗಿದೆ. ಇಂದು ಮುಂಜಾನೆ ಈ ದುರಂತ ಸಂಭವಿಸಿದ್ದು, ನಾಲ್ಕು ಮೃತದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದೆ.
ಭಾರಿ ಮಳೆ; ಪ್ರವಾಹ ಭೀತಿ; ಹಲವೆಡೆ ಭೂಕುಸಿತ; ಶಾಲಾ-ಕಾಲೇಜಿಗೆ ರಜೆ ಘೋಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ