*BREAKING: ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ಪತನ ಪ್ರಕರಣ*: *ಮೃತಪಟ್ಟವರಲ್ಲಿ ಐವರು ಬೆಂಗಳೂರು ಮೂಲದವರು*

ಪ್ರಗತಿವಾಹಿನಿ ಸುದ್ದಿ: ಉತ್ತರಾಖಂಡದ ಬದರಿನಾಥದಿಂದ ಬರುತ್ತಿದ್ದ ಹೆಲಿಕಪ್ಟರ್ ಚಮೋಲಿ ಜಿಲ್ಲೆಯಲ್ಲಿ ಪತನಗೊಂಡಿದ್ದು, ದುರಂತದಲ್ಲಿ ಪೈಲಟ್ ಸೇರಿ 6 ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬದರಿನಾಥ ಧಾಮ್ ದಿಂದ ಹೊರಟಿದ್ದ ಹೆಲಿಕಾಪ್ಟರ್ ಜೋಶಿಮಠದ ಕಣಿವೆ ಬಳಿ ಬರುತ್ತಿದ್ದಂತೆ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿದೆ. ಚಮೋಲಿ ಜಿಲ್ಲೆಯ ಬಳಿ ಪತನಗೊಂಡಿದೆ ಎಂದು ತಿಳಿದುಬಂದಿದೆ.
ಇತ್ತೀಚಿನ ಮಾಹಿತಿ ಪ್ರಕಾರ ಹೆಲಿಕಾಪ್ಟರ್ ನಲ್ಲಿದ್ದ ಪೈಲಟ್ ಸೇರಿ ಆರು ಜನರು ಮೃತಪಟ್ಟಿದ್ದಾರೆ. ಟ್ರಾನ್ಸ್ ಭಾರತ್ ಕಂಪನಿ ಒಡೆತನದ ಹೆಲಿಕಾಪ್ಟರ್ ಇದಾಗಿದೆ.
ಮೃತರಲ್ಲಿ ಐವರು ಬೆಂಗಳೂರು ಮೂಲದವರು ಎಂದು ತಿಳಿದುಬಂದಿದೆ. ಹೆಲಿಕಾಪ್ಟರ್ನಲ್ಲಿದ್ದ ಪೈಲಟ್ ಹಿಮಾಂಶು ಹಾಗೂ ಅವರ ಜೊತೆಗಿದ್ದ ಬೆಂಗಳೂರು ಮೂಲದ ಪ್ರಯಾಣಿಕರಾದ ಪ್ರತಾಪ, ಅರುಣ್, ಶಂಕರ್ ಗೌಡ, ಸುಧೀರ್, ಕೆ ಹೆಎಸ್ ನಟರಾಜ ಎಂದು ಗುರುತಿಸಲಾಗಿದೆ.
ಇವರೆಲ್ಲರೂ ಒಂದೇ ಕುಟುಂಬದವರು ಎಂದು ತಿಳಿದುಬಂದಿದೆ. ಬದರಿನಾಥ ದರ್ಶನಕ್ಕೆ ಹೋಗಿದ್ದರು, ಬದರಿನಾಥ ದೇವರ ದರ್ಶನ ಪಡೆದು ಬರುವಾಗ ಈ ದುರಂತ ಸಂಭವಿಸಿದೆ. ಎಲ್ಲರೂ ಬೆಂಗಳೂರು ನಿವಾಸಿಗಳಾಗಿದ್ದಾರೆ. ಉತ್ತರಾಖಂಡ ವಿಮಾನಯಾನ ಸಿಇಒ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




