Latest

ವಿಜಯೇಂದ್ರ ಜತೆಗೆ ನನ್ನನ್ನು ಹೋಲಿಸಬೇಡಿ ಎಂದ ಸಚಿವ ಸೋಮಣ್ಣ

ಪ್ರಗತಿವಾಹಿನಿ ಸುದ್ದಿ; ಚಾಮರಾಜನಗರ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಜತೆಗೆ ನನ್ನನ್ನು ಹೋಲಿಸಬೇಡಿ ಎಂದು ಕಾರ್ಯಕರ್ತರಲ್ಲಿ ಸಚಿವ ವಿ.ಸೋಮಣ್ಣ ಮನವಿ ಮಾಡಿದ್ದಾರೆ.

ಮುಂದಿನ ಸಿಎಂ ವಿಜಯೇಂದ್ರ ಎಂದು ಕೆಲ ಕಾರ್ಯಕರ್ತರು ಘೋಷಣೆ ಕೂಗಿದ ವಿಚಾರವಾಗಿ ಮಾತನಾಡಿದ ಸೋಮಣ್ಣ, ಅದು ನಿನ್ನೇಯೇ ಮುಗಿದ ಅಧ್ಯಾಯ. 2023ಕ್ಕೆ ಚುನಾವಣೆ ಬರುತ್ತದೆ. ಹೈಕಮಾಂಡ್ ಟಿಕೆಟ್ ಕೊಡಬೇಕು. ಯಾರ ಹಣೆಬರಹ ಏನಿದೆಯೋ ಹಾಗೆಯೇ ಆಗುತ್ತದೆ ಎಂದು ಸೋಮಣ್ಣ ಹೇಳಿದರು.

ಈಗ ನನಗೆ 71 ವರ್ಷ, ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ 46 ವರ್ಷ. ನಾನು 7 ಬಾರಿ ಆಯ್ಕೆಯಾಗಿದ್ದೇನೆ. ಅವರು ಒಮ್ಮೆಯೂ ಆಯ್ಕೆಯಾಗಿಲ್ಲ. ವಿಜಯೇಂದ್ರ ಜತೆ ನನ್ನನ್ನು ಹೋಲಿಕೆ ಮಾಡಬೇಡಿ ಎಂದು ಹೇಳಿದರು. ವಿಜಯೇಂದ್ರ ಒಂದು ಬಾರಿ ಆಯ್ಕೆಯಾಗಲಿ. ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರವೇ ಬರಬೇಕು. ಡಬಲ್ ಇಂಜಿನ್ ಸರ್ಕಾರ ಬರಬೇಕು ಎಂಬುದೇ ನನ್ನ ಆಸೆ ಎಂದು ಹೇಳಿದರು.
ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಮಿಥಾಲಿರಾಜ್

Home add -Advt

Related Articles

Back to top button