Belagavi NewsBelgaum NewsKannada NewsKarnataka NewsLatest

*ರಾಜ್ಯಮಟ್ಟದ ಬೃಹತ್ ವಧು-ವರಾನ್ವೇಷಣಾ ಸಮಾವೇಶ ಕಾರ್ಯಕ್ರಮ*

ಬೇಧ ಭಾವಗಳನ್ನು ಬದಿಗಿಟ್ಟು ಬ್ರಾಹ್ಮಣರು ಒಂದಾಗಿದ್ದಾರೆ: ಆನಂದ ಮಹಾರಾಜ


ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಮ್ಮ ಸಮಾಜದಲ್ಲಿ ಸ್ಮಾರ್ತ ಮತ್ತು ವೈಷ್ಣವ ಎಂಬ ಪಿಡುಗು ಎದ್ದು ಕಾಣುತಲಿತ್ತು, ಶಾಸ್ತ್ರಗಳಲ್ಲಿ ಎಲ್ಲಿಯೂ ಸ್ಮಾರ್ತ ಮತ್ತು ವೈಷ್ಣವವೆಂಬ ವಿಂಗಡಣೆ ಇಲ್ಲವೇ ಇಲ್ಲ. ಇದೊಂದು ಪೂಜಾ ಪದ್ದತಿ ಮಾತ್ರ. ಇಲ್ಲಿ ಬ್ರಾಹ್ಮಣರೆಲ್ಲರೂ ಒಂದಾಗಿದ್ದಾರೆ. ಎಲ್ಲ ಬೇಧ ಭಾವಗಳನ್ನು ಬದಿಗಿಟ್ಟು ಎಲ್ಲರೂ ಒಂದೇ ವೇದಿಕೆಯಲ್ಲಿ ಸೇರಿರುವುದು ಸಂತಸವನ್ನುಂಟು ಮಾಡಿದೆ ಎಂದು ಶ್ರೀ ಆನಂದ ಮಹಾರಾಜರು ಹೇಳಿದರು.

ಇಂದು ದಿ. ೨ ಶನಿವಾರದಂದು ಮುಂ ೧೧-೩೦ ಕ್ಕೆ ನಗರದ ರಾಣಿಚೆನ್ನಮ್ಮ ನಗರದಲ್ಲಿರುವ ಶ್ರೀ ಸತ್ಯಪ್ರಮೋದ ಸಭಾಗೃಹದಲ್ಲಿ ೫೧ ನೇ ರಾಜ್ಯಮಟ್ಟದ ಬೃಹತ್ ವಧು-ವರಾನ್ವೇಷಣಾ ಸಮಾವೇಶವ ಕಾರ್ಯಕ್ರಮವನ್ನು ಮೈಸೂರಿನ ಸಪ್ತಪದಿ ಫೌಂಡೇಶನ್ ಮತ್ತು ಬೆಳಗಾವಿಯ ಸಮಸ್ತ ಬ್ರಾಹ್ಮಣ ಸಮಾಜ ಸಂಘಟನೆಯವರು ಸೇರಿಕೊಂಡು ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶ್ರೀ ಆನಂದ ಮಹಾರಜ, ಪೀಠಾಧಿಪತಿಗಳು ಹರಿಮಂದಿರ, ಹತ್ತರಗಿ ಇವರು ಮೇಲಿನಂತೆ ಹೇಳಿದರು. ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇತ್ತೀಚಿನ ದಿನಗಳಲ್ಲಿ ಗಂಡುಮಕ್ಕಳ ವಿವಾಹ ಅತ್ಯಂತ ಕ್ಲಿಷ್ಟಕರ ವಿಷಯವಾಗಿದೆ. ಅದರಲ್ಲಿಯೂ ವೈದಿಕ, ಒಕ್ಕಲುತನ ಅಲ್ಲದೇ ತಮ್ಮದೇ ಆದಂತಹ ಉದ್ಯೋಗವನ್ನು ಮಾಡುವ ಹುಡುಗರ ಮದುವೆ ಆಗದೇ ಇರುವುದನ್ನು ನಾವು ಕಾಣುತ್ತಿದ್ದೇವೆ ಅಂತಹವರಿಗೆ ಅನಕೂಲವಾಗಲೆಂದು ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಇದು ತುಂಬ ಶ್ಲಾಘನೀಯವಾದ ಕಾರ್ಯ ಎಂದು ಅವರು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಬೆಳಗಾವಿ ಜಿಲ್ಲಾ ಅಖಿಲ ಬ್ರಾಹ್ಮಣ ಸಮಾಜ ಅಧ್ಯಕ್ಷರಾದ ಎಸ್. ಎಂ. ಕುಲಕರ್ಣಿಯವರು ಅಧ್ಯಕ್ಷತೆಯನ್ನು ವಹಿಸಿದ್ದರು ಅವರು ಮಾತನಾಡುತ್ತ ವರವೇ ಆಗಲಿ ವಧುವೇ ಆಗಲಿ ಹೆಚ್ಚಿನ ಅಪೇಕ್ಷೆಗಳನ್ನು ಇಟ್ಟುಕೊಳ್ಳದೇ ಒಪ್ಪಿಕೊಳ್ಳಿ. ವಧು ಲಕ್ಷ್ಮೀ ಇದ್ದಹಾಗೆ ಅವಳ ಕಾಲ್ಗುಣದಿಂದ ತಮ್ಮ ಮುಂದಿನ ಸಂಸಾರಿಕ ಜೀವನ ಒಳ್ಳೆಯದೆ ಆಗುವುದು ಎಂದು ತಮ್ಮ ಜೀವನದ ಉದಾಹರಣೆಯೊಂದಿಗೆ ಹೇಳಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಸಪ್ತಪದಿ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಭಾರದ್ವಾಜ, ಸಪ್ತಪದಿ ಫೌಂಡೇಶನ್ ವಧುವರರನ್ನು ಸೇರಿಸುವ ಒಂದು ಒಳ್ಳೆಯ ವೇದಿಕೆಯಾಗಿದ್ದು ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಂಡು ನಮ್ಮ ಶ್ರಮವನ್ನು ಸಾರ್ಥಕಗೊಳಿಸಬೇಕೆಂದು ಕೇಳಿಕೊಂಡರು.

ಆರ್. ಎಸ್. ಮುತಾಲಿಕ ಡಾ. ಶ್ರೀಧರ ಹುಕ್ಜೇರಿ ಶಿರಿಷ ಕಾನೆಟ್ಕರ, ಪ್ರಿಯಾ ಪುರಾಣಿಕ ಜಯತೀರ್ಥ ಸವದತ್ತಿ, ಅನಂತರಾವ್ ಚಿಂಚಣಿ, ರಾಖೇಶ ದೇಶಪಾಂಡೆ, ಮಾಲತೇಶ ಪಾಟೀಲ. ಟಿ ಅರ್ ಗಣಪತಿ ಭಟ್, ನಂದಕುಮಾರ ಕರಗುಪ್ಪಿಕರ, ರಾಜೇಂದ್ರ ಕುಲಕರ್ಣಿ, ಅನುಶ್ರೀ ದೇಶಪಾಂಡೆ ಇವರನ್ನು ಶಾಲು ಹೊದಿಸಿ,ಮಾಲೆ ಹಾಕಿ, ಪೇಟ ತೊಡಿಸಿ ಸನ್ಮಾನಿಸಿ ಗೌರವಿಸಲಾಯಿತು.

ಗೋವಿಂದ ದೇಶಪಾಂಡೆ ಪ್ರಾರ್ಥಿಸಿದರು. ಶಿರೀಷ ಕಾನಟ್ಕರ ಸ್ವಾಗತಿಸಿದರು. ರಾಕೇಶ ದೇಶಪಾಂಡೆ ವಂದಿಸಿದರು. ಎರಡನೇ ದಿನವಾದ ಇಂದು ದಿ.೩ ರವಿವಾರದಂದು ೯-೩೦ ಕ್ಕೆ ವಧುವರಾನ್ವೇಷಣಾ, ಮ. ೧೨ ಕ್ಕೆ ಸಮಾರೋಪ, ೩ ಗಂಟೆಗೆ ಶ್ರೀನಿವಾಸ ಕಲ್ಯಾಣೋತ್ಸವವಿದ್ದು ಹೆಚ್ಚಿನ ವಿವರಗಳಿಗಾಗಿ ಶ್ರೀನಿವಾಸ ಭಾರಧ್ವಾಜ ಮೊ.೯೪೪೯೪೨೫೫೩೬ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button