Latest

ಅತಿವೇಗದಲ್ಲಿ ಸಾಗುತ್ತಿದ್ದ ವ್ಯಾನ್ ಹೋಗಿ ಬಿದ್ದಿದ್ದು ಬಾವಿಗೆ

ಪ್ರಗತಿವಾಹಿನಿ ಸುದ್ದಿ, ಚೆನ್ನೈ: ವಾಹನಗಳು ನದಿಗೆ, ಕೆರೆಗೆ ಬಿದ್ದು ದುರಂತಕ್ಕೀಡಾದ ಘಟನೆಗಳು ಅದೆಷ್ಟೋ ಇವೆ. ಇತ್ತೀಚೆಗೆ ಉಡುಪಿ ಜಿಲ್ಲೆಯ ಮರವಂತೆಯಲ್ಲಿ ಕಾರೊಂದು ಸಮುದ್ರಕ್ಕೆ ನುಗ್ಗಿದ ಘಟನೆ ನಡೆದಿತ್ತು.

ಆದರೆ ತಮಿಳುನಾಡಿನ ಕೋಯಮತ್ತೂರಿನಲ್ಲಿ ಇನ್ನೊಂದು ಅಪರೂಪದ ಘಟನೆ ನಡೆದಿದೆ. ವ್ಯಾನ್ ಒಂದು ಬಾವಿಗೆ ಬಿದ್ದು ದುರಂತ ಸಂಭವಿಸಿದೆ. ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

Related Articles

ಪೊಲೀಸರ ಪ್ರಕಾರ, ಬಾವಿಯಲ್ಲಿ 80 ಅಡಿಗೂ ಹೆಚ್ಚು ನೀರು ಇತ್ತು.  ಕಾಲೇಜು ವಿದ್ಯಾರ್ಥಿಗಳು ವಾಹನದಿಂದ ಹೊರಬರಲಾಗದೆ ನೀರಿನಲ್ಲಿ ಮುಳುಗಿದ್ದಾರೆ.

ವ್ಯಾನ್‌ನ ಚಾಲಕ ಗಾಯಗೊಂಡಿದ್ದು ಈತ ವಾಹನವನ್ನು ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಚಾಲನೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Home add -Advt

ಮತ್ತೆ ಮುನ್ನೆಲೆಗೆ ಬಂತು ಬ್ರಿಟನ್ ರಾಜನ ಬಾಲ್ಯದ ಖಿನ್ನ ಮುಖದ ಚಿತ್ರ

Related Articles

Back to top button