*ವರಮಹಾಲಕ್ಷ್ಮಿ ಪೂಜೆ ಆರಂಭ: ಇಂದು ಚಿನ್ನದ ಬೆಲೆ ಎಷ್ಟಿದೆ ನೋಡಿ…*
ಪ್ರಗತಿವಾಹಿನಿ ಸುದ್ದಿ: ಇಂದು ಹಿಂದೂಗಳ ಪವಿತ್ರ ಹಬ್ಬಗಳ ಪೈಕಿ ಒಂದಾದ ‘ವರಮಹಾಲಕ್ಷ್ಮಿ’ ಪೂಜೆ ಆರಂಭ ಆಗಿದೆ. ಆಭರಣ ಚಿನ್ನದ ಬೆಲೆ ಮೊನ್ನೆ ಕುಸಿತ ಕಂಡ ಬಳಿಕ 22 ಕ್ಯಾರೆಟ್ ನ ಪ್ರತಿ 10 ಗ್ರಾಂಗೆ 65550 ರೂಪಾಯಿ ಇದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಕೂಡ ಕುಸಿದಿದೆ. 24 ಕ್ಯಾರೆಟ್ ಚಿನ್ನ ಬೆಲೆಯು ಇಳಿಕೆ ಕಂಡು 10 ಗ್ರಾಂಗೆ 71,510 ರೂಪಾಯಿಗೆ ಮಾರಾಟ ಆಗುತ್ತಿದೆ.
ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಿ ಪ್ರತಿ ಕೆಜಿಗೆ 80,000 ರೂಪಾಯಿ ಲೆಕ್ಕದಲ್ಲಿ ಮಾರಾಟ ಆಗುತ್ತಿದೆ.
ಜಾಗತಿಕ ಮಟ್ಟದಲ್ಲಿ ಚಿನ್ನ ಬಳಕೆಯ ವಿಚಾರದಲ್ಲಿ ಭಾರತೀಯರೇ ಮುಂದೆ ಇದ್ದು ಸಾವಿರಾರು ವರ್ಷಗಳಿಂದ ಭಾರತದಲ್ಲಿ ಚಿನ್ನವನ್ನ ಬಳಕೆ ಮಾಡಲಾಗುತ್ತಿದೆ. ಅದರಲ್ಲೂ ಚಿನ್ನವನ್ನು ವ್ಯಾಪಾರ ಉದ್ದೇಶಕ್ಕಾಗಿ ಭಾರತದಲ್ಲಿ ಹಿಂದಿನಿಂದ ಕೂಡ ಬಳಕೆ ಮಾಡಿಕೊಂಡು ಬರಲಾಗ್ತಿದೆ. ಆಗಿನ ಕರೆನ್ಸಿ ಅಂದ್ರೆ ನಾಣ್ಯ ಮುದ್ರಣಕ್ಕು ಕೂಡ ಚಿನ್ನವನ್ನು ಬಳಕೆ ಮಾಡಲಾಗುತ್ತಿತ್ತು. ಹೀಗೆ, ನಮ್ಮ ನೆಲದ ಜೊತೆ ಚಿನ್ನ ಕೂಡ ಬೆರೆತು ಹೋಗಿದೆ. ಹೀಗಾಗಿ ಇಂದಿಗೂ ಕೂಡ ಈ ವಿಚಾರದಲ್ಲಿ ಭಾರತ ದೇಶವೇ ಮುಂದೆ ಇದ್ದು, ಅಪಾರ ಪ್ರಮಾಣದ ಚಿನ್ನವನ್ನ ಭಾರತ ಪ್ರತಿ ವರ್ಷ ಆಮದು ಮಾಡಿಕೊಳ್ಳುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ