ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಖನಗಾಂವ ಬಿ.ಕೆ. ಹಾಗೂ ಕೆಎಚ್ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಚಾಲನೆ ನೀಡಿದರು.
ಇದೇ ವೇಳೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ವಿವಿಧೆಡೆ ಅರಿಷಿಣ ಕುಂಕುಮ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಖನಗಾಂವ ಬಿಕೆ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಹಣ ಮಂಜೂರು ಮಾಡಿಸಿ, ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಲಕ್ಷ್ಮೀ ಹೆಬ್ಬಾಳಕರ ಭೂಮಿ ಪೂಜೆ ಕೈಗೊಂಡು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಲಗಮಣ್ಣ ಚಚಡಿ, ಬಸವರಾಜ ಬೆಕ್ಕಿನಕೇರಿ, ರುಕ್ಮವ್ವ ಹೊಸಮನಿ, ಲಕ್ಷ್ಮೀ ಬಗನಾಳ, ಮಲಕ್ಕಪ್ಪ ನಾಯ್ಕ, ಕೃಷ್ಣ ಸುತಾರ, ಭೀಮಶಿ ಚಚಡಿ, ತುಕಾರಾಂ ಹೊಸಮನಿ, ಮಹೇಶ ಬಗನಾಳ, ಗಂಗಾರಾಮ ಬಗನಾಳ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಖನಗಾಂವ್ ಕೆಎಚ್ ನಲ್ಲಿ..
ಖನಗಾಂವ್ ಕೆಎಚ್ ಗ್ರಾಮದ ರಸ್ತೆಗಳ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಹಣ ಮಂಜೂರು ಮಾಡಿಸಿ, ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಗ್ರಾಮಸ್ಥರ ಸಮ್ಮುಖದಲ್ಲಿ ಭೂಮಿ ಪೂಜೆಯನ್ನು ಕೈಗೊಂಡು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಭಾರತ ಪಾಟೀಲ, ರಂಜನಾ ಗಿರಿಯಾಲ್ಕರ್, ನಂದಾ ಪಾಟೀಲ, ಭಾವಕು ಪಾಟೀಲ, ಬಾಳು ಗಿರಿಯಾಲ್ಕರ್, ಯಲ್ಲಪ್ಪ ಕುರುಬರ
ಮಹಾಂತೇಶ ಸುತಾರ್, ಕಲ್ಲಪ್ಪ ಪಾಟೀಲ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಚಂದೂರಲ್ಲಿ ಅರಿಷಿಣ- ಕುಂಕುಮ:
ಚಂದೂರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಅರಿಷಿಣ ಕುಂಕುಮ ಕಾರ್ಯಕ್ರಮದಲ್ಲಿ ಲಕ್ಷ್ಮೀ ಹೆಬ್ಬಾಳಕರ ಭಾಗಿಯಾಗಿ, ಕ್ಷೇತ್ರದ ಅಭಿವೃದ್ಧಿಯ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶೇಖರ ಹೊಸೂರ, ಮುಶೆಪ್ಪ ನಂದಿ, ಬಾಳು ಚೌಗುಲೆ, ಸತ್ಯಪ್ಪ ಮಕ್ಕಳಗೇರಿ, ಪ್ರಕಾಶ ಅರಬಳ್ಳಿ, ಭರಮಪ್ಪ ಮಕ್ಕಳಗೇರಿ, ಫಕೀರಪ್ಪ ಪಾಟೀಲ, ಬಾಳಕು ಪರಕಿ, ನಿಂಗಪ್ಪ ಕುರಬಗಟ್ಟಿ, ಮಾರುತಿ ಮಾರಿಹಾಳ, ಸಂತೋಷ ಬೂದಿಹಾಳ, ಬಾಳಕು ಕುರಬಗಟ್ಟಿ, ಮಾರುತಿ ಬೆಳವಡಿ, ಲಕ್ಷ್ಮಣ ಬನ್ನೆನ್ನವರ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಖನಗಾಂವ ಕೆಎಚ್ ನಲ್ಲಿ..
ಬೆಳಗಾವಿ ಗ್ರಾಮೀಣ ಕ್ಷೇತ್ರದ ಖನಗಾಂವ ಕೆಎಚ್ ಗ್ರಾಮದಲ್ಲಿ ಅರಿಷಿಣ ಕುಂಕುಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭೂತಪೂರ್ವ ಅಭಿವೃದ್ಧಿ ಮಾದರಿ ಎಂದು ಪರಿಗಣಿಸಲಾಗಿರುವುದು ನಾಲ್ಕುವರೆ ವರ್ಷಗಳ ಜನಸೇವೆ ಸಂತೃಪ್ತಿ ತಂದಿದೆ. ಇದು ಇನ್ನೂ ಹೆಚ್ಚು ಅಭಿವೃದ್ಧಿಗೆ ಪ್ರೇರೇಪಿಸಿದ್ದು ಕ್ಷೇತ್ರವನ್ನು ದೇಶದಲ್ಲೇ ಮಾದರಿಯಾಗಿಸಲು ಪಣ ತೊಟ್ಟಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಭಾರತ ಪಾಟೀಲ, ರಂಜನಾ ಗಿರಿಯಾಲ್ಕರ್, ನಂದಾ ಪಾಟೀಲ, ಭಾವಕು ಪಾಟೀಲ, ಬಾಳು ಗಿರಿಯಾಲ್ಕರ್, ಯಲ್ಲಪ್ಪ ಕುರಬರ, ಮಹಾಂತೇಶ ಸುತಾರ್, ಕಲ್ಲಪ್ಪ ಪಾಟೀಲ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಅಶ್ಲೀಲ ಮೆಸೇಜ್ ಕಳುಹಿಸಿದ ಆರೋಪ; ಬಿಜೆಪಿ ಮುಖಂಡ ವೆಂಕಟೇಶ ಮೌರ್ಯ ವಿರುದ್ಧ ಮಹಿಳೆಯರ ದೂರು
https://pragati.taskdun.com/accuse-of-ending-obscene-messages-complaint-of-women-against-bjp-leader-venkatesh-maurya/
ಬೆಳಗಾವಿ ಅಧಿವೇಶನದ ಮೊದಲ ದಿನ 2 ಪ್ರಮುಖ ನಿರೀಕ್ಷೆ
https://pragati.taskdun.com/2-major-expectations-on-the-first-day-of-belgaum-session/
ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಟ್ರ್ಯಾಕಿಂಗ್ ( ಚಾರಣ) ಶಿಬಿರ
https://pragati.taskdun.com/all-india-ncc-trekking-expedition-belgaum-trek-2022/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ