ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಜನೆವರಿ ೧, ೨೦೨೧ ರ ಅರ್ಹತಾ ದಿನಾಂಕವನ್ನಾಧರಿಸಿ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ ೨೦೨೧ ರ ಕುರಿತು ವಿವಿಧ ವಿಷಯಗಳ ಬಗ್ಗೆ ಪರಿಶೀಲನೆ ಮಾಡಲು ಬೆಳಗಾವಿ ಜಿಲ್ಲೆಯ ಮತದಾರರ ಪಟ್ಟಿಗಳ ವೀಕ್ಷಕರಾದ ಎಲ್.ಕೆ.ಅಥೀಕ್ ಇವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ ೧೬ ಮಧ್ಯಾಹ್ನ ೨ ಗಂಟೆಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎರಡನೇ ಮಹಡಿಯ ಸಭಾಂಗಣದಲ್ಲಿ ಪರಿಶೀಲನಾ ಸಭೆಯನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ ೧೭ ರಂದು ವಿದ್ಯುತ್ ವ್ಯತ್ಯಯ
ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ಅಗಲಿಕರಣ ಕೆಲಸವನ್ನು ಕೈಗೊಳ್ಳುತ್ತಿರುವುದರಿಂದ ಹಾಗೂ ವಿದ್ಯುತ್ ಮಾರ್ಗಗಳ ಸ್ಥಳಾಂತರ ಕಾರ್ಯವನ್ನು ಡಿಸೆಂಬರ್ ೧೭ ರಂದು ಬೆಳಿಗ್ಗೆ ೧೦ ಗಂಟೆಯಿಂದ ೬ ಗಂಟೆಯವರೆಗೆ ಕೈಗೊಳ್ಳುತ್ತಿರುವುದರಿಂದ ೧೧೦ ಕೆ.ವ್ಹಿ. ಮಚ್ಛೆ ಉಪಕೇಂದ್ರದಿಂದ ವಿತರಣೆಯಾಗುವ ಬೆಳಗಾವಿ ತಾಲೂಕಿನ ಮಚ್ಛೆ, ದೇಸೂರ, ಸುಸ್ಗ್ಯಾನಟ್ಟಿ, ಝಾಡಶಾಪೂರ ಹಾಗೂ ಪೀರನವಾಡಿ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹುವಿಸಕಂನಿ. ವಿಭಾಗದ ಕಾರ್ಯನಿರ್ವಾಹಕರು ಇಂಜಿನಿಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಟಿಯು : ಅಂತರಾಷ್ಟ್ರೀಯ ವಿಚಾರ ಸಂಕೀರಣ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ವಿಚಾರ ಸಂಕೀರಣ ಇದ್ದು, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಉದ್ಘಾಟಿಸಲಿದ್ದಾರೆ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮಹಿಳಾ ಅಧ್ಯಯನ ಕೇಂದ್ರವು ಅಸ್ಪೈರ್ಫಾರ್ಹರ್ (ಎಎಫ್ಹೆಚ್) ಫೌಂಡೇಶನ ಸಹಯೋಗದೊಂದಿಗೆ ಡಿಸೆಂಬರ್ ೧೬, ೧೭ ಮತ್ತು ೧೮, ೨೦೨೦ ರಂದು ಆಸ್ಪೈರ್ವಿಥ್ವಿಟಿಯು ಅಡಿಯಲ್ಲಿ ಮೂರು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕೀರಣವು ಆಯೋಜಿಸುತ್ತಿದೆ.
ವಿದ್ಯಾರ್ಥಿನಿಯರ ಗುರಿ ಹಾಗೂ ಆಕಾಂಕ್ಷೆಗಳು ಮತ್ತು ಇವುಗಳ ಸಾಧನೆಗೆ ಅವಶ್ಯವಿರುವ ಮಾರ್ಗದರ್ಶನಗಳ ಮಧ್ಯೆ ಇರುವ ಅಂತರವನ್ನು ಕಡಿಮೆಗೊಳಿಸುವುದು ಈ ವಿಚಾರಸಂಕಿರಣದ ಉದ್ದೇಶವಾಗಿದೆ. ಈ ವಿಚಾರ ಸಂಕೀರಣಕ್ಕೆ ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷರಾದ ಸುಧಾಮೂರ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ.
ಸುಧಾಮೂರ್ತಿ ಅವರು ಡಿಸೆಂಬರ್ ೧೬, ೨೦೨೦ ರಂದು ವರ್ಕಿಂಗ್ ವುಮೆನ್- ಎಕ್ಯಾಟಲಿ ಸ್ಟ್ಫಾರ್ಟ್ರಾನ್ಸ ಫಾರ್ಮಿನ್‌ಗೆ ಇಂಡಿಯಾ ವಿಷಯದ ಕುರಿತು ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಈ ವಿಚಾರ ಸಂಕಿರಣದಲ್ಲಿ ಯು,ಎಸ,ಎ. ಹಾಂಗಕಾಂಗ್, ಸಿಂಗಪುರ ಮತ್ತು ಭಾರತದ ಶ್ರೇಷ್ಠ ಪರಿಣ ತರು ಇದರಲ್ಲಿ ಉಪನ್ಯಾಸಕರಾಗಿ ಭಾಗವಹಿಸುತ್ತಿದ್ದಾರೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಕರಿಸಿದ್ದಪ್ಪ ಅಧ್ಯಕ್ಷತೆ ವಹಿಸುವರು.
ಕಲಾ ತಂಡಗಳ ಆಯ್ಕೆಗೆ ಅರ್ಜಿ ಆಹ್ವಾನ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ೨೦೨೦-೨೧ನೇ ಸಾಲಿನಲ್ಲಿ ಇಲಾಖೆಯ ಯೋಜನೆ ಹಾಗೂ ಸೇವೆಗಳನ್ನು ಗ್ರಾಮೀಣ ಮಟ್ಟದಲ್ಲಿ ಸಾರ್ವಜನಿಕರಿಗೆ ತಲುಪಿಸಲು ಜಾನಪದ ಕಲಾ ತಂಡಗಳು ಮುಂದಿನ ದಿನಗಳಲ್ಲಿ ಕಾರ್ಯಕ್ರಮ ನೀಡಲು ಅರ್ಜಿ ಕರೆಯಲಾಗಿದೆ.
೨೦೨೦-೨೧ನೇ ಸಾಲಿನಲ್ಲಿ ಜಾನಪದ ಕಲಾತಂಡಗಳು ಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ ಇರಬೇಕು. ಸಂಗೀತ ಮತ್ತು ನಾಟಕ ವಿಭಾಗ, ಮಾಹಿತಿ ಮತ್ತು ಪ್ರಸಾರ ಮಂತ್ರಾಲಯ ಭಾರತ ಸರ್ಕಾರ ಬೆಂಗಳೂರು ಕೇಂದ್ರದಲ್ಲಿ ನೋಂದಣ ಯಾದವರಿಗೆ ಆಯ್ಕೆಯಲ್ಲಿ ಆದ್ಯತೆ ನೀಡಲಾಗುವುದು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆಗಳಲ್ಲಿ ನೊಂದಣ ಯಾಗಿರುವ ಕಲಾ ತಂಡಗಳನ್ನು ಸಹ ಆಯ್ಕೆಗೆ ಪರಿಗಣ ಸಲಾಗುವುದು. ಆಯ್ಕೆಯಾದ ಕಲಾತಂಡಗಳನ್ನು ಜಿಲ್ಲೆಯಾದ್ಯಂತ ತಮ್ಮ ಕಲಾಪ್ರಕಾರಗಳಲ್ಲಿ ಕಾರ್ಯಕ್ರಮ ನೀಡಲು ಸಿದ್ದರಿರಬೇಕು.
ಆಸಕ್ತ ಕಲಾ ತಂಡಗಳು ತಮ್ಮ ತಂಡದ ಕಲಾಪ್ರಕಾರ ಹಾಗೂ ಸಂಗೀತ ಮತ್ತು ನಾಟಕ ವಿಭಾಗ, ಕನ್ನಡ ಮತ್ತು ಸಂಸ್ಕೃತ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನೊಂದಣ ಯಾದ ಪ್ರಮಾಣ ಪತ್ರಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಡಿಸೆಂಬರ ೨೦ ,೨೦೨೦ ರೊಳಗಾಗಿ ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.
ಅವಧಿ ಮೀರಿದ ನಂತರ ಬಂದ ಅರ್ಜಿಗಳನ್ನು ಆಯ್ಕೆಗೆ ಪರಿಗಣ ಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯ ಆರೋಗ್ಯ ಶಿಕ್ಷಣ ವಿಭಾಗದ ೯೮೪೪೭೨೨೪೦೮ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಡಾ.ಎಸ್.ವ್ಹಿ ಮುನ್ಯಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಬ್ಬಿನ ಬಾಕಿ ಬಿಲ್: ವಿಚಾರಣೆಯ ಸಭೆ ಮುಂದೂಡಿಕೆ
ಆಯುಕ್ತರು, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಡಿಸೆಂಬರ್ ೧೭ ಹಾಗೂ ೧೮ ರಂದು ನಗರದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ನಡೆಯಲಿದ್ದ ಕಬ್ಬಿನ ಬಾಕಿ ಬಿಲ್ಲಿನ ವಿಚಾರಣೆಯ ಸಭೆಯನ್ನು ಮುಂದೂಡಲಾಗಿದೆ.
ಸಕ್ಕರೆ ಕಾರ್ಖಾನೆಗಳಾದ ಶಿವಶಕ್ತಿ ಶುಗರ‍್ಸ್ ಲಿ. ಸೌದತ್ತಿ, ತಾ: ರಾಯಬಾಗ, ಶಿವಸಾಗರ ಶುಗರ‍್ಸ್ ಲಿ. ತಾ: ರಾಮದುರ್ಗ, ಓಂ ಶುಗರ‍್ಸ್ ಲಿ. ಜೈನಾಪೂರ ತಾ: ಚಿಕ್ಕೋಡಿ, ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆ, ತಾ:ಗೋಕಾಕ, ರೇಣುಕಾ ಶುಗರ‍್ಸ್ ಲಿ. ಕೊಕಟನೂರ ತಾ: ಅಥಣಿ , ವೆಂಕಟೇಶ್ವರ ಪಾವರ್ ಪ್ರೋ.ಲಿ. ಬೆಡಿಕೀಹಾಳ ತಾ: ಚಿಕ್ಕೋಡಿ, ಉಗಾರ ಶುಗರ‍್ಸ್ ಲಿ. ಉಗಾರಖುರ್ದ ತಾ:ಅಥಣಿ , ಶಿರಗುಪ್ಪಿ ಶುಗರ‍್ಸ್ ಲಿ. ಕಾಗವಾಡ, ಅಥಣಿ ಶುಗರ‍್ಸ್ ಲಿ. ಕೆಂಪವಾಡ ತಾ:ಅಥಣಿ ಮತ್ತು ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಚಿಕ್ಕೋಡಿ ಇವರ ವಿಚಾರಣೆಯನ್ನು ನಿಗದಿಗೊಳಿಸಲಾಗಿತ್ತು.
ಆದರೆ ಸದರಿ ಕಾರ್ಖಾನೆಗಳ ಹಾಗೂ ಅರ್ಜಿದಾರರ ವಿಚಾರಣೆಯನ್ನು ಆಡಳಿತಾತ್ಮಕ ಕಾರಣಗಳಿಂದಾಗಿ ಮುಂದೂಡಲಾಗಿದ್ದು, ಮುಂದಿನ ದಿನಾಂಕ ಮತ್ತು ಸ್ಥಳವನ್ನು ತಿಳಿಸಲಾಗುವುದು ಎಂದು ಆಯುಕ್ತರು, ಕಬ್ಬು ಹಾಗೂ ಸಕ್ಕರೆ ನಿರ್ದೇಶಕರು, ಬೆಂಗಳೂರು ಇವರು ಈ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ