ಪ್ರಗತಿವಾಹಿನಿ ಸುದ್ದಿ, ಶಬರಿಕೊಳ್ಳ (ರಾಮದುರ್ಗ) – ಶ್ರೀರಾಮನ ಜನ್ಮಸ್ಥಾನ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಭೂಮಿಪೂಜೆ ಕಾರ್ಯಕ್ರಮದ ನಿಮಿತ್ತ ಶಬರಿಕೊಳ್ಳದಲ್ಲಿ ಹೋಮ ಹವನ, ಕರಸೇವಕರಿಗೆ ಸನ್ಮಾನ ನಡೆಯಿತು.
ಭಾರತೀಯ ಜನತಾ ಪಾರ್ಟಿ ರಾಮದುರ್ಗ ಮಂಡಲವತಿಯಿಂದ ಇಂದು ಶ್ರೀರಾಮ ಮತ್ತು ಸೀತಾದೇವಿ, ಲಕ್ಷ್ಮಣ ಪಾದಸ್ಷರ್ಷಿಸಿದ ಪುಣ್ಯಭೂಮಿ ಶಬರಿ ಕೊಳ್ಳದಲ್ಲಿ ಕಾರ್ಯಕ್ರಮ ನಡೆಯಿತು.
ಶಬರಿಕೊಳ್ಳ ಶಬರಿಗೆ ಶ್ರೀರಾಮ ದರ್ಶನ ನೀಡಿದ ಸ್ಥಳ.
ಶಾಂತಿ ಸಮೃದ್ಧಿಗಾಗಿ ಹೋಮವನ್ನು ಮಾಡಿ, ಕರಸೇವೆಯಲ್ಲಿ ಭಾಗವಹಿಸಿದ ಕಾರ್ಯಕರ್ತರಿಗೆ ಗೌರವಪೂರ್ವಕವಾಗಿ ಸನ್ಮಾನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ ಮಾಮನಿ, ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ
ಹಾಗೂ ಬೆಳಗಾವಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ, ಮಹೇಶ್ ಮಾಹಿತಿ, ಸುಭಾಷ್ ಪಾಟೀಲ್, ಮಂಡಲ ಅಧ್ಯಕ್ಷ ರಾಜೇಶ್ ಬೀಳಗಿ
ಮಲ್ಲಣ್ಣ ಯಾದವಾಡ ಇತರ ಎಲ್ಲಾ ಪ್ರಮುಖ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ