
ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) CSE, NDA I & II, CDS ಸೇರಿದಂತೆ ವಿವಿಧ ನೇಮಕಾತಿ ಪರೀಕ್ಷೆಗಳ 2024ರ ಕ್ಯಾಲೆಂಡರ್ ಬಿಡುಗಡೆ ಮಾಡಿದೆ.
ಮುಂದಿನ ವರ್ಷ ಈ ಪರೀಕ್ಷೆಗಳಿಗೆ ಹಾಜರಾಗಲು ಇಚ್ಛಿಸುವ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ upsc.gov.in ನಲ್ಲಿ ಸಂಪೂರ್ಣ ವೇಳಾಪಟ್ಟಿಯನ್ನು ಪರಿಶೀಲಿಸಿ ಪಡೆಯಬಹುದಾಗಿದೆ.
NDA, NA ಮತ್ತು CDS ಮುಖ್ಯ ಪರೀಕ್ಷೆಯನ್ನು2024ರ ಸೆಪ್ಟೆಂಬರ್ 1 ರಂದು ನಿಗದಿಪಡಿಸಲಾಗಿದೆ. ಅಧಿಸೂಚನೆಯ ದಿನಾಂಕ 2024ರ ಮೇ 15, ಮತ್ತು ಅಪ್ಲಿಕೇಶನ್ ದಿನಾಂಕ 2024ರ ಜೂನ್ 4 ಆಗಿದೆ.
ನಾಗರಿಕ ಸೇವೆಗಳ ಪ್ರಿಲಿಮ್ಸ್ ಪರೀಕ್ಷೆ 2024ರ ಮೇ 26 ರಂದು ನಡೆಯಲಿದೆ. ಅಧಿಸೂಚನೆಯನ್ನು 2024ರ ಫೆಬ್ರವರಿ 14 ರಂದು ಬಿಡುಗಡೆ ಮಾಡಲಾಗುತ್ತಿದೆ. ನೋಂದಣಿಗಳು 2024ರ ಮಾರ್ಚ್ 5 ರಿಂದ ಆರಂಭಗೊಳ್ಳಲಿವೆ. UPSC ಮುಖ್ಯ ಪರೀಕ್ಷೆ 2024ರ ಸೆಪ್ಟೆಂಬರ್ 20 ರಂದು ನಿಗದಿಪಡಿಸಲಾಗಿದೆ.
ಅಭ್ಯರ್ಥಿಗಳು ಪರೀಕ್ಷೆಯ ದಿನಾಂಕಗಳು, ಅಧಿಸೂಚನೆ ದಿನಾಂಕ ಮತ್ತು ಇತರ UPSC ನೇಮಕಾತಿಗಾಗಿ ಅಪ್ಲಿಕೇಶನ್ ದಿನಾಂಕಕ್ಕಾಗಿ ಸಂಪೂರ್ಣ ಕ್ಯಾಲೆಂಡರ್ ಅನ್ನು ಪರಿಶೀಲಿಸಬಹುದಾಗಿದೆ.
ಅಧಿಸೂಚನೆಯ ದಿನಾಂಕಗಳು, ಪರೀಕ್ಷೆಯ ಪ್ರಾರಂಭ ಮತ್ತು ಅವಧಿಗಳು/ಆರ್‌ಟಿಗಳು ಸಂದರ್ಭಾನುಸಾರ ಬದಲಾಗುವ ಸಾಧ್ಯತೆಗಳಿವೆ ಎಂದು ಅಧಿಕೃತ ಸೂಚನೆ ನೀಡಲಾಗಿದೆ.
UPSC ಪರೀಕ್ಷೆಯ ವೇಳಾಪಟ್ಟಿ 2024 ಪಡೆಯುವ ವಿಧಾನ ಹೀಗಿದೆ:
- ಅಧಿಕೃತ ವೆಬ್‌ಸೈಟ್ upsc.gov.in ಗೆ ಭೇಟಿ ನೀಡಿ –
- ಪರೀಕ್ಷೆಯ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
- ಕ್ಯಾಲೆಂಡರ್ ವಿಭಾಗ ಆಯ್ಕೆ ಮಾಡಿ ವಾರ್ಷಿಕ ಕ್ಯಾಲೆಂಡರ್ 2024 ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ
- ಈಗ ಸಂಪೂರ್ಣ ವೇಳಾಪಟ್ಟಿ ಮೇಲೆ ಕಾಣಿಸುತ್ತದೆ
- ಡೌನ್‌ಲೋಡ್ ಮಾಡಿ ಪ್ರತಿ ಪಡೆಯಬಹುದು.