Latest

ನಾನು ಎಂಎಲ್ ಎ ಆಗಬೇಕು; ಅದಕ್ಕೆ ಕಾಂಗ್ರೆಸ್ ಸೇರುತ್ತಿದ್ದೇನೆ ಎಂದ ಮಾಜಿ ಸಚಿವ

ಪ್ರಗತಿವಾಹಿನಿ ಸುದ್ದಿ; ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸಿದ್ದು, ಈಗಾಗಲೇ ಮುಖಂಡರ ಜೊತೆ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಏನು ಹೇಳಿದರೂ ಮಾಡಲು ಸಿದ್ಧ. ಸಿದ್ದರಾಮಯ್ಯ ಹೋಗುವ ದಾರಿಯಲ್ಲಿ ನಾನು ಹೋಗುತ್ತೇನೆ. ಅವರು ಮಿಸಲಾತಿ ಹೋರಾಟಕ್ಕೆ ಹೋಗಿಲ್ಲ, ನಾನೂ ಕೂಡ ಹೋಗಿಲ್ಲ. ಸಿದ್ದರಾಮಯ್ಯ ಕೋಲಾರದಿಂದಲೇ ಅಹಿಂದ ಸಮಾವೇಶ ಆರಂಭಿಸಲಿ. ನಾನೇ 2 ಲಕ್ಷ ಜನರನ್ನು ಸೇರಿಸುತ್ತೇನೆ. ನಾನು ಸ್ಥಾಪನೆ ಮಾಡಿರುವ ನಮ್ಮ ಕಾಂಗ್ರೆಸ್ ಈಗಿಲ್ಲ. ನನ್ನದೇನಿದ್ರೂ ಇನ್ಮುಂದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಂದರು.

ನಾನು ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆಯಾಗಲಿದ್ದೇನೆ. ಈ ಬಗ್ಗೆ ಮುಖಂಡರ ಜೊತೆ ಚರ್ಚೆ ನಡೆದಿದೆ. ನಾನು ಎಂಎಲ್ ಎ ಆಗಬೇಕು. 10 ವರ್ಷ ಕಾಂಗ್ರೆಸ್ ನಲ್ಲಿಯೂ ಇರಬೇಕು ಎಂಬ ಆಸೆಯಿದೆ ಎಂದು ಹೇಳಿದರು.

ನನಗೆ ಮೊದಲಿನಿಂದಲೂ ಬಿಜೆಪಿ ಅಂದರೆ ಆಗುತ್ತಿರಲಿಲ್ಲ. ಬಿಜೆಪಿ ಸರ್ಕಾರದಲ್ಲಿ ನಾನು ಮಂತ್ರಿಯಾಗಿದ್ದು ನಿಜ. ಆದ್ರೆ ಪಕ್ಷವೇ ಬೇರೆ, ಸರ್ಕಾರವೇ ಬೇರೆ ಎಂದು ಇದೇ ವೇಳೆ ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button