Latest

*ಇದೇ ಕಾರಣಕ್ಕೆ ಗಲಾಟೆಯಾಗಿದ್ದು; ವರುಣಾದಲ್ಲಿ ಪ್ರತಾಪ್ ಸಿಂಹ ಓಡಾಡುತ್ತಿರುವುದಾದರೂ ಯಾಕೆ?; ಕೆಪಿಸಿಸಿ ವಕ್ತಾರ ಲಕ್ಷ್ಮಣ ಪ್ರಶ್ನೆ*

ಪ್ರಗತಿವಾಹಿನಿ ಸುದ್ದಿ; ಮೈಸೂರು: ವರುಣಾ ಕ್ಷೇತ್ರದ ಸಿದ್ದರಾಮಹುಂಡಿಯಲ್ಲಿ ಗಲಾಟೆ ನಡೆದ ವಿಚಾರವಾಗಿ ಮಾತನಾಡಿರುವ ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಹಣ ಹಂಚಿಕೆ ವಿಚಾರದಿಂದಲೆ ಗಲಾಟೆ ನಡೆದಿದೆ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 7:30ಕ್ಕೆ ಸಚಿವ ವಿ.ಸೋಮಣ್ಣ ಸಿದ್ದರಾಮಹುಂಡಿಗೆ ಬಂದಿದ್ದರು. ಪ್ರಚಾರ ನಡೆಯುತ್ತಿದ್ದ ವೇಳೆ ಯಾವುದೇ ಗಲಾಟೆ ಆಗಿಲ್ಲ. ಸಿದ್ದರಾಮಯ್ಯನವರ ಮನೆ ಮುಂದೆ 25 ನಿಮಿಷಗಳ ಕಾಲ ಭಾಷಣ ಮಾಡಿ ಬೈದಿದ್ದಾರೆ. ಆದರೂ ಜನ ಸುಮ್ಮನಿದ್ದಾರೆ ಅದೆಲ್ಲವೂ ರೆಕಾರ್ಡ್ ಇದೆ. ಆ ಸಂದರ್ಭದಲ್ಲಿ ಯಾವುದೇ ಗಲಾಟೆಯಾಗಿಲ್ಲ. ಆ ವೇಳೆ ಗಲಾಟೆಯಾಗಿದ್ದರೆ ರೆಕಾರ್ಡ್ ಬಿಡುಗಡೆ ಮಾಡಲಿ. ದುಡ್ಡು ಹಂಚಿಕೆ ವೇಳೆ ಗಲಾಟೆಯಾಗಿದೆ. ಈ ಕುರಿತು ಪೊಲೀಸರೇ ಮಾಹಿತಿ ಕೊಟ್ಟಿದ್ದಾರೆ ಎಂದು ಹೇಳಿದರು.

ಪೊಲೀಸರ ಮಾಹಿತಿ ಪ್ರಕಾರ ದುಡ್ಡು ಹಂಚಿಕೆ ವಿಚಾರದಲ್ಲಿ ನಡೆದ ಗಲಾಟೆ ಇದು. ಆಡ್ಮಿಟ್ ಆದ ವ್ಯಕ್ತಿ ಆಸ್ಪತ್ರೆಯಲ್ಲಿ ವೈದ್ಯರು ಕೇಳಿದಾಗ ಸುಮ್ಮನಿದ್ದ. ಫೋನ್ ಬರುವವರೆಗೂ ಆತ ಏನೂ ಮಾತನಾಡಿಲ್ಲ, ನಂತರ ಅಡ್ಮಿಟ್ ಮಾಡಿಸಿದ್ದಾರೆ. ಎಸ್ ಪಿ ಕೂಡ ಯಾವುದೇ ಗಲಾಟೆ ಆಗಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಆದರೆ ಬಿಜೆಪಿಯವರು ಈ ವಿಚಾರವಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಂಸದ ಪ್ರತಾಪ್ ಸಿಂಹ ಗಲಾಟೆ ಮಾಡಿಸುವ ಸಲುವಾಗಿಯೇ ವರುಣಾದಲ್ಲಿ ಓಡಾಡುತ್ತಿದ್ದಾರೆ. ಬೇರೆ ಕ್ಷೇತ್ರಗಳಲ್ಲಿ ಇಲ್ಲದ ಪ್ರತಾಪ್ ಸಿಂಹ ವರುಣಾದಲ್ಲಿ ಮಾತ್ರ ಯಾಕೆ ಓಡಾಡುತ್ತಿದ್ದಾರೆ? ನಾಚಿಕೆಯಾಗಬೇಕು ಅವರಿಗೆ ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

Home add -Advt
https://pragati.taskdun.com/vidhanasabha-electionsiddaramaiahv-somannavaruna/


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button