Karnataka NewsLatest

ಅರವಳಿಕೆ ಪದ್ಧತಿಯಿಂದ ವೈದ್ಯಕೀಯ ಕ್ಷೇತ್ರಕ್ಕೆ ಅಪಾರ ಕೊಡುಗೆ: ಡಾ. ಎನ್.ಎಸ್. ಮಹಾಂತಶೆಟ್ಟಿ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸುಮಾರು 176 ವರ್ಷಗಳಷ್ಟು ಹಳೆಯ ಪದ್ಧತಿಯಾದ ಅರವಳಿಕೆ ನೀಡುವಿಕೆ ವೈದ್ಯಕೀಯ ಕ್ಷೇತ್ರದ ಸುಧಾರಣೆಗೆ ಹೊಂದಿಕೊಳ್ಳುತ್ತ ಕೇವಲ ನೋವು ರಹಿತವಾಗಿರದೇ ಅನೇಕ ಕೊಡುಗೆಗಳನ್ನು ನೀಡುತ್ತಲಿದೆ. ಅಂಗಾಂಗ ಕಸಿಯಲ್ಲಿ ಪ್ರಮುಖ ಪಾತ್ರವಹಿಸುವ ಅರವಳಿಕೆಯು ಗಾಯವಾದರೂ ಕೂಡ ನೋವು ರಹಿತ ಶಸ್ತ್ರಚಿಕಿತ್ಸೆ ನೆರವೇರಿಸುವಲ್ಲಿ ಅಗತ್ಯವಾಗಿ ಬೇಕೆ ಬೇಕು. ಅಲ್ಲದೇ ಹೆರಿಗೆಯಿಂದ ಹಿಡಿದು ಸಣ್ಣ ಶಸ್ತ್ರಚಿಕಿತ್ಸೆವರೆಗೂ ಅರವಳಿಕೆ ಅತ್ಯವಶ್ಯವೆಂದು ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ‍್ಯರು ಹಾಗೂ ಕಾಹೆರ ಉಸ್ತುವಾರಿ ಉಪಕುಲಪತಿ ಡಾ. ಎನ್.ಎಸ್. ಮಹಾಂತಶೆಟ್ಟಿ   ಹೇಳಿದರು.

ಕಾಹೆರ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಅರವಳಿಕೆ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಾಹೆರನ ಕುಲಸಚಿವರಾದ ಡಾ. ವಿ ಎ ಕೋಠಿವಾಲೆ, ಹೊಸ ಯೋಜನೆಗಳ ನಿರ್ದೇಶಕ ಡಾ. ವಿ.ಡಿ. ಪಾಟೀಲ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ  ಡಾ. ಎಂ.ವಿ. ಜಾಲಿ, ಡಾ. ಆರ್. ಬಿ. ನೇರಲಿ, ಡಾ. ರಾಜೇಶ ಪವಾರ, ಡಾ. ಆರೀಫ್ ಮಾಲ್ದಾರ, ಡಾ. ಎಂ.ಜಿ. ಧೊರಿಗೋಳ, ಡಾ. ಸಿ.ಎಸ್. ಸಾಣಿಕೊಪ್ಪ, ಡಾ. ವಂದನಾ ಘೊಗಟೆ, ಡಾ. ಮಂಜುನಾಥ ಪಾಟೀಲ, ಡಾ. ಕೇದಾರೇಶ್ವರ, ಡಾ. ಮಹಾಂತೇಶ ಮುದಕನಗೌಡರ, ಡಾ. ಎಸ್.ಸಿ. ಮೆಟಗುಡ್, ಡಾ. ಎ.ಎಸ್. ಘೊಗಟೆ, ಡಾ. ಶ್ರೀದೇವಿ ಯೆನ್ನಿ ಮುಂತಾದವರು ಉಪಸ್ಥಿತರಿದ್ದರು.

ಶಾಸಕ ರೇಣುಕಾಚಾರ್ಯ ಆಪ್ತಸಹಾಯಕನ ಮೇಲೆ ದುಷ್ಕರ್ಮಿಗಳ ದಾಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button