
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ಜಕ್ಕಿನಹೊಂಡ ರಾಘವೇಂದ್ರ ಮಠದ ಮಾತೆ ವಸುಧಾದೇವಿ ವಿಜಯೇಂದ್ರ ಶರ್ಮಾ(65) ಇಂದು ಅನಾರೋಗ್ಯದಿಂದ ಕೊನೆಯುಸಿರೆಳೆದರು.
ಮೃತರ ಪತಿ ಶ್ರೀ ಗುರು ರಾಘವೇಂದ್ರ ಮಠದ ಕುಲಪತಿ ಶ್ರೀ ವಿಜಯೇಂದ್ರ ಶರ್ಮಾ ಜೀ ರಾಷ್ಟ್ರದೇಗುಲ ಅಯೋಧ್ಯಾ ರಾಮಮಂದಿರ ನಿರ್ಮಾಣದ ಭೂಮಿಪೂಜೆಗೆ ಇತ್ತೀಚೆಗೆ ಮಹೂರ್ತ ನಿಗದಿಪಡಿಸಿ ರಾಷ್ಟ್ರದ ಗಮನ ಸೆಳೆದಿದ್ದರು.
ಮೃತರು ಪತಿ ವಿಜಯೇಂದ್ರ ಶರ್ಮಾ, ಒಬ್ಬ ಪುತ್ರ ವಿಧ್ಯಾನಿಧಿ, ಐವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.