Belagavi NewsBelgaum NewsKannada NewsKarnataka NewsLatest

*ಸೆ.19 ರಂದು ಹುಬ್ಬಳ್ಳಿಯಲ್ಲಿ ವೀರಶೈವ ಲಿಂಗಾಯತ ಏಕತಾ ಸಮಾವೇಶ: ನಾಲ್ಕು ಜಿಲ್ಲೆಯ ಶಿವಾಚಾರ್ಯರ ಬೆಂಬಲ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸೆ.19 ರಂದು ಹುಬ್ಬಳ್ಳಿಯಲ್ಲಿ ಜರಗುವ ವೀರಶೈವ ಲಿಂಗಾಯತ ಏಕತಾ ಸಮಾವೇಶಕ್ಕೆ ನಾಲ್ಕು ಜಿಲ್ಲೆಯ ಶಿವಾಚಾರ್ಯರ ಬೆಂಬಲ ನೀಡಿದರು.

ಅಖಿತ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ಮುಕ್ತಿಮಠದ ಶ್ರೀ ಷ.ಬ್ರ. ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಹಾಗೂ ಕಟಕೋಳ ಎಂ.ಚಂದರಗಿ ಹಿರೇಮಠದ ಶ್ರೀ ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿದ್ಯದಲ್ಲಿ ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಯ ಧಾರವಾಡ ಜಿಲ್ಲಾಧ್ಯಕ್ಷ, ಶಿರಕೋಳದ ಶ್ರೀ ಗುರುಸಿದ್ಧ ಶಿವಾಚಾರ್ಯ ಸ್ವಾಮೀಜಿಗಳ, ಬೆಳಗಾವಿ ಜಿಲ್ಲಾಧ್ಯಕ್ಷ ಸವದತ್ತಿ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳು, ಕೊಲ್ಲಾಪುರದ ಜಿಲ್ಲಾಧ್ಯಕ್ಷ, ನೂಲಸುರಗೀಶ್ವರಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳ, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಅಂಬಿಕಾ ನಗರದ ವಿಶ್ವಾರಾದ್ಯ ಸ್ವಾಮಿಗಳ ನೇತೃತ್ವದಲ್ಲಿ ಈ ಕುರಿತು ನಿರ್ಣಯ ಕೈಗೊಂಡರು.

ನಗರದ ಹೊರವಲಯದಲ್ಲಿರುವ ಭೂತರಾಮನಹಟ್ಟಿಯಲ್ಲಿರುವ ಶ್ರೀಕ್ಷೇತ್ರ ಪಂಚಗ್ರಾಮ ಮುಕ್ತಿಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಧಾರವಾಡ, ಬೆಳಗಾವಿ, ಉತ್ತರಕನ್ನಡ ಹಾಗೂ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲಾ ಘಟಕಗಳ ಪದಾಧಿಕಾರಿಗಳ ವಿಭಾಗೀಯ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಶಿವಾಚಾರ್ಯ ಶ್ರೀಗಳು ಈ ನಿರ್ಣಯ ಕೈಕೊಂಡರು. ವೀರಶೈವ-ಲಿಂಗಾಯತ ಧರ್ಮದ ಅಖಂಡತೆಗೆ ಭಕ್ತಗಣದಲ್ಲಿ ನಿರಂತರ ಜಾಗೃತಿ ಮೂಡಿಸಲು ಪಂಚಪೀಠಗಳ ಶಾಖಾಮಠಗಳ ಅನೇಕ ಶಿವಾಚಾರ್ಯ ಶ್ರೀಗಳವರು ಸಂಕಲ್ಪ ಮಾಡಿ ಸರ್ವಾನುಮತದ ನಿರ್ಣಯ ಅಂಗೀಕರಿಸಿದರು.

ಸೆ.19 ರಂದು ಹುಬ್ಬಳ್ಳಿಯಲ್ಲಿ ಜರಗುವ ವೀರಶೈವ ಲಿಂಗಾಯತ ಏಕತಾ ಸಮಾವೇಶಕ್ಕೆ ನಾಲ್ಕು ಜಿಲ್ಲೆಯ ಶಿವಾಚಾರ್ಯರ ಬೆಂಬಲ ನೀಡಿದರು. ಅಲ್ಲದೆ, ಸೆ.22ರಿಂದ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ನಿರ್ಣಯ ಅಂಗೀಕರಿಸಿದಂತೆ ಎಲ್ಲಾ ವೀರಶೈವ-ಲಿಂಗಾಯತರು ಸಮೀಕ್ಷೆ ನಮೂನೆಯ ಅನುಸೂಚಿಯಲ್ಲಿಯ ಧರ್ಮದ ಕಾಲಂ ಅಡಿಯಲ್ಲಿ ಇತರೇ ಎಂದು ಹೇಳಿರುವ ಕಾಲಂದಲ್ಲಿ ತಪ್ಪದೇ ವೀರಶೈವ-ಲಿಂಗಾಯತ ಎಂದೇ ನಮೂದಿಸಬೇಕು. ಜಾತಿಯ ಕಾಲಂದಲ್ಲಿಯೂ ವೀರಶೈವ-ಲಿಂಗಾಯತ ಎಂದೇ ಬರೆಸುವಂತೆ ಅಖಿಲ ಭಾರತ ವೀರಶೈವ ಮಹಾಸಭಾ ಕೈಕೊಂಡ ನಿರ್ಣಯವನ್ನು ಶಿವಾಚಾರ್ಯ ಶ್ರೀಗಳ ಈ ಸಮಾವೇಶವು ಎತ್ತಿಹಿಡಿದು ಅನುಮೋದಿಸಿದೆ ಎಂದು ಸ್ವೀಕರಿಸಿದ ಮತ್ತೊಂದು ನಿರ್ಣಯದಲ್ಲಿ ತಿಳಿಸಲಾಗಿದೆ.

Home add -Advt

ಕೆಲವೇ ಕೆಲವು ಮಠಾಧೀಶರು ಸಮಾಜದಲ್ಲಿ ದ್ವಂದ್ವಗಳನ್ನು ಹುಟ್ಟುಹಾಕಿ ವೀರಶೈವವೇ ಬೇರೆ, ಲಿಂಗಾಯತವೇ ಬೇರೆ ಎಂದು ಭಕ್ತ ಸಮುದಾಯದ ಮನಸ್ಥಿತಿ ಸಂಕೀರ್ಣವಾಗುವಂತೆ ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ ಧರ್ಮದ ಮೂಲವಾಹಿನಿಯ ಶ್ರೀಜಗದ್ಗುರು ಪಂಚಪೀಠಗಳ ಪ್ರಾಚೀನ ಗುರುಪರಂಪರೆಗೆ ಧಕ್ಕೆ ಉಂಟು ಮಾಡುವಲ್ಲಿ ನಿರತರಾಗಿದ್ದಾರೆ. ಅದಕ್ಕಾಗಿ ಸೆ.19ರಂದು ಹುಬ್ಬಳ್ಳಿ ಮಹಾನಗರದಲ್ಲಿ ಹಮ್ಮಿಕೊಂಡಿರುವ ವೀರಶೈವ-ಲಿಂಗಾಯತ ಏಕತಾ ಸಮಾವೇಶವನ್ನು ಬೆಂಬಲಿಸಿ ಶ್ರೀಜಗದ್ಗುರು ಪಂಚಪೀಠಗಳ ಶಾಖಾಮಠಗಳ ಎಲ್ಲಾ ಶಿವಾಚಾರ್ಯ ಶ್ರೀಗಳವರು ಹುಬ್ಬಳ್ಳಿ ಸಮಾವೇಶದಲ್ಲಿ ಪಾಲ್ಗೊಳ್ಳುವ ಒಕ್ಕೊರಲಿನ ಮತ್ತೊಂದು ನಿರ್ಣಯವನ್ನು ಸಮಾವೇಶ ಕೈಕೊಂಡಿತು.

ಬಾಗೋಜಿಕೊಪ್ಪ, ಬಿಚಗುತ್ತಿ ಹರಲಾಪುರ, ಹಳೆ ಹುಬ್ಬಳಿ, ಶಿವಾಪುರ, ಸತ್ತಿಗೇರಿ, ಸಂಗೊಳ್ಳಿ, ಸುತಗಟ್ಟಿ, ಮಾವಿನಕಟ್ಟಿ, ಶರಣಮಟ್ಟಿ, ಮಮದಾಪುರ, ಹೂಲಿ, ಮುತ್ನಾಳ, ಬನ್ನೂರ, ಪಾಶ್ಚಾಪುರ, ಕಬ್ಬೂರ, ಮುಳ್ಳೂರು, ಉಳ್ಳಾಗಡ್ಡಿ ಖಾನಾಪುರ, ನವಲಗುಂದ, ಹಿರೇಮುನ್ನಳ್ಳಿ, ಬ್ಯಾಹಟ್ಟಿ, ಅಮ್ಮಿನಬಾವಿ ಸೇರಿದಂತೆ ಸುಮಾರು 100 ಜನ ಶಿವಾಚಾರ್ಯರು ಉಪಸ್ಥಿತರಿದ್ದರು.

Related Articles

Back to top button