ಪ್ರಗತಿ ವಾಹಿನಿ ಸುದ್ದಿ, ಅಥಣಿ: ಟಿಪ್ಪರ್ ವಾಹನದ ಲಕ್ಷಾಂತರ ರೂ. ಬೆಲೆ ಬಾಳುವ 6 ಟಯರ್‍ಗಳನ್ನು ಕಳುವು ಮಾಡಿದ್ದ ಆರೋಪಿಯನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ. ಅಥಣಿ ತಾಲೂಕಿನ ಅನಂತಪೂರ ಗ್ರಾಮದ ದಶರಥ ತೈಲಾರ್ ಬಂಧಿತ ಆರೋಪಿ.
ಈತನು ಒಂದು ತಿಂಗಳ ಹಿಂದೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣ ಬಡಾವಣೆಯ ಕಾಂಕ್ರಿಟ್ ಮಿಕ್ಸಿಂಗ್ ಪ್ಲಾಂಟ್‍ನಲ್ಲಿ ನಿಲ್ಲಿಸಿದ್ದ ರಾಜು ಆಲಬಾಳ ಎಂಬುವವರ ಟಿಪ್ಪರ್ ವಾಹನದ ಒಟ್ಟು 2.40 ಲಕ್ಷ ರೂ. ಬೆಲೆ ಬಾಳುವ 6 ಟಯರ್‍ಗಳನ್ನು ಡಿಸ್ಕ್ ಸಮೇತ ಕಳುವು ಮಾಡಿದ್ದ.
ಬೆಳಗಾವಿ ಎಸ್‍ಪಿ ಸಂಜೀವ ಪಾಟೀಲ್ ನೇತೃತ್ವದಲ್ಲಿ ಅಥಣಿ ಡಿವೈಎಸ್‍ಪಿ ಶ್ರೀಪಾದ ಜಲ್ದೆ ಮತ್ತು ತಂಡ ಪ್ರಕರಣದ ತನಿಖೆ ಕೈಗೊಂಡಿತ್ತು. ಭಾನುವಾರ ಜತ್ತ ಜಾಂಬೋಟಿ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಕಂಡುಬಂದ ಆರೋಪಿಯನ್ನು ತಡೆದು ವಿಚಾರಣೆ ನಡೆಸಿದಾಗ ಈತ ಟಯರ್‍ಗಳನ್ನು ಕಳುವು ಮಾಡಿದ್ದು ಪತ್ತೆಯಾಗಿದೆ.
ಆರೋಪಿಯಿಂದ ಒಟ್ಟು 2.40 ಲಕ್ಷ ರೂ. ಮೌಲ್ಯದ ಟಯರ್‍ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು 2.60 ಲಕ್ಷ ರೂ. ಮೌಲ್ಯದ ಗೂಡ್ಸ್ ವಾಹನ ಸೇರಿದಂತೆ ಒಟ್ಟು ಸುಮಾರು 5 ಲಕ್ಷ ರೂ. ಮೌಲ್ಯದ ಸ್ವತ್ತನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
*ನಾಳೆ ಬೆಳಗಾವಿಗೆ ಬೊಮ್ಮಾಯಿ, ಯಡಿಯೂರಪ್ಪ, ಕೇಂದ್ರ ಹಾಗೂ ರಾಜ್ಯದ ಹಲವು ಸಚಿವರು ಸೇರಿ ಗಣ್ಯರ ದಂಡು*
https://pragati.taskdun.com/many-dignitaries-will-coming-to-belagavi-on-monday-including-the-cm/
*ಕರ್ನಾಟಕ ಪತ್ರಕರ್ತೆಯರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ; ಪದಾಧಿಕಾರಿಗಳ ಅವಿರೋಧ ಆಯ್ಕೆ*
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ