ಪ್ರಗತಿವಾಹಿನಿ ಸುದ್ದಿ: ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತದ ಬೈಠಕ ಆಗಸ್ಟ 16, 17 ಮತ್ತು 18 ರಂದು ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಶ್ರೀ ಬೀರೇಶ್ವರ ಭವನದಲ್ಲಿ ಯಶಸ್ವಿಯಾಗಿ ಜರುಗಿತು.
ಈ ಬೈಠಕ್ ನಲ್ಲಿ 18 ಜಿಲ್ಲೆಯ ಪದಾಧಿಕಾರಿಗಳು ಭಾಗವಹಿಸಿದ್ದರು. ವಿ.ಹಿಂ.ಪ. ಕೇಂದ್ರೀಯ ಸಂಯುಕ್ತ ಮಹಾಮಂತ್ರಿಗಳು ಸ್ಥಾನುಮಲಯನ್ ಜಿ ಭಾಗವಹಿಸಿ ಮಾರ್ಗದರ್ಶನ ಮಾಡಿದರು. ಶ್ರೀ ಬೀರೇಶ್ವರ ಭವನ ಆವರಣದಲ್ಲಿ ವೃಕ್ಷಾರೋಪನ ಮಾಡಿದರು. ಪರಿಸರ ಸಂರಕ್ಷಣೆ, ಸಂವರ್ಧನೆ ಕುರಿತು ಸ್ಥಾನುಮಲಯನ್, ಸಸಿಗಳನ್ನು ಬೆಳಸಿದಷ್ಟು ನಾಡಿನ ಬದುಕು ಸುಂದರ. ಪ್ರಕೃತಿ ಮಾತೆಯ ಮಡಿಲಲ್ಲಿರುವ ನಾವು ಗಿಡಗಳನ್ನು ನೆಟ್ಟು, ಅದನ್ನು ಪೋಷಿಸಬೇಕು. ಪ್ರತಿಯೊಬ್ಬರೂ ಗಿಡಮರ ಬೆಳೆಸುವ ಜವಾಬ್ದಾರಿ ಹೊಂದಿ, ಭೂಮಿಯನ್ನು ತಂಪಾಗಿಸಲು ನಾವೆಲ್ಲರೂ ಶ್ರಮಿಸೋಣ ಎಂದರು.
ಈ ಸಭೆಯಲ್ಲಿ ವಿ.ಹಿಂ.ಪ. ಕರ್ನಾಟಕ ಉತ್ತರ ಪ್ರಾಂತ ಉಪಾಧ್ಯಕ್ಷರಾದ ಗೋವರ್ಧನರಾವ್, ಕ್ಷೇತ್ರೀಯ ಸತ್ಸಂಗ ಪ್ರಮುಖರಾದ ಮಹಾಬಳೇಶ್ವರ, ಕರ್ನಾಟಕ ಉತ್ತರ ಪ್ರಾಂತ, ವಿ.ಹಿಂ.ಪ. ಕಾರ್ಯದರ್ಶಿಗಳು ಶಿವಕುಮಾರ ಬೊಳಶೆಟ್ಟಿ, ಕ್ಷೇತ್ರೀಯ ಮಠಮಂದಿರ ಅರ್ಚಕ ಪುರೋಹಿತ ಪ್ರಮುಖರಾದ ಬಸವರಾಜ, ರಾಚಪ್ಪ ಬಾಗಿ ಕರ್ನಾಟಕ ಉತ್ತರ ಪ್ರಾಂತ ಗೋರಕ್ಷಾ ಪ್ರಮುಖರಾದ ವಿಠ್ಠಲ ಹಾಗೂ ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ನಿಪ್ಪಾಣಿ ಶಾಸಕರಾದ ಶಶಿಕಲಾ ಜೊಲ್ಲೆ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ