ಮಕ್ಕಳ ಶಿಕ್ಷಣದ ಕಾಳಜಿ ತೋರಿದ ಸಂತ್ರಸ್ತರು
ಪ್ರಗತಿವಾಹಿನಿ ಸುದ್ದಿ, ಅಥಣಿ –
ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅಥಣಿ ತಾಲೂಕಿನ ವಿವಿಧ ಪ್ರವಾಹ ಸಂತ್ರಸ್ತರ ಕೇಂದ್ರಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿದರು. ಅಲ್ಲದೆ ಪ್ರವಾಹ ಪರಿಹಾರ ಸಾಮಗ್ರಿಗಳು ಸಮರ್ಪಕವಾಗಿ ವಿತರಣೆಯಾಗುತ್ತಿರುವ ಕುರಿತು ಪರಿಶೀಲನೆ ನಡೆಸಿದರು.
ಶಾಲೆಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರು, ತಮ್ಮನ್ನು ಬೇರೆ ಕಡೆ ಸ್ಥಳಾಂತರಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವುಮಾಡಿಕೊಡಬೇಕೆಂದು ವಿನಂತಿಸಿದರು. ತಾವು ಸಂಕಷ್ಟದಲ್ಲಿದ್ದರೂ ಮಕ್ಕಳ ಶಿಕ್ಷಣದ ಬಗ್ಗೆ ಅವರ ಕಾಳಜಿಗೆ ಕವಟಗಿಮಠ ಶ್ಲಾಘನೆ ವ್ಯಕ್ತಪಡಿಸಿದರು.
ಅಥಣಿ ತಾಲೂಕಿನ ಕೃಷ್ಣಾ ಸಕ್ಕರೆ ಕಾರ್ಖಾನೆಯಲ್ಲಿ ಇರುವ ಹುಲಗಬಾಳ ಹಾಗೂ ಕರ್ಲಟ್ಟಿ ಗ್ರಾಮಗಳ ನೆರೆ ಸಂತ್ರಸ್ತರ ಕೇಂದ್ರಕ್ಕೆ ಮಹಾಂತೇಶ ಮ ಕವಟಗಿಮಠ ಭೇಟಿ ನೀಡಿ ನೆರೆ ಸಂತ್ರಸ್ಥರ ಸಾಂತ್ವನ ಹೇಳಿದರು. ಸಂತ್ರಸ್ಥರಿಗೆ ನೀಡುವ ಆಹಾರ, ಔಷಧ, ದನಗಳಿಗೆ ಮೇವು ಪರೀಶಿಲಿಸಿ ಸಮರ್ಪಕವಾಗಿ ಸಂತ್ರಸ್ತರಿಗೆ ತಲಪುತ್ತಿರುವ ಬಗ್ಗೆ ಪರಿಶಿಲಿಸಿದರು. ಈ ವೇಳೆ ಕಾರಖಾನೆಯ ಅಧ್ಯಕ್ಷ ಪರಪ್ಪ ಸವದಿ, ಉಪಾಧ್ಯಕ್ಷ ಜೊತಿಗೌಡಾ ಪೋಲಿಸ್ ಪಾಟೀಲ್ , ನೀರ್ದೇಶಕರಾದ ಶಾಂತು ನಂದೇಶ್ವರ, ಅಣ್ಣಾಸಾಬ ಪಾಟೀಲ ಜುಗಳ, ,ಮಮದಾಪುರ ಮೊದಲಾದವರಿದ್ದರು.
ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದ ಹತ್ತಿರ ಶಾಲೆಯಲ್ಲಿ ಇರುವ ಸಪ್ತಸಾಗರ, ತೀರ್ಥ, ನದಿ ಇಂಗಳಗಾಂವ್ ಹಾಗೂ ದರೂರ ಗ್ರಾಮಗಳ ನೇರೆ ಸಂತ್ರಸ್ತರ ಗಂಜಿ ಕೇಂದ್ರಕ್ಕೆ ಮಾಜಿ ಸಚಿವ ಲಕ್ಷ್ಮಣ ಸವದಿ ಜೊತೆಗೆ ಕವಟಗಿಮಠ ಭೇಟಿ ನೀಡಿದ್ದರು.
ಈ ವೇಳೆ ಸಂತ್ರಸ್ಥರು ತಮಗೆ ಬೇರೆ ಕಡೆ ಗ್ರಾಮಗಳನ್ನು ಸ್ಥಳಾಂತರಿಸಿ ಶಾಶ್ವತ ಸೂರು ಕಲ್ಪಿಸುವಂತೆ ಕೋರಿದರು. ಶಾಲೆಗಳು ಪ್ರಾರಂಭವಾಗಿದ್ದು ನಮ್ಮನ್ನು ಬೇರೆ ಕಡೆ ಸ್ಥಳಾಂತರಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕೇಂದು ಹೇಳಿ ಸಂತ್ರಸ್ಥರು ತಾವು ಕಷ್ಟದಲ್ಲಿ ಇದ್ದರು ಕೂಡಾ ಮಕ್ಕಳ ಶಿಕ್ಷಣದ ಬಗ್ಗೆ ತಮ್ಮ ಕಾಳಜಿ ತೋರಿಸಿದರು. ಈ ವೇಳೆ ಬಿಜೆಪಿ ಮುಖಂಡರಾದ ಶಿವಣ್ಣಾ ಹಂಜಿ, ಅಥಣಿ ಬಿಜೆಪಿ ಬ್ಲಾಕ್ ಅಧ್ಯಕ್ಷ ಶ್ರೀಶೈಲ ನಾಯಿಕ, ಮುಂಖಡ ಶಿವಾನಂದ ನಾಯಿಕ ಉಪಸ್ಥಿತರಿದ್ದರು.
ಜೀರೋ ಪಾಯಿಂಟ್ ನಲ್ಲಿ ಇರುವ ಜನವಾಡ, ಮಹಿಷಿವಾಡಗಿ,ನಂದೇಶ್ವರ ಗ್ರಾಮದ ನೇರೆ ಸಂತ್ರಸ್ತರ ಗಂಜಿ ಕೇಂದ್ರಕ್ಕೆ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಅಗಿಮಿಸಿದ್ದರು. ಅವರ ಜೊತೆ ಕವಟಗಿಮಠ, ಲಕ್ಷ್ಮಣ ಸವದಿ ಸಹ ಸಂತ್ರಸ್ತರ ಪುನರ್ವಸತಿ ಪರಿಶೀಲಿಸಿದರು.
ಚಿಕ್ಕೋಡಿ ಪಟ್ಟಣದಲ್ಲಿ ನಿಡಸೋಸಿಯ ಶ್ರಿ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಚಿಕ್ಕೋಡಿಯ ಶ್ರೀ ಸಂಪಾದನಾ ಮಹಾಸ್ವಾಮಿಗಳು ಚಿಂಚಣಿಯ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳ ಸಮ್ಮುಖದಲ್ಲಿ ಮಹಾಂತೇಶ ಮ.ಕವಟಗಿಮಠ ಹಾಗೂ ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾ ಸಾಹೇಬ ಜೊಲ್ಲೆ ನೇತೃತ್ವದಲ್ಲಿ ಚಿಕ್ಕೋಡಿ ನಾಗರಿಕರು, ಪುರಸಭೆಯ ಸದಸ್ಯರು ಹಾಗು ಸಾರ್ವಜನಿಕ ರು ನೆರೆ ಸಂತ್ರಸ್ಥರಿಗಾಗಿ ಪಾದಯಾತ್ರೆ ನಡೆಸಿದರು. ಈ ವೇಳೆ ಸಾರ್ವಜನಿಕರು ತಮ್ಮ ತನುಮನ ಧನದಿಂದ ಸಹಾಯ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ