Latest

ಖಾಸಗಿ ವಿಡಿಯೋ ಸೆರೆ; ಪ್ರೇಮಿಗಳಿಬ್ಬರ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಜೋಡಿ ಅರೆಸ್ಟ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪ್ರೇಮಿಗಳಿಬ್ಬರ ಖಾಸಗಿ ವಿಡಿಯೋ ಸೆರೆಹಿಡಿದು ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಜೋಡಿಯನ್ನು ಬೆಂಗಳೂರಿನ ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಉಷಾ ಹಾಗೂ ಸುರೇಶ್ ಬಾಬು ಎಂದು ಗುರುತಿಸಲಾಗಿದೆ. ಯಲಹಂಕದ ಬಳಿಯ ಹೋಟೆಲ್ ಗೆ ಭೇಟಿ ನೀಡಿದ್ದ ಈ ಜೋಡಿ ಹೋಟೆಲ್ ನಲ್ಲಿ ರೂಮ್ ಪಡೆದು ಯಾರಿಗೂ ಗೊತ್ತಾಗದಂತೆ ಕ್ಯಾಮರಾ ಅಳವಡಿಸಿ ತೆರಳಿದ್ದರು. ಇದೇ ರೂಮಿಗೆ ಬಂದಿದ್ದ ಪ್ರೇಮಿಗಳಿಬ್ಬರ ಖಾಸಗಿ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಮತ್ತದೇ ಹೋಟೆಲ್ ಗೆ ಹೋಗಿ ಅದೇ ರೂಮ್ ಬುಕ್ ಮಾಡಿದ್ದ ಜೋಡಿ, ಕ್ಯಾಮರಾದಲ್ಲಿ ಸೆರೆಯಾಗಿದ್ದ ಪ್ರೇಮಿಗಳ ವಿಡಿಯೋವನ್ನು ಇಟ್ಟುಕೊಂಡು ವಾಟ್ಸಪ್ ಮಾಡಿ ಬರೋಬ್ಬರಿ 25 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಒಂದು ವೇಳೆ ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ಬ್ಲ್ಯಾಕ್ ಮೇಲ್ ಮಾಡಿದ್ದರು.

ಬ್ಲ್ಯಾಕ್ ಮೇಲ್ ಗೆ ಬೇಸತ್ತ ಪ್ರೇಮಿಗಳು ಅನಿವಾರ್ಯವಾಗಿ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಜೋಡಿಯನ್ನು ಪೊಲೀಸರು ಬಂಧಿಸಿದ್ದು, ಇವರು ಕೂಡ ಪ್ರೇಮಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.
ಸ್ನೇಹಿತೆಯ ತುಟಿಗೆ ಮುತ್ತಿಟ್ಟು ಹುಕ್ಕಾ ಹೊಗೆ ಬಿಟ್ಟ ಸ್ಯಾಂಡಲ್ ವುಡ್ ನಟಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button