Latest

ಶಿಕ್ಷಣ ಸಚಿವರ ಮಹತ್ವದ ವಿಡೀಯೋ ಕಾನ್ಫರೆನ್ಸ್: ಶಿಕ್ಷಕರು, ಅಧಿಕಾರಿಗಳಿಗೆ ಹಲವು ಮಾರ್ಗಸೂಚಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ, ಪ್ರಧಾನ ಕಾರ್ಯದರ್ಶಿಗಳು ಹಾಗೂ  ಆಯುಕ್ತರ ಉಪಸ್ಥಿತಿಯಲ್ಲಿ ಆಗಸ್ಟ್ 23ರಿಂದ 9ನೇ ತರಗತಿಯಿಂದ ಶಾಲಾ ಪ್ರಾರಂಭದ ಬಗ್ಗೆ ಬುಧವಾರ ವಿಡಿಯೋ ಕಾನ್ಪರೆನ್ಸ್‌  ನಡೆಯಿತು.
 ಮುಖ್ಯಾಂಶಗಳು 
*SOP ಕಟ್ಟುನಿಟ್ಟಾಗಿ ಪಾಲಿಸಬೇಕು
*ಶಾಲೆ ಹಾಗೂ ಶೌಚಾಲಯ ಸ್ವಚ್ಛವಾಗಿರಬೇಕು
*ಪ್ರತಿ ಅಧಿಕಾರಿಗಳು ಕನಿಷ್ಟ 50 ಶಾಲೆಗಳಿಗೆ ಭೇಟಿ ನೀಡಬೇಕು
*SOP ಯನ್ನು ಪ್ರತಿಯೊಬ್ಬರು ತಪ್ಪದೆ ಓದಬೇಕು
*ಪೋಷಕರಿಗೆ ಧೈರ್ಯ ತುಂಬಬೇಕು
* ಕಲಿಕೆಯ ನಷ್ಟ ಪ್ರಮಾಣ ಶೇ 80 ರಷ್ಟು ಇರುತ್ತದೆ
*online ತರಗತಿಯಿಂದ ಸಂಪೂರ್ಣ ಕಲಿಕೆಯಾಗಿರುವುದಿಲ್ಲ, ಆದರೂ ಸ್ವಲ್ಪ ಮಟ್ಟಿಗೆ ಕಲಿಕೆ ಉಂಟಾಗಿದೆ.
*Bridge course classes* – ಭೌತಿಕ ತರಗತಿಗಳ ಪ್ರಾರಂಭದ ದಿನದಿಂದ 15 ರಿಂದ 20 ದಿನಗಳವರೆಗೆ ಪುನರ್ ಮನನ ತರಗತಿಯಾಗಬೇಕು
* ಎಲ್ಲಾ ಪ್ರೌಢಶಾಲೆಗಳಲ್ಲಿ sanitization ಆಗಿರಬೇಕು
*sanitization ಆಗಿ ಕನಿಷ್ಟ ಎರಡು ದಿನಗಳು ಆಗಿರಬೇಕು
*ಶುಕ್ರವಾರದ ಒಳಗೆ ಎಲ್ಲ ಪ್ರೌಢಶಾಲೆಗಳಲ್ಲಿ (Govt/aided/unaided/central schools ) sanitization ಆಗಿರಬೇಕು
* ಶಾಲೆಯ ಎಲ್ಲ ಸಿಬ್ಬಂದಿಗಳಿಗೂ ಲಸಿಕೆ (vaccination) ಆಗಿರಬೇಕು
*ಖಾಸಗಿ ಶಾಲೆಗಳ ವಾಹನ ಚಾಲಕರಿಗೂ ಲಸಿಕೆ ಹಾಕಿಸಿರಬೇಕು*
* vaccination is mandatory for all staff of  the schools
* ಲಸಿಕೆ ಹಾಕಿಸಿಕೊಳ್ಳದಿದ್ದರೂ ಶಾಲೆಗೆ ಶಿಕ್ಷಕರ ಹಾಜರಿ ಕಡ್ಡಾಯ , ಶಾಲಾ ಸಿಬ್ಬಂದಿಯನ್ನು frontline warrior ಎಂದು ಪರಿಗಣಿಸಿರುವುದರಿಂದ ಎಲ್ಲರೂ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕು.
*ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಯಾರು ಲಸಿಕೆ ಪಡೆದಿಲ್ಲವೂ ಅಂತಹ ಉಪನ್ಯಾಸಕರನ್ನು ಕಡ್ಡಾಯ ರಜೆಯ ಮೇಲೆ ಕಳಿಸಲಾಗುವುದು ಎಂದು ಪದವಿ ಪೂರ್ವ ಕಾಲೇಜು ಶಿಕ್ಷಣದ ನಿರ್ದೇಶಕರು ತಿಳಿಸಿದರು.*
*ಪ್ರತಿ ದಿನ ಶಾಲಾ ಪ್ರರಂಭದ ಮಾಹಿತಿಯನ್ನು ಕ್ರೋಢೀಕರಿಸಿ ಆಯುಕ್ತರ ಕಛೇರಿಗೆ ಸಲ್ಲಿಸಬೇಕು
*ಯಾವುದೆ ವಿಧವಾದ ಶಾಲೆಯಲ್ಲೂ ಪೂರ್ಣ ಪ್ರಮಾಣ ಅವಧಿಯ ಶಾಲೆ ನಡೆಸಬಾರದು , ಯಾರೆ ಉಲ್ಲಂಘನೆ ಮಾಡಿದರೂ ಸಕ್ಷಮ ಪ್ರಾಧಿಕಾರ ಅವರ ಮೇಲೆ ಶಿಸ್ತು ಕ್ರಮ ತೆಗದುಕೊಳ್ಳುತ್ತದೆ.*
* ಪ್ರೌಢ ಶಾಲೆಗಳ ಪ್ರಾರಂಭದ ಯಶಸ್ಸಿನ ಮೇಲೆ ಪ್ರಾಥಮಿಕ ಶಾಲೆಗಳ ಪ್ರಾರಂಭ ಅವಲಂಬಿತವಾಗಿರುತ್ತದೆ
* ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ  COVID-1 , COVID -2 ಮತ್ತು ಪ್ರಸ್ತುತ COVID ಪಾಸಿಟೀವ್ ರೇಟ್ ಸಂಗ್ರಹ ಮಾಡುವುದು
* 2% ಗಿಂತ ಪಾಸಿಟೀವ್ ರೇಟ್ ಹೆಚ್ಚು ಇರುವ ಜಿಲ್ಲೆಗಳಲ್ಲಿ ಶಾಲೆ ಪ್ರಾರಂಭವಿರುವುದಿಲ್ಲ
* Hostel ಗಳು ಪ್ರಾರಂಭವಿರುವುದಿಲ್ಲ, ಆದರೆ hostel ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ತಮ್ಮ ಸಮೀಪವಿರುವ ಶಾಲೆಗಳಿಗೆ ಭೌತಿಕ ತರಗತಿಗಳಿಗೆ ಹಾಜರಾಗಬಹುದು*
*1ನೇ ತರಗತಿಯಿಂದ 8ನೇ ತರಗತಿ ಪ್ರಾರಂಭಕ್ಕೆ  ವಿದ್ಯಾರ್ಥಿಗಳ ಪೋಷಕರ ಅಭಿಪ್ರಾಯ ಸಂಗ್ರಹಿಸುವುದು(ಇದಕ್ಕೆ ಸಂಬಂಧಿಸಿದಂತೆ ಸುತ್ತೋಲೆ ನೀಡುತ್ತಾರೆ)
*August 30 ರ ನಂತರ ಎಲ್ಲ ವಿಧವಾದ ಶಾಲೆಗಳನ್ನು ಪ್ರಾರಂಭ ಮಾಡುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ*.
*ಪ್ರೌಢ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ಮಾಹಿತಿ ನೀಡುವುದು

ಬಹುತೇಕ ಜಿಲ್ಲೆಗಳಲ್ಲಿ ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್; ಸಧ್ಯಕ್ಕಿಲ್ಲ ಲಾಕ್ ಡೌನ್ – ಬೊಮ್ಮಾಯಿ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button