ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಲಾಕ್ಕಾಚಾರದಲ್ಲಿ ತೊಡಗಿದ್ದರೆ, ಜೆಡಿಎಸ್ 93 ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ದಳಪತಿಗಳು ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ್ದಾರೆ. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸಮ್ಮುಖದಲ್ಲಿ 93 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಿದ್ದಾರೆ.
ಚೆನ್ನಪ್ಪಟ್ಟಣದಿಂದ – ಹೆಚ್ ಡಿ ಕುಮಾರಸ್ವಾಮಿ
ರಾಮನಗರ ನಿಖಿಲ್ ಕುಮಾರಸ್ವಾಮಿ
ಗುಬ್ಬಿ-ನಾಗರಾಜ್
ಗೋವಿಂದರಾಜನಗರ- ಆರ್ ಪ್ರಕಾಶ್
ರಾಜಾಜಿನಗರ – ಗಂಗಾಧರ ಮೂರ್ತಿ
ಶೃಂಗೇರಿ – ಸುದಾಕರ್ ಶೆಟ್ಟಿ
ತೀರ್ಥಹಳ್ಳಿ – ರಾಜಾರಾಮ್
ಭದ್ರಾವತಿ – ಶಾರದಾ ಅಪ್ಪಾಜಿಗೌಡ
ಮೂಡಿಗೆರೆ – ಬಿ.ಬಿ ನಿಂಗಯ್ಯ
ಖಾನಾಪುರ- ನಾಸಿರ್
ಮುದ್ದೇಬಿಹಾಳ – ಚೆನ್ನಬಸಪ್ಪ ಸೊಲ್ಲಾಪುರ
ಕೋಲಾರ – ಸಿ.ಎಂ.ಆರ್ ಶ್ರೀನಾಥ್
ದೇವರಹಿಪ್ಪರಗಿ – ರಾಜುಗೌಡ ಪಾಟೀಲ್
ಮೇಲುಕೋಟೆ – ಸಿ.ಎಸ್.ಪುಟ್ಟರಾಜು
ಶ್ರೀರಂಗಪಟ್ಟಣ – ರವಿಂದ್ರ ಶ್ರೀಕಂಠಯ್ಯ
ಕುಣಿಗಲ್ – ಡಿ ನಾಗರಾಜಯ್ಯ
ತುಮಕೂರು – ಗೋವಿಂದರಾಜು
ಮಧುಗಿರಿ- ವೀರಭದ್ರಯ್ಯ
ಚಿಕ್ಕಬಳ್ಳಾಪುರ-ಕೆ.ಪಿ.ಬಚ್ಚೇಗೌಡ
ಚಾಮುಂಡೇಶ್ವರಿ – ಜಿ.ಟಿ.ದೇವೇಗೌಡ
ಹುಣಸೂರು- ಹರೀಶ್ ಗೌಡ
ವರುಣಾ- ಅಭಿಷೇಕ
ಮದ್ದೂರು- ಡಿ.ಸಿ.ತಮ್ಮಣ್ಣ
ಬೀದರ್ ದಕ್ಷಿಣ-ಬಂಡೆಪ್ಪ ಕಾಂಶಪೂರ ಸೇರಿದಂತೆ ಒಟ್ಟು 93 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದಾರೆ.
*BREAKING: ಕಾಲೇಜು ಕಟ್ಟಡದಿಂದ ಜಿಗಿದ ವಿದ್ಯಾರ್ಥಿನಿ; ಅನುಮಾನಾಸ್ಪದವಾಗಿ ಸಾವು*
https://pragati.taskdun.com/bangalorelaw-studentdeathvv-puram-collage/
*ನಾವು ಹುಟ್ಟಿನಿಂದಲೇ ಹಿಂದುಗಳು, ಬಿಜೆಪಿಯವರಂತೆ ನಾಟಕೀಯ ಹಿಂದುತ್ವ ನಮ್ಮದಲ್ಲ ಎಂದ ಡಿ.ಕೆ. ಶಿವಕುಮಾರ್*
https://pragati.taskdun.com/belagavi-sessionsavarkar-photod-k-shivakumarcongress-protest/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ