ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ತಾಲೂಕಿನ ಜತ್ರಾಟ ಗ್ರಾಮದ ಸುಮಾರು 40ಕ್ಕೂ ಅಧಿಕ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆಯವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ತಾಲೂಕಿನ ಭಿವಶಿ ಗ್ರಾಮದಲ್ಲಿಯ ತಮ್ಮ ಕಾರ್ಯಾಲಯದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಪಕ್ಷಕ್ಕೆ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಪಕ್ಷದ ಶಾಲು ಹಾಕಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ‘ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಅಭಿವೃದ್ಧಿಪರ ಯೋಜನೆಗಳು, ಅಲ್ಲದೆ ಕ್ಷೇತ್ರದಲ್ಲಿ ಸುಮಾರು 2 ಸಾವಿರ ಕೋಟಿ ರೂ.ಗೂ ಅಧಿಕ ಅಭಿವೃದ್ಧಿ ಕಾರ್ಯಗಳಿಗೆ ಮೆಚ್ಚಿ ಇತರ ಪಕ್ಷದ ಕಾರ್ಯಕರ್ತರು ಬಿಜೆಪಿ ಪಕ್ಷದತ್ತ ವಾಲುತ್ತಿದ್ದಾರೆ’ ಎಂದರು.
ಜತ್ರಾಟ ಗ್ರಾಮದ ಸಾಹಿಲ್ ಕಾಂಬಳೆ, ಸುಹಾಸ ಕಾಂಬಳೆ, ರಣಜೀತ ಮೇಸ್ತ್ರಿ, ಆಕಾಶ ಮೇಸ್ತ್ರಿ, ಮೋಹನ ವರಾಳೆ, ರಾಜು ಕಾಂಬಳೆ, ಸಚಿನ ಕಾಂಬಳೆ, ಸಿದ್ಧಾರ್ಥ ಮೇಸ್ತ್ರಿ, ಪ್ರಫುಲ್ ಕಾಂಬಳೆ, ಸೂರಜ್ ಜಾಧವ, ಸುಧೀರ ಹೆಗಡೆ, ಅಮರ ಕಾಂಬಳೆ, ಸಚಿನ ಜಾಧವ, ಪ್ರವೀನ ಕಾಂಬಳೆ, ಮೊದಲಾದವರು ಸೇರಿದಂತೆ ಸುಮಾರು 40ಕ್ಕೂ ಅಧಿಕ ಕಾರ್ಯಕರ್ತರು ಬಿಜೆಪಿ ಪ್ರವೇಶ ಮಾಡಿದರು. ಸಚಿವೆ ಜೊಲ್ಲೆಯವರನ್ನು ಮತ್ತೊಮ್ಮೆ ಬಹುಮತಗಳಿಂದ ಚುನಾಯಿತಗೊಳಿಸಲಾಗುವುದೆಂದು ಎಂದು ಪ್ರವೇಶ ಮಾಡಿದ ಎಲ್ಲ ಕಾರ್ಯಕರ್ತರು ಏಕಕಾಲದಲ್ಲಿ ಘೋಷಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ