Kannada News

*ಬೆಳಗಾವಿ: ಬರೋಬ್ಬರಿ 26 ಕೋಟಿ 18 ಲಕ್ಷದ ನಗದು, ಚಿನ್ನ, ಬೆಳ್ಳಿ, ಇತರೆ ವಸ್ತುಗಳು ಜಪ್ತಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಾಳೆ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಚುನಾವಣಾ ಆಯೋಗ ಮತಗಟ್ಟೆಗಳಲ್ಲಿ ಅಂತಿಮ ಹಂತದ ತಯಾರಿ ನಡೆಸಿದೆ. ನೀತಿ ಸಂಹಿತೆ ಜಾರಿಯಾದ ಬಳಿಕ ಬೆಳಗಾವಿಯಲ್ಲಿ ಚುನಾವಣಾ ಆಯೋಗ ಅಪಾರ ಪ್ರಮಾಣದ ಅಕ್ರಮ ಹಣವನ್ನು ವಶಕ್ಕೆ ಪಡೆದಿದೆ.

ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಬೆಳಗಾವಿಯಲ್ಲಿ ಒಟ್ಟು 26 ಕೋಟಿ 18 ಲಕ್ಷದ ನಗದು, ಚಿನ್ನ, ಬೆಳ್ಳಿ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಜಿಲ್ಲೆಯ ವಿವಿಧ ಚೆಕ್ ಪೋಸ್ಟ್ ಗಳಲ್ಲಿ 7 ಕೋಟಿ 7 ಲಕ್ಷ ಹಣ, 2 ಕೋಟಿ 52 ಲಕ್ಷದ ಮಧ್ಯ, 6 ಲಕ್ಷ 29 ಸಾವಿರ ಮೌಲ್ಯದ ಡ್ರಗ್ಸ್ ಹಾಗೂ 1 ಕೋಟಿ 16 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

https://pragati.taskdun.com/siddaramaiahclarificationfake-latter/


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button