ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆಗೆ ಇನ್ನೊಂದು ದಿನ ಬಾಕಿಯಿದ್ದು, ರಾಜ್ಯದ ಮತಗಟ್ಟೆಗಳಲ್ಲಿ ಕೊನೇ ಹಂತದ ತಯಾರಿ ನಡೆದಿದೆ. ಮತದಾರರನ್ನು ಸೆಳೆಯಲು, ಪ್ರತೋಹಿಸುವ ನಿಟ್ಟಿನಲ್ಲಿ ಈ ಬಾರಿ ಚುನಾವಣಾ ಆಯೋಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಿವಿಧ ರೀತಿಯ ಥೀಮ್ ಮತಗಟ್ಟೆಗಳನ್ನು ಸ್ಥಾಪಿಸಿದೆ.
ಬೆಂಗಳೂರಿನಲ್ಲಿ ಹಲವು ರೀತಿಯ ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು, ಮತಗಟ್ಟೆ ಬೂತ್ ಗಳು ಮತದಾರರನ್ನು ಆಕರ್ಷಿಸುತ್ತಿವೆ. 28 ಕ್ಷೇತ್ರಗಳಲ್ಲಿ 264 ಥೀಮ್ ಮತಗಟ್ಟೆಗಳನ್ನು ಚುನಾವಣಾ ಆಯೋಗ ಸ್ಥಾಪಿಸಿದೆ.
ಯುವ ಮತದಾರರನ್ನು ಪ್ರೋತ್ಸಾಹಿಸಲು ಯುವ ಮತಗಟ್ಟೆ, ಮಹಿಳಾ ಮತದಾರರನ್ನು ಪ್ರೋತ್ಸಾಹಿಸಲು ಸಖಿ ಪಿಂಕ್ ಮತಗಟ್ಟೆ, ಪರಿಸರ ಜಾಗೃತಿಗಾಗಿ ಹಸಿರು ಮತಗಟ್ಟೆ, ಸಿರಿಧಾನ್ಯ ಪ್ರೋತ್ಸಾಹಕ್ಕಾಗಿ ಸಿರುಧಾನ್ಯ ಮತಗಟ್ಟೆ, ವಿಶೆಷ ಚೇತನರಿಗಾಗಿ ವಿಶೇಷ ಚೇತನ ಮತಗಟ್ಟೆ, ಸಂಸ್ಕೃತಿ ಮತಗಟ್ಟೆ, ವಿಜ್ಞಾನ ಮತ್ತು ತಂತ್ರಜ್ಞಾನ ಮತಗಟ್ಟೆ, ಮಾಜಿ ಸೈನಿಕರ ಮತಗಟ್ಟೆ, ತೃತಿಯ ಲಿಂಗಿ ಮತಗಟ್ಟೆ, ಕ್ರೀಡಾ ಮತಗಟ್ಟೆ ಸೇರಿದಂತೆ ವಿವಿಧ ರೀತಿಯ ಮತಗಟ್ಟೆಗಳು ಗಮನ ಸೆಳೆಯುತ್ತಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ