Politics

*ಬಂಡವಾಳ ವೆಚ್ಚದ ಬಗ್ಗೆ ಅಂಕಿ-ಅಂಶಗಳ ಸಮೇತ ವಿವರಿಸಿದ ಸಿಎಂ*

ಪ್ರಗತಿವಾಹಿನಿ ಸುದ್ದಿ: ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿಗಳ ಉತ್ತರ ನೀಡಿದರು. ಈ ವೇಳೆ ಬಂಡವಾಳ ವೆಚ್ಚದ ಬಗ್ಗೆ ಅಂಕಿ-ಅಂಶಗಳ ಸಮೇತ ಮಾಹಿತಿ ನೀಡಿದರು

ಬಂಡವಾಳ ವೆಚ್ಚ 71,336 ಕೋಟಿ ರೂ. ಅಲ್ಲ, 83,200 ಕೋಟಿ ರೂ.

53.​ಆರಗ ಜ್ಞಾನೇಂದ್ರ ರವರು ಆಯವ್ಯಯ ಪುಸ್ತಕದಲ್ಲಿ ಬಂಡವಾಳ ವೆಚ್ಚವನ್ನು ಕೆಲವೆಡೆ 71,336 ಕೋಟಿ ರೂ. ಮತ್ತು ಕೆಲವೆಡೆ 83,200 ಕೋಟಿ ರೂ. ಗಳು ಎಂದು ಹೇಳಿ ಸದನಕ್ಕೆ ಸರಿಯಾದ ಅಂಕಿ ಅಂಶಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ವಾಸ್ತವವೇನೆಂದರೆ, 2025-26 ನೇ ಸಾಲಿನಲ್ಲಿ ಬಂಡವಾಳ ಯೋಜನೆಗಳಿಎ ಒಟ್ಟು 83,200 ಕೋಟಿ ರೂ. ಒದಗಿಸಿದ್ದೇವೆ. ಇದರಲ್ಲಿ 71,336 ಕೋಟಿ ರೂ. ಸಂಚಿತ ನಿಧಿಯಿಂದ ಹಾಗೂ 11,864 ಕೋಟಿ ರೂ. ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಬಂಡವಾಳ ಯೋಜನೆಗಳಿಗೆ ಉದ್ದೇಶಿಸಿರುವ ರಿಸರ್ವ್ ಫಂಡ್‌ಗಳಿಂದ ಭರಿಸಲಾಗುತ್ತದೆ.

54.​ಅರವಿಂದ ಬೆಲ್ಲದ್ ಅವರು ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಕಡಿಮೆಯಾಗಿರುತ್ತದೆ ಎಂದಿದ್ದಾರೆ. ವಿರೋಧ ಪಕ್ಷದವರು ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ನಿಡಿರುವ ಅನುದಾನಗಳನ್ನು ಮಾತ್ರ ಪರಿಗಣಿಸಿದ್ದಾರೆ. ಆದರೆ ನಮ್ಮ ಸರ್ಕಾರವು ಸಮಾಜ ಕಲ್ಯಾಣ ಇಲಾಖೆಗಳಲ್ಲಿನ ವಸತಿ ಶಾಲೆಗಳು, ವಿದ್ಯಾರ್ಥಿ ವೇತನ, ವೈದ್ತಕೀಯ ಶಿಕ್ಷಣ, ಕೃಷಿ, ತೋಟಗಾರಿಕೆ ಕಾಲೇಜುಗಳು ಸೇರಿದಂತೆ 2025-26 ರಲ್ಲಿ 65043 ಕೋಟಿ ರೂ. ಗಳನ್ನು ಒದಗಿಸಿದೆ. ಒಟ್ಟಿ ವೆಚ್ಚದಲ್ಲಿ ಶೇ.16 ರಷ್ಟು ಹಂಚಿಕೆಯನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಿದ್ದೇವೆ.

Home add -Advt

55.​ಬಂಡವಾಳ ವೆಚ್ಚಗಳಿಗೆ ದಾಖಲೆ ಪ್ರಮಾಣದಲ್ಲಿ 83,200 ಕೋಟಿ ರೂ.ಗಳನ್ನು 2025-26ನೇ ಸಾಲಿಗೆ ಒದಗಿಸಿದೆ. ಇದು 2024-25ನೇ ಸಾಲಿನಲ್ಲಿ ಕೊಟ್ಟಿದ್ದ 56,495 ಕೋಟಿ ರೂ. ಗಳಿಗೆ ಹೋಲಿಸಿದರೆ ಶೇ.47.3 ರಷ್ಟು ಹೆಚ್ಚಾಗುತ್ತದೆ. ಜಿ.ಎಸ್.ಡಿ.ಪಿ.ಯಲ್ಲಿ ಬಂಡವಾಳ ವೆಚ್ಚದ ಪಾಲು ಶೇ.2.32 ರಷ್ಟು ಆಗುತ್ತದೆ.

ಇಲಾಖೆ
ಒದಗಿಸಿದ ಅನುದಾನ
ಕಳೆದ ವರ್ಷಕ್ಕೆ ಹೋಲಿಸಿದರೆ
ಜಲ ಸಂಪನ್ಮೂಲ
18,827 ಕೋಟಿ
ಶೇ.12 ರಷ್ಟು ಹೆಚ್ಚು
ಲೋಕೋಪಯೋಗಿ
11,841 ಕೋಟಿ
ಶೇ.14 ರಷ್ಟು ಹೆಚ್ಚು
ಸಣ್ಣ ನೀರಾವರಿ
2,945 ಕೋಟಿ
ಶೇ.50 ರಷ್ಟು ಹೆಚ್ಚು

56.​ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಮುಂದಿನ 3 ವರ್ಷಗಳಲ್ಲಿ 54,000 ಕೋಟಿ ಒದಗಿಸಿದೆ. 120 ಕಿ.ಮೀ. ಉದ್ದದ ಫ್ಲೆöÊಓವರ್, ಗ್ರೇಡ್ ಸೆಪರೇಟರ್, 320 ಕಿಮೀ ಉದ್ದದ ಹೊಸ ರಸ್ತೆ, ಡಬಲ್ ಡೆಕ್ಕರ್ ರಸ್ತೆಗಳು, 27,000 ಕೋಟಿ ರೂ.ವೆಚ್ಚದಲ್ಲಿ ಬ್ಯುಸಿನೆಸ್ ಕಾರಿಡಾರ್, ಭೂ-ಸುರಂಗ ರಸ್ತೆ ಇತ್ಯಾದಿಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದೇವೆ. ರಾಜ್ಯ ಸರ್ಕಾರ ಈ ವರ್ಷ 3,000 ಕೋಟಿ ರೂ.ಗಳ ಜೊತೆಗೆ ಹೆಚ್ಚುವರಿಯಾಗಿ 4000 ಕೋಟಿ ರೂ.ಗಳನ್ನು ಒದಗಿಸಿದ್ದು, ಒಟ್ಟಾರೆ 7000 ಕೋಟಿ ರೂ.ಗಳನ್ನು ಬೆಂಗಳೂರಿನ ಅಭಿವೃದ್ಧಿಗೆ ಒದಗಿಸುತ್ತಿದೆ.

57.​ಬೆಂಗಳೂರು ಹೊರತುಪಡಿಸಿ ಇತರೆ ನಗರಗಳಲ್ಲಿ ಉದ್ಯಮಶೀಲತೆ ಅಭಿವೃದ್ಧಿಪಡಿಸಲು 1,000 ಕೋಟಿ ರೂ. ಒದಗಿಸಲಾಗುತ್ತಿದೆ.

58.​ರಾಜ್ಯದ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಮೂಲಸೌಲಭ್ಯ ಅಭಿವೃದ್ಧಿ ಕಾರ್ಯಕ್ರಮದಡಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ರಸ್ತೆ, ಮೂಲಸೌಕರ್ಯ ಒದಗಿಸಲು 8,000 ಕೋಟಿ ರೂ.ಗಳನ್ನು ನೀಡಲಾಗಿದೆ.

59.​2025-26 ರ ಕೇಂದ್ರದ ಬಜೆಟ್‌ನಲ್ಲಿ 11.21 ಲಕ್ಷ ಕೋಟಿ ರೂ. ಬಂಡವಾಳ ವೆಚ್ಚಗಳಿಗೆ ಒದಗಿಸಿದ್ದಾರೆ. 2024-25 ರಲ್ಲಿ 11.11 ಲಕ್ಷ ಕೋಟಿ ರೂ. ನೀಡಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಕೇವಲ 9979 ಕೋಟಿ ರೂ ಅಥವಾ ಶೇ. 0.9 ರಷ್ಟನ್ನು ಮಾತ್ರ ಹೆಚ್ಚಿಸಿದ್ದಾರೆ.
ಆಯ-ವ್ಯಯ ಅಂದಾಜು ಮತ್ತು ಬೇಡಿಕೆ (ಕೆಲವು ಮುಖ್ಯ ಇಲಾಖೆಗಳ ಬೇಡಿಕೆ ಮತ್ತು ವೆಚ್ಚದ ವಿವರ) Budget Estimates and Demands (ರೂ. ಕೋಟಿಗಳಲ್ಲಿ)
ಕ್ರ..ಸಂ.
ಇಲಾಖೆ
2022-23 ರ ಪರಿಷ್ಕೃತ ಅನುದಾನ ಅಂದಾಜು
2025-26 ರ ಆಯವ್ಯಯ ಅಂದಾಜು
ವ್ಯತ್ಯಾಸ
1
ಪಶು ಸಂಗೋಪನೆ
2616
3342
726
2
ಪರಿಶಿಷ್ಟ ಜಾತಿಗಳ ಕಲ್ಯಾಣ
4945
6022
1077
3
ಪರಿಶಿಷ್ಟ ಪಂಗಡಗಳ ಕಲ್ಯಾಣ
1496
2081
585
4
ಹಿಂದುಳಿದ ವರ್ಗಗಳ ಕಲ್ಯಾಣ
2372
4014
1642
5
ಅಲ್ಪಸಂಖ್ಯಾತರ ಕಲ್ಯಾಣ
1495
4515
3020
6
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
4702
34184
29482
7
ನಗರಾಭಿವೃದ್ಧಿ
14399
16508
2109
8
ಲೋಕೋಪಯೋಗಿ
9624
9840
216
9
ಸಣ್ಣ ನೀರಾವರಿ
2568
3344
776
10
ಉನ್ನತ ಶಿಕ್ಷಣ
5526
5858
332
11
ಇಂಧನ
12655
26896
14241
12
ಆರೋಗ್ಯ
9472
12032
2560
13
ಒಳಾಡಳಿತ
9052
13045
3993
14
ತೋಟಗಾರಿಕೆ
1240
1532
292
15
ಗ್ರಾಮೀಣಾಭಿವೃದ್ಧಿ
17243
25440
8197
16
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ
25856
34438
8582

2022-23ನೇ ಸಾಲಿಗೆ ಹೋಲಿಸಿದರೆ 2025-26ನೇ ಸಾಲಿನಲ್ಲಿ ನಾವು ಇಲಾಖೆಗಳಿಗೆ ಗಣನೀಯ ಪ್ರಮಾಣದಲ್ಲಿ ಅನುದಾನಗಳನ್ನು ಒದಗಿಸಿದ್ದೇವೆ ಎಂಬುದು ಅಂಕಿ ಅಂಶಗಳಿಂದ, ದಾಖಲೆಗಳಿಂದ ಸಾಬೀತಾಗುತ್ತದೆ.

ಇಷ್ಟಾದರೂ ಆರ್ ಅಶೋಕ್ ಅವರಿಗೆ ನಮ್ಮ ಬಜೆಟ್‌ನಲ್ಲಿ ಯಾವುದೇ ದೂರದೃಷ್ಟಿ ಇಲ್ಲ; ತಕ್ಷಣದ ತಾತ್ಕಾಲಿಕ ಲಾಭಕ್ಕಾಗಿ ಘೋಷಿಸಲಾಗಿದೆ. ಆರ್ಥಿಕ ಬೇಜವಾಬ್ಧಾರಿಯಿಂದ ಕೂಡಿದೆ, ಅಭಿವೃದ್ಧಿಯತ್ತ ಗಮನ ಹರಿಸಿಲ್ಲ. ಆರ್ಥಿಕ ಬೆಳವಣಿಗೆಯನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ ಎಂಬ ರಾಜಕೀಯವಾಗಿ ಮಾತನಾಡಿದ್ದಾರೆ. ನಿಮ್ಮ ಭಾಷಣವು ಪೂರ್ವಗ್ರಹ ಪೀಡಿತವಾದ ಅಜೆಂಡಾ ಪ್ರೇರಿತವಾದದ್ದರಿಂದ ನಾವು ಒಳ್ಳೆಯ ಮಾತುಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ.

60.​ಬಜೆಟ್‌ನಲ್ಲಿ ನಮ್ಮ ಸರ್ಕಾರದ ಧ್ಯೇಯೋದ್ದೇಶಗಳ ಕುರಿತು ಬಜೆಟ್ ಭಾಷಣದ ಮೊದಲ ಪ್ಯಾರಾದಲ್ಲೆ ನಾವು ಸ್ಪಷ್ಟಪಡಿಸಿದ್ದೇವೆ. ಈ ಬಜೆಟ್ ಕೇವಲ ಅಂಕಿ ಸಂಖ್ಯೆಗಳ ಆಟವಲ್ಲ. ಇದು 7 ಕೋಟಿ ಜನರ ಬದುಕಿನ ಉಸಿರಿನ ಪ್ರತೀಕ ಎಂದು ಹೇಳಿದ್ದೇವೆ.

61.​ವಿರೋಧ ಪಕ್ಷದ ನಾಯಕರಾಗಿ ಅವರು ಮಾಡಿರುವ ಭಾಷಣ ಅವರೊಬ್ಬರ ಅನ್ನಿಸಿಕೆಯಲ್ಲ. ಅದು ಇಡೀ ವಿರೋಧ ಪಕ್ಷದವರ ಅಭಿಪ್ರಾಯ ಎಂದು ನಾವು ಭಾವಿಸುತ್ತೇವೆ.

ವಿವಿಧ ಕಲ್ಯಾಣ ಇಲಾಖೆಗಳಿಗೆ ಒದಗಿಸಿದ ಅನುದಾನಗಳ ವಿವರ
ವಿರೋಧ ಪಕ್ಷದವರು ಕಲ್ಯಾಣ ಇಲಾಖೆಗಳಿಗೆ ಈ ಸರ್ಕಾರ ಏನೂ ಕೊಟ್ಟಿಲ್ಲ ಎಂದಿದ್ದಾರೆ.
[ರೂ. ಕೋಟಿಗಳಲ್ಲಿ]​

ಅನುದಾನ
ಪಡೆದ ಇಲಾಖೆಗಳು​
2020-21 ರಿಂದ
2022-23 ರವರೆಗೆ
ಕೊಟ್ಟ
ಅನುದಾನ
2023-24 ರಿಂದ
2025-26 ರವರೆಗೆ ನಮ್ಮ ಸರ್ಕಾರ
ಕೊಟ್ಟ ಅನುದಾನ
ವ್ಯತ್ಯಾಸ
[ಹೆಚ್ಚು]​
ಶೇ.ವಾರು
ಸಮಾಜ ಕಲ್ಯಾಣ
11516
15448
3932
34
ಪರಿಶಿಷ್ಟ ಪಂಗಡಗಳ ಕಲ್ಯಾಣ
4381
5321
940
22
ಹಿಂದುಳಿದ ವರ್ಗಗಳ ಕಲ್ಯಾಣ
7261
10604
3343
46
ಅಲ್ಪ ಸಂಖ್ಯಾತರ ಕಲ್ಯಾಣ
4106
9616
5510
134

62.​ವಿರೋಧ ಪಕ್ಷದವರು ನಮ್ಮ ಸರ್ಕಾರದ ಅವಧಿಯಲ್ಲಿ ವಿವಿಧ ಕಲ್ಯಾಣ ಇಲಾಖೆಗಳಿಗೆ ಹೆಚ್ಚು ಅನುದಾನ ಕೊಡುತ್ತಿದ್ದೆವು, ನಿಮ್ಮ ಸರ್ಕಾರ ಕಡಿಮೆ ಅನುದಾನ ಕೊಟ್ಟಿದೆ ಎಂದು ಹೇಳಿದ್ದಾರೆ. ಅದಕ್ಕೆ 2022-23 ರ ಬಜೆಟ್ಟಿನ ದಾಖಲೆಗಳನ್ನು ಕೊಡುತ್ತಿದ್ದಾರೆ. ವಾಸ್ತವವಾಗಿ ನಮ್ಮ ಸರ್ಕಾರ 2017-18ರಲ್ಲಿ ಕೊಟ್ಟಿದ್ದ ಅನುದಾನಗಳಿಗಿಂತ ಕಡಿಮೆ ಅನುದಾನಗಳನ್ನು 2022-23ರ ಬಜೆಟ್‌ನಲ್ಲಿ ಕೊಡಲಾಗಿದೆ.
63.​ವಿರೋಧ ಪಕ್ಷದವರಿಗೆ ಒಂದು ಮಾತು ಕೇಳ ಬಯಸುತ್ತೇನೆ. ಸರ್ಕಾರದ ಅಗತ್ಯ ಹೆಚ್ಚು ಬೀಳುವುದು ಯಾರಿಗೆ? ಸರ್ಕಾರಿ ಆಸ್ಪತ್ರೆಗಳಿಗೆ, ಶಾಲಾ-ಕಾಲೇಜುಗಳಿಗೆ, ಸರ್ಕಾರಿ ಬಸ್ಸುಗಳಿಗೆ, ಸರ್ಕಾರದಿಂದ ಒದಗಿಸಿರುವ ಸಾರ್ವಜನಿಕ ನೀರಿನ ನಲ್ಲಿಗಳ ಬಳಿಗೆ ಯಾರು ಬರುತ್ತಾರೆ? ಮನುವಾದದ ಕಾರಣಕ್ಕೆ ಸಮಾಜದ ದಮನಿತ ಸಮುದಾಯಗಳು ಎನ್ನಿಸಿಕೊಂಡವರು ತಾನೆ? ಹಾಗಿದ್ದ ಮೇಲೆ ಸರ್ಕಾರ ಆದ್ಯತೆ ಕೊಡಬೇಕಾದುದು ಯಾರಿಗೆ?

64.​ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು, ಮಹಿಳೆಯರು, ಮಕ್ಕಳ ಪಾಲಿಗೆ ಇಲ್ಲದ ಸರ್ಕಾರ ಯಾರಿಗೆ ಬೇಕು?

65.​2017-18 ರ ಬಜೆಟ್ ಗಾತ್ರ 1,86,561 ಕೋಟಿ ರೂಪಾಯಿ. 2022-23 ರಲ್ಲಿ 2,65,720 ಕೋಟಿ ರೂಪಾಯಿ. 2017-18 ಕ್ಕೆ ಹೋಲಿಸಿದರೆ 79,159 ಕೋಟಿ ರೂಪಾಯಿಗಳಷ್ಟು ಹೆಚ್ಚಿನ ಗಾತ್ರದ ಬಜೆಟ್ ಅನ್ನು ಬೊಮ್ಮಾಯಿಯವರು ಮಂಡಿಸಿದ್ದರು.

66.​ ವಿರೋಧ ಪಕ್ಷದವರು ಪದೇ ಪದೇ 2022-23 ಕ್ಕೆ ಹೋಲಿಸಿಕೊಂಡಿದ್ದಾರೆ. ಹಾಗಾಗಿ ನಾನು 2017-18 ರ ಬಜೆಟ್ ಮತ್ತು 2025-26 ರ ಬಜೆಟ್ ಅನ್ನು 2022-23 ರ ಸಾಲಿನ ಬಜೆಟ್‌ಗೆ ಹೋಲಿಕೆ ಮಾಡಿ ನೋಡಿದ್ದೇನೆ. ಹೋಲಿಕೆ ಮಾಡಿ ನೋಡಿದ ನಂತರ ಬಿಜೆಪಿ ಸರ್ಕಾರ ಸ್ಪಷ್ಟವಾಗಿ ಮಹಿಳೆಯರು, ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತರ ವಿರೋಧಿಗಳು ಎಂಬುದು ಇನ್ನಷ್ಟು ಸ್ಪಷ್ಟವಾಯಿತು.

67.​ನಾವು 2017-18 ರಲ್ಲಿ ಹಿಂದುಳಿದ ವರ್ಗಕ್ಕೆ 3300 ಕೋಟಿ ರೂ. ಕೊಟ್ಟಿದ್ದರೆ 2022-23 ರಲ್ಲಿ 2372 ಕೋಟಿ ರೂ. ಕೊಡಲಾಯಿತು.

68.​ಅಲ್ಪಸಂಖ್ಯಾತರ ಕಲ್ಯಾಣಕ್ಕೆ ನಾವು 2221 ಕೋಟಿ ರೂ. ಅನುದಾನ ನೀಡಿದ್ದರೆ, ಬೊಮ್ಮಾಯಿಯವರ ಸರ್ಕಾರ 1495 ಕೋಟಿ ರೂ. ನೀಡಿತ್ತು. ವಿರೋಧ ಪಕ್ಷದವರು ಈ ಬಾರಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ 4500 ಕೊಟಿ ರೂ ಕೊಡಲಾಗಿದೆ ಎಂದು ಮಾತನಾಡಿದ್ದಾರೆ. ಆದರೆ ವಾಸ್ತವವಾಗಿ 2017-18 ರಲ್ಲಿ ಬಜೆಟ್ ಗಾತ್ರ 1.86 ಲಕ್ಷ ಕೋಟಿಗಳಷ್ಟಿತ್ತು. ಆಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 2200 ಕೋಟಿ ರೂ. ಗಳನ್ನು ಒದಗಿಸಿದ್ದೆವು. ಆಗಲೂ ಬಜೆಟ್ ಗಾತ್ರಕ್ಕೆ ಹೋಲಿಸಿದರೆ ನಾವು ಶೇ.1.18 ರಷ್ಟು ಅನುದಾನವನ್ನು ನೀಡಿದ್ದೆವು. 2025-26ನೇ ಸಾಲಿನ ಬಜೆಟ್‌ನಲ್ಲಿ ಶೇ.1.1 ರಷ್ಟು ಮಾತ್ರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ನೀಡಲಾಗಿದೆ. ಆದರೂ, ಆರೋಪ ಮಾಡುತ್ತಿದ್ದಾರೆ.

69.​ಸಮಾಜ ಕಲ್ಯಾಣ ಇಲಾಖೆಗೆ 2017-18 ರಲ್ಲಿ 4300 ಕೋಟಿ ರೂ. ಕೊಟ್ಟಿದ್ದೆವು. ಬೊಮ್ಮಾಯಿಯವರು 3818 ಕೋಟಿ ಕೊಟ್ಟರು. ಹೀಗೆ 5 ಕಲ್ಯಾಣ ಇಲಾಖೆಗಳಿಗೆ ನಾವು 2017-18 ರಲ್ಲಿ 16,358 ಕೋಟಿ ಕೊಟ್ಟಿದ್ದರೆ ಬೊಮ್ಮಾಯಿಯವರು 13,883 ಕೋಟಿ ರೂ. ಕೊಟ್ಟರು. 2475 ಕೋಟಿಗೂ ಕಡಿಮೆ.

70.​2022-23ರ ಬಜೆಟ್‌ನಲ್ಲಿ ಈ 5 ಕಲ್ಯಾಣ ಇಲಾಖೆಗಳಿಗೆ 13,883 ಕೋಟಿ ರೂ. ಕೊಟ್ಟಿದ್ದರೆ, ನಮ್ಮ ಸರ್ಕಾರ ಈ ಬಾರಿ 50,816 ಕೋಟಿ ರೂ. ಗಳನ್ನು ಕೊಟ್ಟಿದೆ. 36,993 ಕೋಟಿಗಳಿಗೂ ಹೆಚ್ಚು.

71.​ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ 1642 ಕೋಟಿ, ಸಮಾಜ ಕಲ್ಯಾಣ ಇಲಾಖೆಗೆ 2204 ಕೋಟಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ 585 ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 29,482 ಕೋಟಿ ರೂ.ಗಳನ್ನು 2022-23 ಕ್ಕಿಂತ ಹೆಚ್ಚಿಗೆ ನೀಡಲಾಗಿದೆ.

72.​ಅಶೋಕ್ ಉಲ್ಲೇಖಿಸುವ 2022-23 ರಲ್ಲಿ ಬೊಮ್ಮಾಯಿಯವರು 2,65,720 ಕೋಟಿ ರೂ ಬಜೆಟ್ ಅನ್ನು ಮಂಡಿಸಿದ್ದರು. 2017-18 ಕ್ಕೆ ಹೋಲಿಸಿದರೆ 79,159 ಕೋಟಿ ರೂಗಳಷ್ಟು ಹೆಚ್ಚಿನ ಹಾಗೂ ಶೇ.42.43 ರಷ್ಟು ಹೆಚ್ಚಿನ ಗಾತ್ರದ ಬಜೆಟ್ಟನ್ನು ಅವರು ಮಂಡಿಸಿದ್ದರು. ಆದರೆ ಈ 5 ವರ್ಗಗಳಿಗೆ 13,883 ಕೋಟಿ ರೂಗಳನ್ನು ಮಾತ್ರ ಒದಗಿಸಿದರು. ಇದು ಬಜೆಟ್ ಗಾತ್ರಕ್ಕೆ ಹೋಲಿಸಿದರೆ ಕೇವಲ ಶೇ.5.22 ರಷ್ಟು ಮಾತ್ರ. ನಾವು ಬಜೆಟ್ ಮಂಡಿಸಿದ ನಂತರ 6 ನೆ ಬಜೆಟ್ಟನ್ನು ಬೊಮ್ಮಾಯಿ ಮಂಡಿಸಿದರು. ಆ ಬಜೆಟ್ ಮಾದರಿ ಬಜೆಟ್ ಎಂದು ಅಶೋಕ್ ಅವರು ಮತ್ತು ವಿರೋಧ ಪಕ್ಷದವರು ಹೇಳುತ್ತಿದ್ದಾರೆ. ಆದರೆ ಈ 5 ವರ್ಗಗಳಿಗೆ 2475 ಕೋಟಿ ರೂಪಾಯಿಗಳನ್ನು ಕಡಿಮೆ ಮಾಡಿದ್ದಾರೆ. ಶೇ.42 ರಷ್ಟು ಹೆಚ್ಚು ಕೊಡಬೇಕಾಗಿತ್ತಲ್ಲ? ಯಾಕೆ ಕೊಡಲಿಲ್ಲ? ಆಗ ಇಲ್ಲದ ಕಾಳಜಿ ಈಗ ಎಲ್ಲಿಂದ ಬಂತು?

73.​2017-18 ನೇ ಸಾಲಿನಲ್ಲಿ ನಾನು ಮಂಡಿಸಿದ್ದ ಬಜೆಟ್ ಗಾತ್ರ 1,86,561 ಕೋಟಿ ರೂ. ಆ ವರ್ಷ ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು, ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕೆಂದು ನಾವು ಮೀಸಲಿಟ್ಟಿದ್ದ ಅನುದಾನ 16358 ಕೋಟಿ ರೂ. ಇದು ಬಜೆಟ್ಟಿನ ಶೇ. 8.77 ರಷ್ಟು. ಇದು ನಮ್ಮ ಬದ್ಧತೆ.

74.​2017-18 ರ ನಂತರ ನಿಂತಿದ್ದ ಮಹಿಳೆಯರ, ಮಕ್ಕಳ, ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಅಭಿವೃದ್ಧಿಯ ರಥವನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮುನ್ನಡೆಸಲು ಪ್ರಾರಂಭಿಸಿದ್ದೇವೆ. 25-26 ನೇ ಸಾಲಿನ ಬಜೆಟ್‌ನಲ್ಲಿ ಈ 5 ವರ್ಗಗಳಿಗೆ 50,816 ಕೋಟಿ ರೂಗಳನ್ನು ನೀಡಿದ್ದೇವೆ. ಇದು ಬಜೆಟ್ಟಿನ ಶೇ.12.41 ರಷ್ಟಾಗುತ್ತದೆ. ಇದು ನಮಗೂ ನಿಮಗೂ ಇರುವ ವ್ಯತ್ಯಾಸ.

75.​ಆರೋಗ್ಯ ಕ್ಷೇತ್ರಕ್ಕೆ ನಮ್ಮ ಸರ್ಕಾರ 2025-16 ನೇ ಸಾಲಿಗೆ 17,019 ಕೋಟಿ ರೂ. ಗಳನ್ನು ಒದಗಿಸಿದೆ. ಒಟ್ಟು ವೆಚ್ಚದಲ್ಲಿ ಶೇ.4.2 ರಷ್ಟು ಅನುದಾನವನ್ನು ಆರೋಗ್ಯ ಕ್ಷೇತ್ರಕ್ಕೆ ನೀಡಿದ್ದೇವೆ. ಆದರೆ, ಕೇಂದ್ರ ಸರ್ಕಾರ ಅವರ ಬಜೆಟ್ಟಿನ ಶೇ.2 ರಷ್ಟು ಮಾತ್ರ ಒದಗಿಸಿದೆ ಎಂಬುದನ್ನು ಈ ಸದನಕ್ಕೆ ತಿಳಿಸಬಯಸುತ್ತೇನೆ.
76.​ಅಧಿಕಾರದಲ್ಲಿದ್ದಾಗ ಒಂದು. ಇಲ್ಲದಾಗ ಒಂದು. ಇದೇ ತಾನೆ ನಿಮ್ಮ ದ್ವಂದ್ವ ನೀತಿ. ಅಧಿಕಾರದಲ್ಲಿ ಇಲ್ಲದಿದ್ದಾಗ ಈ ಸಮುದಾಯಗಳ ಬಗ್ಗೆ ಪ್ರೀತಿ ಹುಟ್ಟುತ್ತದೆ, ಅಧಿಕಾರಕ್ಕೆ ಬಂದ ಕೂಡಲೆ ಈ 5 ವರ್ಗಗಳನ್ನು ಏಣಿ ಹತ್ತಿದವನು ಅದನ್ನು ಒದ್ದು ಬೀಳಿಸುವಂತೆ ದಮನ ಮಾಡಲಾಗುತ್ತದೆ. ಈ ದ್ರೋಹ ಜನರಿಗೆ ಅರ್ಥವಾಗುತ್ತದೆ.

77.​ತಾವು ದಮನಿತ ಸಮುದಾಯಗಳ ವಿರೋಧಿಗಳು ಎಂಬುದು ಗೊತ್ತಿರುವ ಕಾರಣಕ್ಕೆ ಅದನ್ನು ಮರೆಮಾಚಲು ಮುಸ್ಲಿಂ ಬಜೆಟ್, ಹಲಾಲ್ ಬಜೆಟ್ ಎಂದೆಲ್ಲ ಹೇಳಿ ಸಮಾಜವನ್ನು ದಿಕ್ಕು ತಪ್ಪಿಸಲು ನೋಡಲಾಗುತ್ತಿದೆ. ವಿರೋಧ ಪಕ್ಷದವರು ಹೇಳುವ ಮುಸ್ಲಿಂ ಬಜೆಟ್, ಹಲಾಲ್ ಬಜೆಟ್ ಎಂಬ ಮಾತುಗಳು ಸಬ್ಕಾ ಸಾಥ್- ಸಬ್ಕಾ ವಿಶ್ವಾಸ್ ಎಂದು ಹೇಳುವ ನರೇಂದ್ರ ಮೋದಿಯವರ ನಿಲುವಿಗೆ ಸಂಪೂರ್ಣ ವಿರುದ್ಧ. ಅಲ್ಲಿ ಸಬ್ಕಾ ಸಾಥ್ ಎಂದು ಹೇಳುವ ಮೋದಿಯವರು ಇಲ್ಲಿ ನೀವುಗಳು ಸಂಪೂರ್ಣ ಗೋಮುಖ ವ್ಯಾಘ್ರ ನಿಲುವಿನವರು. ಆಡುವುದೊಂದು, ಮಾಡುವುದೊಂದು ಎಂಬುದನ್ನು ವಿರೋಧ ಪಕ್ಷದವರೆಲ್ಲರೂ ಒಟ್ಟಿಗೆ ಸೇರಿ ಸಾಬೀತು ಮಾಡಿದ್ದಾರೆ.

78.​ಸನ್ಮಾನ್ಯ ವಿರೋಧ ಪಕ್ಷದ ನಾಯಕರು ಬಜೆಟ್ ಮೇಲೆ ಮಾತನಾಡುವಾಗ ದಾಖಲೆಗಳನ್ನು ಆರೆಸ್ಸೆಸ್ಸಿನವರು ಕೊಟ್ಟರೊ ಇಲ್ಲ ಅವರೆ ಅಧ್ಯಯನ ಮಾಡಿದರೊ ಗೊತ್ತಿಲ್ಲ. ಆದರೆ ಅವರ ಬಜೆಟ್ ಮೇಲಿನ ಭಾಷಣ ಸಂಪೂರ್ಣ ದೋಷಪೂರಿತ ಹಾಗೂ ಬಡವರ, ದಮನಿತರ ವಿರೋಧಿಯಾಗಿತ್ತು ಎಂದು ಮಾತ್ರ ಹೇಳಬಲ್ಲೆ ಎಂದರು.

79.​ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗಾಗಿ ನಮ್ಮ ಸರ್ಕಾರ ಈ ಬಾರಿ 42,018 ರೂ.ಗಳನ್ನು ಒದಗಿಸಿದೆ. ನಾವು ಪರಿಶಿಷ್ಟ ಸಮುದಾಯಗಳ ಏಳಿಗೆಯನ್ನು ಪ್ರಾಮಾಣಿಕವಾಗಿ ಬಯಸುವವರು. ನಮ್ಮ ಕಾಳಜಿ ಕೇವಲ ಬಾಯಿ ಮಾತಿನದಲ್ಲ. 2020-21 ರಿಂದ 2022-23 ರವರೆಗೆ 3 ವರ್ಷಗಳ ಅವಧಿಯಲ್ಲಿ ಹಿಂದಿನ ಬಿಜೆಪಿ ಸರ್ಕಾರ ಎಸ್‌ಸಿಪಿ ಮತ್ತು ಟಿಎಸ್‌ಪಿಗಾಗಿ 80,415 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಆದರೆ ನಾವು 2023 ರಿಂದ ಈಗ ಮಂಡಿಸಿರುವ ಬಜೆಟ್‌ವರೆಗೆ 1,15,509 ಕೋಟಿ ರೂಪಾಯಿಗಳನ್ನು ಒದಗಿಸಿದ್ದೇವೆ. ಬಿಜೆಪಿಯ 3 ವರ್ಷಗಳಿಗೆ ಹೋಲಿಸಿದರೆ ನಾವು 35,094 ಕೋಟಿ ರೂಗಳನ್ನು ಹೆಚ್ಚಿಗೆ ಒದಗಿಸಿದ್ದೇವೆ. ಶೇ.43.64 ರಷ್ಟು ಹೆಚ್ಚಿನ ಅನುದಾನವನ್ನು ಒದಗಿಸಿದಂತಾಗುತ್ತದೆ. ಒಟ್ಟಾರೆ ಸಮಾಜ ಕಲ್ಯಾಣ ಇಲಾಖೆಗೆ ಶೇ.52.5 ರಷ್ಟು ಹೆಚ್ಚು ಅನುದಾನವನ್ನು ಕೊಟ್ಟಿದ್ದೇವೆ.

80.​ ವಿರೋಧ ಪಕ್ಷದ ನಾಯಕರು ಪ್ರಾಜೆಕ್ಟ್ ಟೈಗರ್ ಮತ್ತು ಪ್ರಾಜೆಕ್ಟ್ ಎಲಿಫೆಂಟ್ ಯೋಜನೆಗೂ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಹಣವನ್ನು ವಿನಿಯೋಗಿಸಲಾಗಿದೆ ಎಂದಿದ್ದಾರೆ. ಆದರೆ ಇದು ಕೇಂದ್ರ ಸರ್ಕಾರದ ಸಮಸ್ಯೆ. ಕೇಂದ್ರ ಸರ್ಕಾರವು ರೂಪಿಸಿರುವ ಕೇಂದ್ರ ಪುರಸ್ಕೃತ ಯೋಜನೆಗೆ ಮ್ಯಾಚಿಂಗ್ ಗ್ರಾö್ಯಂಟ್ ಒದಗಿಸಿದ್ದೇವೆ ಅಷ್ಟೇ.

ನಮ್ಮದು ಮುಸ್ಲಿಂ ಬಜೆಟ್ ಅಲ್ಲ – ಸರ್ವೋದಯದ ಬಜೆಟ್.
ರಾಷ್ಟçಕವಿ ಕುವೆಂಪು ಅವರು ಪದ್ಯವೊಂದನ್ನು ಬರೆದಿದ್ದಾರೆ. ಅದರಲ್ಲಿ ಹೀಗೆ ಹೇಳಿದ್ದಾರೆ:

ಬಾರಿಸು ಕನ್ನಡ ಡಿಂಡಿಮವ!!
ಓ! ಕರ್ನಾಟಕ ಹೃದಯ ಶಿವ

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು

ಚೈತ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲ್ಲಿ
ಸರ್ವೋದಯವಾಗಲಿ ಸರ್ವರಲಿ

81.​ಇದು ಈ ಸಂದರ್ಭಕ್ಕೆ ಅತ್ಯಂತ ಸೂಕ್ತವಾದ ಪದ್ಯವಾಗಿದೆ. ಇನ್ನೆಷ್ಟು ದಿನ ಧರ್ಮ ಧರ್ಮಗಳ ನಡುವೆ, ಜಾತಿ ಜಾತಿಗಳ ನಡುವೆ ದ್ವೇಷ, ಹಿಂಸೆ, ಅಸಹನೆಯನ್ನು ಹುಟ್ಟು ಹಾಕುತ್ತೀರಿ? ಒಟ್ಟಿಗೆ ಬಾಳಲು ಯಾವ ಸಮಸ್ಯೆಯಿದೆ? ಎನ್ನುವ ಕುವೆಂಪು ಕಡೆಯದಾಗಿ ಸರ್ವೋದಯವಾಗಲಿ ಸರ್ವರಲಿ ಎನ್ನುತ್ತಾರೆ.

82.​ನಾವು ಬಜೆಟ್ಟಿನ ಪುಸ್ತಕದಲ್ಲಿ ಹೇಳಿದ್ದೆವು. ನಮ್ಮ ಉದ್ದೇಶ ಸಮಾಜವನ್ನು ಸೋಷಿಯಲ್ ಡಾರ್ವಿನಿಸಂ ಕಡೆಗೆ ತೆಗೆದುಕೊಂಡು ಹೋಗುವುದಲ್ಲ. ಸಂವಿಧಾನದ ಕಡೆಗೆ ಮುನ್ನಡೆಸುವುದು. ಮನುವಾದವು ಸೋಷಿಯಲ್ ಡಾರ್ವಿನಿಸಮ್ಮನ್ನು ಹೇಳುತ್ತದೆ. ಇದು ಮನುಷ್ಯ ಸಮಾಜಕ್ಕೂ ಅನ್ವಯವಾದರೆ ದಮನಿತ ಸಮುದಾಯಗಳು ಮತ್ತು ಮಹಿಳೆಯರು ಬದುಕುವುದು ಹೇಗೆ? ಈ ವರ್ಗಗಳಿಗೆ ನ್ಯಾಯ ಕೊಡುವುದು ಸಂವಿಧಾನ ಮಾತ್ರ.

83.​ನಾವು ಸಂವಿಧಾನದ ಆಶಯಗಳ ಹಾದಿಯಲ್ಲಿ ಮುನ್ನಡೆಯುತ್ತಿದ್ದೇವೆ. ಹಾಗಾಗಿ ನಾವು ಸರ್ವೋದಯವಾಗಲಿ ಸರ್ವರಲಿ ಎಂಬುದನ್ನು ಮಾತಿಗೋಸ್ಕರ ಬಳಸುವುದಿಲ್ಲ. ಬದಲಾಗಿ ಅದನ್ನು ನಮ್ಮ ಸಿದ್ಧಾಂತವಾಗಿಸಿಕೊಂಡು ಕೆಲಸ ಮಾಡುತ್ತಿದ್ದೇವೆ.

ಮುಸ್ಲಿಂ ಸಮುದಾಯಕ್ಕೆ ಶೇ.4 ರಷ್ಟು ಗುತ್ತಿಗೆ ನೀಡುತ್ತಿರುವ ವಿಚಾರ
ವಿರೋಧ ಪಕ್ಷದ ನಾಯಕರಾದಿಯಾಗಿ ವಿರೋಧ ಪಕ್ಷದ ಅನೇಕರು ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಿರುವ ವಿಚಾರದ ಕುರಿತು ಆಕ್ಷೇಪದ ಧ್ವನಿಯಲ್ಲಿ ಮಾತನಾಡಿದ್ದಾರೆ. ರಿಲೀಜನ್ ಬೇಸ್ ಮೇಲೆ ಮೀಸಲಾತಿ ಕೊಟ್ಟಿರುವುದು ತಪ್ಪು ಎಂದು ಆರ್. ಅಶೋಕ್ ಅವರು ಪ್ರಸ್ತಾಪಿಸಿದ್ದಾರೆ.
1.​ಅಶೋಕ್ ಅವರು ಎಸ್‌ಸಿಪಿ ಟಿಎಸ್‌ಪಿ ವಿಚಾರಗಳನ್ನು ಮಾತನಾಡುವಾಗ ಕರ್ನಾಟಕದ ಮಾನವ ಅಭಿವೃದ್ಧಿ ಸೂಚ್ಯಂಕದ ಬಗ್ಗೆ ಮಾತನಾಡಿದ್ದಾರೆ. ಅವರು ಪ್ರಸ್ತಾಪ ಮಾಡಿದ್ದು ಒಳ್ಳೆಯದಾಯಿತು. 2022 ರಲ್ಲಿ ಬೊಮ್ಮಾಯಿಯವರು ಮುಖ್ಯಮಂತ್ರಿಗಳಿದ್ದಾಗ ಹಿಂದಿನ ಸರ್ಕಾರ ಕರ್ನಾಟಕ ಮಾನವ ಅಭಿವೃದ್ಧಿ ವರದಿಯನ್ನು ಬಿಡುಗಡೆ ಮಾಡಿದೆ. ಸದರಿ ವರದಿಯಲ್ಲಿ ಮಕ್ಕಳ ಮರಣ, ಆರೋಗ್ಯ, ಶಾಲಾ ದಾಖಲಾತಿ, ಮಹಿಳಾ ಶಿಕ್ಷಣ, ಶಿಕ್ಷಣ ಸೂಚ್ಯಂಕ, ಸುಧಾರಿತ ಕುಡಿಯುವ ನೀರು, ಸುಧಾರಿತ ವಿದ್ಯುತ್ ಲಭ್ಯತೆ, ಸುಧಾರಿತ ಶೌಚಾಲಯ, ಶೇ.ವಾರು ಪಕ್ಕಾ ಮನೆ, ಸುಧಾರಿತ ಅಡುಗೆ ಇಂಧನ, ವರಮಾನ ಸೂಚ್ಯಂಕಗಳನ್ನು ಆಧರಿಸಿ ಒಟ್ಟಾರೆ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಸಿದ್ಧಪಡಿಸಲಾಗುತ್ತದೆ. ಯಾವ ಯಾವ ಪ್ಯಾರಾಮೀಟರುಗಳಲ್ಲಿ ಎಷ್ಟೆಷ್ಟು ಅಂಶಗಳನ್ನು ಗಳಿಸಲಾಗಿದೆ ಎಂಬುದು ಈ ಅಧ್ಯಯನದಿಂದ ದೃಢಪಡುತ್ತದೆ.
2.​ಅದರ ಪ್ರಕಾರ

ವಿವಿಧ ಸಾಮಾಜಿಕ ಗುಂಪುಗಳು
2022 ರ ಒಟ್ಟಾರೆ ಮಾನವ ಅಭಿವೃದ್ಧಿ
ಸೂಚ್ಯಂಕ

ಪರಿಶಿಷ್ಟ ಜಾತಿ
0.49
ಪರಿಶಿಷ್ಟ ಪಂಗಡ
0.44
ಅಲ್ಪಸಂಖ್ಯಾತ
0.37
ಸಾಮಾನ್ಯ ವರ್ಗ
0.644

3.​ಕರ್ನಾಟಕದ ಸಾಮಾನ್ಯ ವರ್ಗಗಳ ಮಾನವ ಅಭಿವೃದ್ಧಿ ಸೂಚ್ಯಂಕ 0.644 ರಷ್ಟಿದೆ. ಸಾಮಾನ್ಯ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ನಡುವೆ 0.274 ಅಂಶಗಳ ವ್ಯತ್ಯಾಸವಿದೆ. ಪರಿಶಿಷ್ಟ ಪಂಗಡಗಳಿಗೆ 0.204 ಅಂಶಗಳಷ್ಟು ವ್ಯತ್ಯಾಸವಿದೆ. ಪರಿಶಿಷ್ಟ ಜಾತಿಗಳ ನಡುವೆ 0.154 ಅಂಶಗಳಷ್ಟು ವ್ಯತ್ಯಾಸವಿದೆ.

ವಿವಿಧ ಸೂಚ್ಯಂಕಗಳು

​​​​​
ಸಾಮಾಜಿಕ ಸಮುದಾಯ
ಆರೋಗ್ಯದ ಸೂಚ್ಯಂಕ
ಶಿಕ್ಷಣದ
ಸೂಚ್ಯಂಕ​
ಗುಣಮಟ್ಟದ
ಜೀವನದ
ಸೂಚ್ಯಂಕ
2022ರ
ಮಾನವ
ಅಭಿವೃದ್ಧಿ
ಸೂಚ್ಯಂಕ

ಪರಿಶಿಷ್ಟ ಜಾತಿ
0.58
0.36
0.60
0.49
ಪರಿಶಿಷ್ಟ ಪಂಗಡ
0.63
0.29
0.52
0.44
ಅಲ್ಪ ಸಂಖ್ಯಾತ
0.62
0.23
0.42
0.37

4.​ಈ ಮಾಹಿತಿಯು ಹಲವು ಸತ್ಯಗಳನ್ನು ಹೇಳುತ್ತಿದೆ. ನಾನು ವಿರೋಧ ಪಕ್ಷದವರನ್ನು ಕೇಳಬಯಸುತ್ತೇನೆ. ಸಮಾಜದ ಒಂದು ವರ್ಗ ಸಂಪೂರ್ಣ ಅಂಗವಿಕಲವಾದರೆ ಇಡೀ ಸಮಾಜವನ್ನು ಮುನ್ನಡೆಸಲು ಹೇಗೆ ಸಾಧ್ಯ? ಅಲ್ಪಸಂಖ್ಯಾತರ ಪ್ರಮಾಣ ಸುಮಾರು ಶೇ.15 ರಷ್ಟಿದೆ. ಇಷ್ಟು ದೊಡ್ಡ ಜನಸಂಖ್ಯೆಯ ಸಮುದಾಯದ ಕಲ್ಯಾಣಕ್ಕೆ ಈ ಬಾರಿಯ ಬಜೆಟ್‌ನಲ್ಲಿ 4514 ಕೋಟಿ ರೂಪಾಯಿಗಳನ್ನು ಒದಗಿಸಿದ್ದೇವೆ. ಇದು ಒಟ್ಟಾರೆ ಬಜೆಟ್‌ನಲ್ಲಿ ಶೇ.1.1 ರಷ್ಟು ಮಾತ್ರ. ಇಷ್ಟಕ್ಕೆ ಇಷ್ಟೊಂದು ದ್ವೇಷ ಯಾಕೆ?

5.​ಶಿಕ್ಷಣ, ಆರೋಗ್ಯ, ಗುಣ ಮಟ್ಟದ ಜೀವನದ ವಿಚಾರದಲ್ಲಿ ಪರಿಶಿಷ್ಟ ಪಂಗಡಗಳಿಗಿಂತಲೂ ದಯನೀಯ ಸ್ಥಿತಿಯಲ್ಲಿ ಇರುವುದರ ಕುರಿತು ಹಿಂದಿನ ಸರ್ಕಾರವೇ ಮಾಡಿರುವ ವರದಿಯು ಹೇಳುತ್ತಿದೆ.

6.​ಶೇ.14 ರಷ್ಟು ಜನರಿಗೆ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಮನೆ, ಶೌಚಾಲಯ ಮುಂತಾದವುಗಳನ್ನು ಇಲ್ಲವಾಗಿಸಿ ಭಾರತವನ್ನು ವಿಶ್ವಗುರುವಾಗಿಸುವುದು ಹೇಗೆ?

7.​14 ಪರ್ಸೆಂಟ್ ಜನರನ್ನು ಅಭಿವೃದ್ಧಿಯ ಹಾದಿಗೆ ತರದೆ ಜಿಎಸ್‌ಡಿಪಿ/ ಜಿಡಿಪಿಗಳನ್ನು ಹೆಚ್ಚು ಮಾಡಲು ಹೇಗೆ ಸಾಧ್ಯ?

8.​ಇದಷ್ಟೇ ಅಲ್ಲ. ಈ ಸಮುದಾಯಗಳನ್ನು ದೂರವಿಡುವುದು ಸಂವಿಧಾನ ವಿರೋಧಿ ನಡೆಯೂ ಕೂಡ ಆಗಿದೆ.

9.​ದೇಶದಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿಸಲು ಈ ಬಾರಿಯ ಬಜೆಟ್‌ನಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆ ಕ್ರಮಗಳಲ್ಲಿ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿಯೂ ಸೇರಿದೆ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗದ ಪ್ರವರ್ಗ-1, 2ಎ ಮತ್ತು 2ಬಿಗಳನ್ನು ಸೇರಿಸಿ ಈ ಕ್ರಮ ತೆಗೆದುಕೊಂಡಿದ್ದೇವೆ. ಈ ವರ್ಗಗಳಲ್ಲಿ ಗುತ್ತಿಗೆದಾರರೇ ಇಲ್ಲವೆನ್ನುವಷ್ಟು ಕಡಿಮೆ ಇದ್ದಾರೆ.

ಎರಡನೆಯ ಅಂಶ; ಮುಸ್ಲಿಮರು ಧಾರ್ಮಿಕ ಅಲ್ಪಸಂಖ್ಯಾತರು, ಅವರಿಗೆ ಮೀಸಲಾತಿ ಕೊಡಬಾರದಿತ್ತು ಎಂದು ಆಕ್ಷೇಪಗಳನ್ನು ಎತ್ತಿದ್ದಾರೆ. ಅಶೋಕ್ ಹಾಗೂ ವಿರೋಧ ಪಕ್ಷದವರು ಸ್ವಲ್ಪ ಇತಿಹಾಸವನ್ನು ಓದಿಕೊಂಡರೆ ಒಳ್ಳೆಯದು ಎನ್ನುವುದು ನನ್ನ ಭಾವನೆ. ಇತಿಹಾಸದ ತಿಳುವಳಿಕೆ ಇರುವವರು ಹೀಗೆ ಮಾತನಾಡುವುದಿಲ್ಲ.

1.​1919 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಿಲ್ಲರ್ ಸಮಿತಿಯನ್ನು ರಚಿಸಿದರು. ಸಮಿತಿಯು ಮುಸ್ಲಿಂ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಶೇ. 82 ರಷ್ಟು, ಬ್ರಾಹ್ಮಣರಿಗೆ ಶೇ. 20 ರಷ್ಟು ಮೀಸಲಾತಿಯನ್ನು [10 ಹುದ್ದೆಗಳಿದ್ದರೆ 2 ಹುದ್ದೆ ಬ್ರಾಹ್ಮಣರಿಗೆ, 8 ಹುದ್ದೆ ಮುಸ್ಲಿಂ ಮತ್ತು ಹಿಂದುಗಳಿಗೆ] ಕೊಡಲು ಶಿಫಾರಸ್ಸು ಮಾಡಿತು. ವಿಶ್ವೇಶ್ವರಯ್ಯನವರ ನಂತರ ಕಾಂತರಾಜ ಅರಸ್ ಅವರು ದಿವಾನರಾಗಿದ್ದಾಗ ಈ ವರದಿಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜಾರಿಗೆ ತಂದರು.

2.​ಸ್ವಾತಂತ್ರೊö್ಯÃತ್ತರ ಭಾರತದಲ್ಲಿ ಕರ್ನಾಟಕ ಸರ್ಕಾರಗಳು ಸಂವಿಧಾನದ ಆರ್ಟಿಕಲ್ 15[4], 16[4] ರ ಪ್ರಕಾರ ಮೀಸಲಾತಿಯನ್ನು ಕೊಟ್ಟುಕೊಂಡು ಬಂದಿವೆÉ. ಯಾಕೆಂದರೆ ಈ ಸಮುದಾಯವು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿವೆ ಎಂಬ ಕಾರಣದಿಂದಲೆ ಮೀಸಲಾತಿಯನ್ನು ಕೊಡಲಾಗಿದೆ. ಹಿಂದುಳಿದ ವರ್ಗಗಳ ವ್ಯಾಪ್ತಿಯಲ್ಲಿ ಮೀಸಲಾತಿಯನ್ನು ಕೊಡಬಹುದೆಂದು ರಾಜ್ಯದ ಹಲವು ಸಮಿತಿಗಳು ಹಾಗೂ ಆಯೋಗಗಳು ಶಿಫಾರಸ್ಸು ಮಾಡಿವೆ.

3.​ಕರ್ನಾಟಕದ ಮೊದಲ ಹಿಂದುಳಿದ ವರ್ಗಗಳ ಆಯೋಗ ಎಂದು ಕರೆಸಿಕೊಳ್ಳುವ ಎಲ್.ಜಿ.ಹಾವನೂರ ರವರ ಆಯೋಗವು 4 ಪ್ರವರ್ಗಗಳನ್ನು ಗುರುತಿಸಿದೆ. 1) ಹಿಂದುಳಿದ ಸಮುದಾಯಗಳು 2) ಹಿಂದುಳಿದ ಜಾತಿಗಳು 3) ಹಿಂದುಳಿದ ಬುಡಕಟ್ಟುಗಳು 4) ವಿಶೇಷ ಸಮುದಾಯಗಳು ಎಂದು ವ್ಯಾಖ್ಯಾನಿಸಿ ವರದಿಯನ್ನು ಹಾವನೂರ ಆಯೋಗ ಕೊಟ್ಟಿದೆ. ಇದನ್ನು ಆಧರಿಸಿ, ಸರ್ಕಾರಿ ಆದೇಶ ಸಂಖ್ಯೆ: ಡಿಪಿಎಆರ್ 01 ಎಸ್‌ಬಿಸಿ 1977, ದಿನಾಂಕ: 04.03.1977 ರ ಆದೇಶದ ಪ್ರಕಾರ ಮುಸ್ಲಿಮರನ್ನು ಹಿಂದುಳಿದ ಸಮುದಾಯಗಳ ವ್ಯಾಪ್ತಿಯಲ್ಲಿ ವ್ಯಾಖ್ಯಾನಿಸಲಾಗಿದೆ.

4.​ದಿನಾಂಕ: 04.03.1977 ರ ಸರ್ಕಾರದ ಆದೇಶವನ್ನು ಸೋಮಶೇಖರಪ್ಪ ಗಿ/s ಕರ್ನಾಟಕ ಸರ್ಕಾರ ಹಾಗೂ ಇತರರು ರಿಟ್ ಪಿಟಿಷನ್ ಸಂಖ್ಯೆ 4371/1977 ರಂತೆ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಗೌರವಾನ್ವಿತ ಉಚ್ಛ ನ್ಯಾಯಾಲಯವು ತನ್ನ ಆದೇಶದ ಪ್ಯಾರಾ ನಂ.42 ರಲ್ಲಿ ಈ ರೀತಿ ಆದೇಶ ಮಾಡಿದೆ.
“So far as the Muslims are concerned the Commission was unwise in excluding them from the list of Backward Classes solely on the ground that they belong to a religious minority. The Commission has, however, found that the Muslims are socially and educationally backward and also do not have adequate representation in the Civil Service. The fact that they are a religious minority is no ground to exclude them from the list of Backward Classes. The Government, in our opinion, was perfectly justified in listing the Muslims in the list of Bwckward Classes.”

5.​ಹಿಂದುಳಿದ ಸಮುದಾಯಗಳ ವ್ಯಾಪ್ತಿಯಲ್ಲಿ ತರಬಹುದೆಂದು ಗೌರವಾನ್ವಿತ ಉಚ್ಛ ನ್ಯಾಯಾಲಯವು ವ್ಯಾಖ್ಯಾನಿಸಿ ಅರ್ಜಿದಾರರ ರಿಟ್ ಅರ್ಜಿಯನ್ನು ತಿರಸ್ಕರಿಸಿತು.

6.​ಆನಂತರ, ಶ್ರೀ ವೆಂಕಟಸ್ವಾಮಿ ಯವರ ಆಯೋಗವು ಒಟ್ಟು 5 ವರ್ಗಗಳನ್ನು ಗುರುತಿಸಿ ‘ಎ’, ‘ಬಿ’, ‘ಸಿ’, ‘ಡಿ’ ಮತ್ತು ‘ಇ’ ವರ್ಗಗಳೆಂದು ವ್ಯಾಖ್ಯಾನಿಸಿತು. ಮುಸ್ಲಿಂ ಸಮುದಾಯವನ್ನು ಹಿಂದುಳಿದ ವರ್ಗಗಳ ಗ್ರೂಪ್ ‘ಸಿ’ ಯಲ್ಲಿ ಸೇರಿಸಿತು.

7.​ನಂತರ, ಓ. ಚಿನ್ನಪ್ಪರೆಡ್ಡಿ ಆಯೋಗವು ಕೆಟಗರಿ-1, ಕೆಟಗರಿ-2ಎ, ಕೆಟಗರಿ-2ಬಿ, ಕೆಟಗರಿ-3ಎ, ಕೆಟಗರಿ-3ಬಿ ಮತ್ತು ಕೆಟಗರಿ-4 ಎಂದು ಗುರುತಿಸಿತು. ಆಗ, ಮುಸ್ಲಿಂ ಸಮುದಾಯವನ್ನು ಪ್ರತ್ಯೇಕವಾಗಿ 2ಬಿ ವರ್ಗದಲ್ಲಿ ಗುರುತಿಸಿ ಮೀಸಲಾತಿ ನೀಡಲು ಶಿಫಾರಸ್ಸು ಮಾಡಿತು.

8.​ಆನಂತರದ ಪ್ರೊ. ರವಿವರ್ಮ ಕುಮಾರ್ ಆಯೋಗವು ಕೆಟಗರಿ-1, ಕೆಟಗರಿ-2ಎ, ಕೆಟಗರಿ-2ಬಿ, ಕೆಟಗರಿ-3ಎ, ಮತ್ತು ಕೆಟಗರಿ-3ಬಿ ಗಳೆಂದು 5 ಪ್ರವರ್ಗಗಳಾಗಿ ಗುರುತಿಸಿತು. ಇವತ್ತಿಗೂ ಇದೇ ಪದ್ಧತಿ ಮುಂದುವರೆದಿದೆ. ಪ್ರೊ. ರವಿವರ್ಮ ಕುಮಾರ್ ಆಯೋಗವು ಕೂಡ ಮುಸ್ಲಿಂ ಸಮುದಾಯವನ್ನು ಹಿಂದುಳಿದ ವರ್ಗಗಳ ಕೆಟಗರಿ-2ಬಿ ನಲ್ಲಿ ಸೇರಿಸಿದೆ. ಹಾಗಾಗಿ, ರಾಜ್ಯದ ಎಲ್ಲಾ ಹಿಂದುಳಿದ ವರ್ಗಗಗಳಿಗೆ ಸಂಬಂಧಪಟ್ಟ ಸಮಿತಿಗಳು ಹಾಗೂ ಆಯೋಗಗಳು ಮುಸ್ಲಿಂ ಸಮುದಾಯವನ್ನು ಹಿಂದುಳಿದ ವರ್ಗ ಎಂದು ಗುರುತಿಸಿವೆ.

9.​ಆದರೆ, ನಿಮ್ಮ ಸರ್ಕಾರ ರಾಜಕೀಯ ದುರುದ್ದೇಶದಿಂದ ಮುಸ್ಲಿಮರನ್ನು ಹಿಂದುಳಿದ ವರ್ಗಗಳ ಮೀಸಲಾತಿಯಿಂದ ಹೊರಗಿಡಲು ಪ್ರಯತ್ನಿsಸಿತ್ತು. ಆದರೆ ಅದು ಅನೂರ್ಜಿತವಾಗುತ್ತದೆ ಎಂದು ತಿಳಿದ ಕೂಡಲೇ ಸುಪ್ರೀಂ ಕೋರ್ಟಿನಲ್ಲಿ ಪ್ರಕರಣ ಸಂಖ್ಯೆ: ರಿಟ್ ಪಿಟಿಷನ್(ಸಿವಿಲ್)ನಂ.435/2023 ರಲ್ಲಿ ಸಾಲಿಸಿಟರ್ ಜನರಲ್‌ರವರು ತಿಳಿಸಿದ ಅಭಿಪ್ರಾಯಗಳನ್ನು ಗೌರವಾನ್ವಿತ ಸುಪ್ರೀಂ ಕೋರ್ಟ್ ದಾಖಲಿಸಿಕೊಂಡಿದೆ.

“We further record the following statements made by the learned solicitor General:

(1) The impugned orders dated 27.03.2023 shall not be implemented till the next date of hearing.
(2) He further submits that the earlier regime relating to reservation viz., Notification dated 30.03.2002 will continue to hold the field till the next date of hearing.

He undoubtedly submits that this submission which he made is without prejudice to his contentions.”

10.​ರಾಜಕಾರಣವನ್ನು ಪ್ರಾಮಾಣಿಕ ಕಾಳಜಿಯಿಂದ ಮಾಡಬೇಕು. ಅದು ಅರ್ಥಬದ್ಧವಾಗಿರಬೇಕು. ನಮ್ಮ ರಾಜಕಾರಣ ಪ್ರಾಮಾಣಿಕವಾಗಿರುವುದು ಮುಖ್ಯ. ಇಲ್ಲದಿದ್ದರೆ, ಓಟಿನ ಗಿಮಿಕ್ಕಿಗಾಗಿ ರಾಜಕಾರಣ ಮಾಡಿದರೆ ಮುಸ್ಲಿಂ ಮೀಸಲಾತಿ ವಿಚಾರದಲ್ಲಿ ರಾಜ್ಯದಲ್ಲಿ ಜನರ ಮುಂದೆ ಒಂದು ತೀರ್ಮಾನ ತೆಗೆದುಕೊಂಡು, ಸುಪ್ರೀಂ ಕೋರ್ಟಿನಲ್ಲಿ ಒಂದು ನಿಲುವನ್ನು ತೆಗೆದುಕೊಂಡಂತೆ ಎಲ್ಲ ವಿಚಾರಗಳಿಗೂ ಅನ್ವಯವಾಗುತ್ತದೆ.

ಒಟ್ಟಾರೆ ನಮ್ಮ ಸರ್ಕಾರವು ನಾಡಿನ ಸಮಗ್ರ ಅಭಿವೃದ್ಧಿಗಾಗಿ ದುಡಿಯುತ್ತಿದೆ. ಸುಸ್ಥಿರ ಅಭಿವೃದ್ಧಿಯತ್ತ ಕರ್ನಾಟಕವನ್ನು ಮುನ್ನಡೆಸುವುದು ನಮ್ಮ ಗುರಿ. ಮುಂದಿನ ದಿನಗಳಲ್ಲಿ ರಾಜಸ್ವ ಕೊರತೆಯನ್ನು ಹೋಗಲಾಡಿಸಿ ರೆವಿನ್ಯೂ ಸರ್ಪ್ಲಸ್ ಬಜೆಟ್ ಮಂಡಿಸುವುದೂ ಕೂಡ ನಮ್ಮ ಧ್ಯೇಯ.

ಇದು ಸರ್ವರ ಬಜೆಟ್. ಹಾಗೆಯೇ ಸರ್ವೋದಯದ ಬಜೆಟ್ ಎಂದು ಮತ್ತೊಮ್ಮೆ ತಮಗೆ ತಿಳಿಸಬಯಸುತ್ತೇನೆ.
ನಮ್ಮ ಬಜೆಟ್‌ನಲ್ಲಿ ಈ ಬಾರಿ ಅನೇಕ ಹೊಸ ಕಾರ್ಯಕ್ರಮಗಳನ್ನು ತಂದಿದ್ದೇವೆ. ಪಶುಪಾಲಕರ ಕುರಿ, ಮೇಕೆ, ಎತ್ತು, ಹಸು ಆಕಸ್ಮಿಕವಾಗಿ ಮೃತಪಟ್ಟರೆ ಪರಿಹಾರ ಧನ ಹೆಚ್ಚು ಮಾಡುವುದರಿಂದ ಹಿಡಿದು, ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ತಂದಿದ್ದೇವೆ. ಕೃಷಿ ಕ್ಷೇತ್ರಕ್ಕೆ ಕೊಡಲಾಗಿತ್ತು. ಈ ಬಾರಿ ನಾವು ಸಮಗ್ರ ಕೃಷಿ ಕ್ಷೇತ್ರಕ್ಕೆ 51,339 ಕೋಟಿ ರೂ.ಗಳನ್ನು ಕೊಟ್ಟಿದ್ದೇವೆ.

2022-23 ರಲ್ಲಿ ಮಹಿಳಾ ಅಭಿವೃದ್ಧಿಗೆ 43,188 ಕೋಟಿ ರೂ. ಕೊಡಲಾಗಿತ್ತು. 2025-26 ರಲ್ಲಿ 94,084 ಕೋಟಿ ರೂ. ಕೊಟ್ಟಿದ್ದೇವೆ.

ಮಕ್ಕಳ ಬಜೆಟ್ಟಿಗಾಗಿ 2022-23 ರಲ್ಲಿ 40,944 ಕೋಟಿ ರೂ. ಗಳನ್ನು ಕೊಡಲಾಗಿತ್ತು. 2025-26 ರಲ್ಲಿ 62,033 ಕೋಟಿ ರೂ. ಕೊಟ್ಟಿದ್ದೇವೆ.

ಇಷ್ಟೆಲ್ಲಾ ಆದ ಮೇಲೂ ನಿಮಗೆ ಬಜೆಟ್ ಬಗ್ಗೆ ಆಕ್ಷೇಪಗಳಿದ್ದರೆ, ಅದು ರಾಜಕೀಯ ಪ್ರೇರಿತವಾದ ಆಕ್ಷೇಪಗಳೇ ಹೊರತು, ಪ್ರಾಮಾಣಿಕ ಅಭಿಪ್ರಾಯಗಳಲ್ಲಿ. ಬಹುಶಃ ಜನರ ಅಭಿಪ್ರಾಯವೂ ಆಗಿರಬಹುದು.

ಕಡೆಯದಾಗಿ ನಿಮ್ಮ ಹಿಂದಿನ ಆಡಳಿತಕ್ಕೆ ಕನ್ನಡಿಯಂತಿರುವ ಬಸವಣ್ಣನವರ ವಚನವನ್ನು ಓದಬೇಕೆಂದೆನಿಸುತ್ತಿದೆ.

ಆನೆಯನೇರಿಕೊಂಡು ಹೋದಿರೇ ನೀವು
ಕುದುರೆಯನೇರಿಕೊಂಡು ಹೋದಿರೇ ನೀವು
ಕುಂಕುಮ ಕಸ್ತೂರಿಯ ಪೂಸಿಕೊಂಡು ಹೋದಿರೇ ಅಣ್ಣಾ
ಸತ್ಯದ ನಿಲುವನರಿಯದೆ ಹೋದಿರಲ್ಲಾ
-​ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣ

ಬಸವಣ್ಣನವರು ಬಹುಶಃ ನಿಮ್ಮಂತವರನ್ನು ನೋಡಿಯೇ ಹೀಗೆ ಹೇಳಿದ್ದಾರೆ ಎಂದು ನನಗನಿಸುತ್ತದೆ ಎಂದರು.

Related Articles

Back to top button