ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸೌಧದಲ್ಲಿ 10.5 ಲಕ್ಷ ಅನಧಿಕೃತ ಹಣ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ಪಿ ಡಬ್ಲ್ಯೂ ಡಿ ಎಇ ಜಗದೀಶ್ ಪರ ವಕೀಲರು ಸ್ಪಷ್ಟನೆ ನೀಡಿದ್ದು, ಲಂಚ ಕೊಡಬೇಕು ಎಂದು ತೆಗೆದುಕೊಂಡು ಹೋಗುತ್ತಿದ್ದ ಹಣವಲ್ಲ ಎಂದು ತಿಳಿಸಿದ್ದಾರೆ.
ಎಇ ಜಗದೀಶ್ ಮೇಲೆ ಚಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು. ಪ್ರಕರಣದ ಇತ್ಯರ್ಥಕ್ಕಾಗಿ ಬೆಂಗಳೂರಿಗೆ ಬರುವಾಗ ಹಣ ತಂದಿದ್ದರು. ಇದೇ ವೇಳೆ ಅರ್ಜೆಂಟ್ ಆಗಿ ಅಧಿಕಾರಿಯೊಬ್ಬರನ್ನು ಭೇಟಿ ಮಾಡಬೇಕಿತ್ತು. ಹೀಗಾಗಿ ವಿಧಾನಸೌಧಕ್ಕೆ ತೆರಳಿದ್ದರು ಅಷ್ಟೇ ಹೊರತು ಯಾರಿಗೋ ಹಣ ನೀಡಬೆಕು ಎಂದು ಹೋಗಿಲ್ಲ ಎಂದು ಜಗದೀಶ್ ಪರ ವಕೀಲ ರಾಜು ಗಡೇಕರ್ ತಿಳಿಸಿದ್ದಾರೆ.
ಡಿಸಿಪಿ ವಿಚಾರಣೆ ನಡೆಸಿದ್ದ ವೇಳೆ ಜಗದೀಶ್ ಎಲ್ಲಾ ಮಾಹಿತಿ ನೀಡಿದ್ದಾರೆ. ಕರ್ನಾಟಕ ಪೊಲಿಸ್ ಕಾಯ್ದೆಯಡಿ ಕೇಸ್ ದಾಖಲಿಸಿದ್ದಾರೆ. ಇದರಡಿ ಕೇಸ್ ದಾಖಲಿಸಲು ಕೋರ್ಟ್ ಅನುಮತಿ ಪಡೆದಿರಬೇಕು. ಅದೆಲ್ಲ ಬಿಟ್ಟು ಏಕಾಏಕಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
*ಸಿಎಂ ಮೂಗಿನ ನೇರಕ್ಕೆ ಭ್ರಷ್ಟಾಚಾರ ನಡೆಯುತ್ತಿದೆ; ಆತ ಯಾರಿಗೆ ಹಣ ಕೊಡಲು ತಂದಿದ್ದ?; ಸಿದ್ದರಾಮಯ್ಯ ಪ್ರಶ್ನೆ*
https://pragati.taskdun.com/vidhanasoudha10-5-lakh-foundsiddaramaiah-reaction/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ