ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಧಾನಸಭೆ ಸಚಿವಾಲಯವನ್ನೇ ಬಂದ್ ಮಾಡಿ ಪ್ರತಿಭಟನೆ ನಡೆಸಲು ಸಚಿವಾಲಯದ ನೌಕರರ ಸಂಘ ನಿರ್ಧರಿಸಿದೆ.
ಮೇ 27ರಂದು ವಿಧಾನಸಭಾ ಸಚಿವಾಲಯದ ನೌಕರರು ಸಾಮೂಹಿಕವಾಗಿ ರಜೆ ಹಾಕುವ ಮೂಲಕ ಬಂದ್ ಗೆ ಕರೆ ಕೊಟ್ಟಿದ್ದಾರೆ.
542 ಕಿರಿಯ ಸಹಾಯಕರ ಹುದ್ದೆ ಕಡಿತಗೊಳಿಸುವ ಪ್ರಸ್ತಾವನೆ ಕೈಬಿಡಬೇಕು. ನಿವೃತ್ತಿಯಾದ ಅಧಿಕಾರಿಗಳು, ನೌಕರರ ಪುನರ್ ನೇಮಕಾತಿ ರದ್ದು ಮಾಡಬೇಕು, ಸಚಿವಾಲಯದ ಅಧಿಕಾರಿಗಳು ನಿಯೋಜನೆ ಮೇರೆಗೆ ಇತರೆ ಇಲಾಖೆಗೆ ಹೋಗುವ ಅವಕಾಶ ಮರುಸ್ಥಾಪಿಸಲು ಒತ್ತಾಯ ಕೇಳಿಬಂದಿದೆ. ಇಲಾಖೆಗಳ ಹುದ್ದೆಗಳ ಕಡಿತ ಪ್ರಸ್ತಾಪ ಕೈಬಿಡಬೇಕು ಎಂದು ಆಗ್ರಹಿಸಿ ವಿಧಾನಸೌಧದ ನೌಕರರು ಸಾಮೂಹಿಕ ರಜೆ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಬ್ ಜಿ ಹುಚ್ಚಾಟ: ತಂದೆ-ಮಗನ ಜಗಳ; ಗುಂಡೇಟಿಗೆ ತಾಯಿ ಬಲಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ