
ಪ್ರಗತಿವಾಹಿನಿ ಸುದ್ದಿ: ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ನಡೆಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂಬ ವಿಚಾರ ಭಾರಿ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಹಾಗೂ ಕನ್ನಡಪರ ಸಂಘಟನೆಗಳು ಮತ್ತು ವಿಪಕ್ಷಗಳು ಈ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಈ ಬಗ್ಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಸ್ಪಷ್ಟನೆ ನೀಡಲಾಗಿದೆ.
ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಯಾವುದೇ ಸರ್ಕಾರಿಯೇತರ ಕಾರ್ಯಕ್ರಮಗಳಿಗೆ ಆಸ್ಪದ ಇರುವುದಿಲ್ಲ. ವಿಧಾಅನಸೌಧದ ಮೆಟ್ತಿಲುಗಳ್ ಅಮೇಲೆ ಉರ್ದು ಹಬ್ಬ ಎಂಬ ಈ ಕುರಿತ ಸುದ್ದಿ ಸುಳ್ಳು. ರಾಜ್ಯ ಸರ್ಕಾರವು ಇಂತಹ ಯಾವುದೇ ಅನುಮತಿ ನೀಡಿಲ್ಲ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.
ಇದರ ಬೆನ್ನಲ್ಲೇ ಸಚಿವ ಯು.ಟಿ.ಖಾದರ್ ಪ್ರತಿಕ್ರಿಯಿಸಿದ್ದು, ಉರ್ದು ಹಬ್ಬವನ್ನು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಮಾಡಬೇಕು ಎನ್ನುವುದು ನನ್ನ ವಯಕ್ತಿಕ ಅಭಿಪ್ರಾಯ. ಈ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಪ್ರತಿ ಭಾಷೆಗೂ ಮಹತ್ವ ಇದ್ದು, ಅದಕ್ಕೆ ರಾಜಕೀಯ ಸೇರಬಾರದು. ಸ್ಪೀಕರ್ ಆಗಿದ್ದಾಗ ವಿಧಾನಸೌಧದಲ್ಲಿ ಯಕ್ಷಗಾನ ಮಾಡಿಸಬೇಕು ಎಂದು ಯೋಚಿಸಿದ್ದೆ. ಬುಕ್ ಉತ್ಸವವನ್ನು ವಿಧಾನಸೌಧದಲ್ಲಿ ಮಾಡಿದ್ದೆ. ಉರ್ದು ಹಬ್ಬ ಕೇವಲ 3 ಗಂಟೆಗಳ ಕಾರ್ಯಕ್ರಮವಾಗಿದ್ದು, ಹೆಚ್ಚು ಜನಕ್ಕೆ ತಿಳಿಯಬೇಕು ಎಂಬ ಕಾರಣಕ್ಕೆ ಆಚರಿಸಲು ಹೊರಟಿದ್ದೆವು. ಆದರೆ ಅದರಿಂದ ತೊಂದರೆ ಆಗುತ್ತದೆ ಅಂದರೆ, ಅದನ್ನು ಮಾಡಲು ಹೋಗಲ್ಲ. ಸೌಹಾರ್ದ ಸಮಾಜ, ಬಲಿಷ್ಠ ಭಾರತ ನಮ್ಮ ಕನಸು ಎಂದವರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




