
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಕೆಎಲ್‌ಎಸ್ ಜಿಐಟಿ ಬೆಳಗಾವಿಯ ಸ್ಪಿಕ್ ಮೆಕೆ (ಸೊಸೈಟಿ ಫಾರ್ ಪ್ರಮೋಷನ್ ಆಫ್ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ಅಂಡ್ ಕಲ್ಚರ್ ಅಮಾಂಗ್‌ಸ್ಟ್ ಯೂತ್) ವಿದ್ಯಾರ್ಥಿ ವಿಭಾಗದ ಅಡಿಯಲ್ಲಿ, ವಿದ್ವಾನ್ ಮೈಸೂರು ಎ ಚಂದನ್ ಕುಮಾರ್ ಅವರಿಂದ ಕರ್ನಾಟಕಿ ಸಂಗೀತ, ಕೊಳಲು ವಾದನ ಕಾರ್ಯಕ್ರಮ ಜುಲೈ 15 ರಂದು ಜಿಐಟಿಯ ಸಿಲ್ವರ್ ಜುಬಿಲಿ ಸಭಾಂಗಣದಲ್ಲಿ ನಡೆಯಿತು.
ಜ್ಞಾನದೇವ್ ಪಪ್ಪು ಮತ್ತು ಶ್ರೀ ಅರ್ಜುನ್ ಕುಮಾರ್ ಪಿಟೀಲು ಮತ್ತು ಮೃದಂಗದಲ್ಲಿ ಅವರಿಗೆ ಜೊತೆಯಾದರು. ಅತ್ಯುತ್ತಮ್ಮ ಮಾಧುರ್ಯದ ರಸದೌತಣದಲ್ಲಿ ವಾತಾಪಿ ಗಣಪತಿ, ಅಲ್ಲಮಾಚಾರ್ಯ ಸಂಕೀರ್ತನೆ, ಪಾಶ್ಚಾತ್ಯ ಪ್ರಭಾವದ ಭಾರತೀಯ ಸಂಯೋಜನೆ, ಮೂಲ ಕರ್ನಾಟಕ ಸಂಯೋಜನೆ ಮತ್ತು ಭಾಗ್ಯದ ಲಕ್ಷ್ಮಿ ಬಾರಮ್ಮ ಸಂಯೋಜನೆಗಳನ್ನು ನುಡಿಸಲಾಯಿತು.
ಸ್ಪಿಕ್ ಮೆಕೆ ಎಂಬುದು ಲಾಭರಹಿತ, ರಾಜಕೀಯೇತರ, ಸ್ವಯಂಪ್ರೇರಿತ ಆಂದೋಲನವಾಗಿದ್ದು, 1977 ರಲ್ಲಿ ದೆಹಲಿಯ ಐಐಟಿಯಲ್ಲಿ ಪ್ರಾಧ್ಯಾಪಕರಾದ ಡಾ. ಕಿರಣ್ ಸೇಠ್ ಅವರಿಂದ ಪ್ರಾರಂಭಗೊಂಡಿತು.ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಹೆಚ್ಚಿನ ಮಾನ್ಯತೆ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಸಾಂಪ್ರದಾಯಿಕ ಭಾರತೀಯ ಮೌಲ್ಯಗಳ ಅರಿವನ್ನು ಹೆಚ್ಚಿಸುವುದು ಮತ್ತು ಶಿಕ್ಷಣವನ್ನು ಹೆಚ್ಚು ಸಮಗ್ರಗೊಳಿಸುವುದು ಇದರ ಉದ್ದೇಶವಾಗಿದೆ.
ಡಾ.ಚೇತನ್ ಕೊಟಬಾಗೆ, ಪ್ರೊ. ಅಭಿಷೇಕ್ ದೇಶಮುಖ ಮತ್ತು ಸ್ಪಿಕ್ ಮೆಕೆ ನ ವಿದ್ಯಾರ್ಥಿ ಸ್ವಯಂಸೇವಕರು ಈ ಕಾರ್ಯಕ್ರಮವನ್ನು ಸಂಯೋಜಿಸಿದರು. ಜಿಐಟಿಯ ವಿದ್ಯಾರ್ಥಿಗಳು, ಅಧ್ಯಾಪಕರು, ಪ್ರಭಾರಿ ಪ್ರಾಚಾರ್ಯ ಪ್ರೊ.ಡಿ.ಎ.ಕುಲಕರ್ಣಿ, ವಿದ್ಯಾರ್ಥಿ ವಿಭಾಗದ ಡೀನ್ ಪ್ರೊ.ಎಸ್.ಪಿ.ದೇಶಪಾಂಡೆ ಹಾಗೂ ಗಣ್ಯರು ಉಪಸ್ಥಿತರಿದ್ದರು.
ಬೆಳಗಾವಿ : ಅಪಘಾತದಲ್ಲಿ ಶಿಕ್ಷಕ ನಿಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ