Belagavi NewsBelgaum NewsKarnataka NewsSports

*ಬೆಳಗಾವಿಯಲ್ಲಿ ವಿದ್ಯಾ ಭಾರತಿ 37ನೇ ರಾಷ್ಟ್ರಮಟ್ಟದ ಬಾಲಕಿಯರ ಫುಟ್ಬಾಲ್ ಪಂದ್ಯಾವಳಿ: ಇಂದು ಸಂಜೆ 6ಕ್ಕೆ ಉದ್ಘಾಟನೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ವಿದ್ಯಾ ಭಾರತಿ – ಬೆಳಗಾವಿ, ಕರ್ನಾಟಕ ದಕ್ಷಿಣ ಮಧ್ಯ ಪ್ರಾಂತ ಹಾಗೂ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆ, ಅನಗೋಳ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ವಿದ್ಯಾ ಭಾರತಿ 37ನೇ ರಾಷ್ಟ್ರಮಟ್ಟದ ಬಾಲಕಿಯರ ಫುಟ್ಬಾಲ್ ಪಂದ್ಯಾವಳಿ ಅನಗೋಳದ ಸಂತ ಮೀರಾ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ.

ಪಂದ್ಯಾವಳಿಯು ಅಕ್ಟೋಬರ್ 9 ರಿಂದ 11, 2026 ರವರೆಗೆ ನಡೆಯಲಿದ್ದು, ಇಂದು ಗುರುವಾರ ಅಕ್ಟೋಬರ್ 8 ರಂದು ಸಂಜೆ 6.00 ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ.

ಗಣ್ಯರ ಉಪಸ್ಥಿತಿ:

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಳಗಾವಿ ಡಿಡಿಪಿಐ ಲೀಲಾವತಿ ಹಿರೇಮಠ ಅವರು ಆಗಮಿಸಲಿದ್ದಾರೆ.

ಗೌರವ ಅತಿಥಿಗಳಾಗಿ ಬೆಳಗಾವಿ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಸ್ವಪ್ನಿಲ್ ಶಹ ಹಾಗೂ ಮಿ. ಇಂಡಿಯಾ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಸುನಿಲ್ ಅಪ್ಟೇಕರ್ ಅವರು ಭಾಗವಹಿಸಲಿದ್ದಾರೆ.

ವಿದ್ಯಾ ಭಾರತಿ ಪೂರ್ವೋತ್ತರ ಕ್ಷೇತ್ರದ ವೀಕ್ಷಕರಾದ ಸುಬೋಧ್ ಬೋರಾ ಅವರ ಉಪಸ್ಥಿತಿ ಹಾಗೂ ವಿದ್ಯಾ ಭಾರತಿ ಕರ್ನಾಟಕದ ಅಧ್ಯಕ್ಷರಾದ ಪರಮೇಶ್ವರ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಉದ್ಘಾಟನೆ ಆನಗೋಳದ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ನಡೆಯಲಿದೆ.

ವಿದ್ಯಾ ಭಾರತಿ ಬೆಳಗಾವಿ ಅಧ್ಯಕ್ಷ ಮಾಧವ ಪುಣೇಕರ್, ಸಂತ ಮೀರಾ ಶಾಲೆಯ ಆಡಳಿತಾಧಿಕಾರಿ ರಾಘವೇಂದ್ರ ಕುಲಕರ್ಣಿ ಹಾಗೂ ಮುಖ್ಯೋಪಾಧ್ಯಾಯಿನಿ ಸುಜಾತಾ ಯು. ದಪ್ತಾರದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button