Kannada NewsLatestNationalPolitics

*ವಿಧಾನಸಭೆಯಲ್ಲಿ ಅಗ್ನಿ ಪರೀಕ್ಷೆ ಗೆದ್ದ ದಳಪತಿ: ವಿಶ್ವಾಸ ಮತ ಗೆದ್ದ ವಿಜಯ್*

ಪ್ರಗತಿವಾಹಿನಿ ಸುದ್ದಿ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ದ ಪಕ್ಷವಾಗಿ ಹೊರಹೊಮ್ಮಿದ್ದ ನಟ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ ಪಕ್ಷ ಇದೀಗ ವಿಧಾನಸಭೆಯಲ್ಲಿಯೂ ವಿಶ್ವಾಸ ಗೆಲ್ಲುವ ಮೂಲಕ ಸರ್ಕಾರವನ್ನು ಸೇಫ್ ಆಗಿಸಿದೆ.

ತಮಿಳುನಾಡು ವಿಧಾನಸಭೆಯಲ್ಲಿ ಇಂದು ನೂತನ ಸಿಎಂ ಜೋಸೆಫ್ ವಿಜಯ್ ವಿಶ್ವಾಸಮತ ಗೆದ್ದಿದ್ದಾರೆ. ವಿಜಯ್ ನೇತೃತ್ವದ ಸರ್ಕಾರಕ್ಕೆ ಒಟ್ಟು 144 ಶಾಸಕರು ಬೆಂಬಲ ಘೋಷಿಸಿದ್ದಾರೆ.

ವಿಶ್ವಾಸಮತದ ವೇಳೆ ವಿಜಯ್ ವಿರುದ್ಧ 22 ಶಾಸಕರು ಮತ ಹಾಕಿದ್ದಾರೆ. ಎಐಎಡಿಎಂಕೆಯ 25 ಮಂದಿ ಬಂಡಾಯ ಶಾಸಕರೂ ವಿಜಯ್ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ. ಕಾಂಗ್ರೆಸ್ ನ ಐವರು, ವಿಸಿಕೆಯ ಇಬ್ಬರು, ಸಿಪಿಐ ನ ಇಬ್ಬರು ಶಾಸಕ್ರು, ಸಿಪಿಐ (ಎಂ)ನ ಇಬ್ಬರು, ಐಯುಎಂಎಲ್ ನ ಇಬ್ಬರು, ಎಐಎಡಿಎಂಕೆಯ 25 ಶಾಸಕರು ಸೇರಿ ಒಟ್ಟು ವಿಜಯ್ ಸರ್ಕಾರದ ಪರ 144 ಶಾಸಕರು ಬೆಂಬಲ ಘೋಷಿಸಿದ್ದಾರೆ.

ವಿಶ್ವಾಸಮತ ಸಾಬೀತು ಪಡಿಸಿದ ವಿಜಯ್ ಸರ್ಕಾರಕ್ಕೆ ಸ್ಪೀಕರ್ ಶುಭ ಕೋರಿದ್ದಾರೆ. ಇನ್ನು ಆರು ತಿಂಗಳವರೆಗೆ ವಿಜಯ್ ಸರ್ಕಾರ ಸೇಫ್ ಆದಂತಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button