
ಪ್ರಗತಿವಾಹಿನಿ ಸುದ್ದಿ: ವಿಜಯಪುರ ಜಿಲ್ಲೆಯ ಚಡಚಣದಲ್ಲಿ ಎಸ್ ಬಿಐ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರಾಕೇಶ್ ಕುಮಾರ್ ಸಹಾನಿ (22), ರಾಜಕುಮಾರ್ ಪಾಸ್ವಾನ್ (21) ಹಾಗೂ ರಕ್ಷಕ್ ಕುಮಾರ್ ಮಾತೋ ಬಂಧಿತ ಆರೋಪಿಗಳು. ಈಗಾಗಲೇ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಇದೀಗ ಮೂವರನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಬಿಹಾರ ಮೂಲದವರಾಗಿದ್ದು, ದರೋಡೆಗೆಂಡೆ ಗನ್ ಖರೀದಿಸಿ ತಂದಿದ್ದರು. ಬಿಹಾರದಿಂದ ಕಂಟ್ರಿ ಪಿಸ್ತೂಲ್ ಖರೀದಿಸಿ ತಂದಿದ್ದರು.
ತನಿಖೆ ದೃಷ್ಟಿಯಿಂದ ಓರ್ವ ಆರೋಪಿ ಹೆಸರನ್ನು ಪೊಲೀಸರು ಬಹಿರಂಗ ಪಡಿಸಿಲ್ಲ ಎಂದು ತಿಳಿದುಬಂದಿದೆ. ಚಡಚಣ ಎಸ್ ಬಿಐ ಬ್ಯಾಂಕ್ ನಿಂದ 23 ಕೆಜಿ ಚಿನ್ನಾಭರಣ, 1.50 ಕೋಟಿ ನಗದು ದೋಚಿ ದರೋಡೆಕೋರರು ಪರಾರಿಯಾಗಿದ್ದರು.