Kannada NewsKarnataka NewsLatest

*ಪ್ರಿಯಕರನ ಜೊತೆ ಸೇರಿ ಮಲಗಿದ್ದ ಗಂಡನ ಮುಗಿಸಲು ಸ್ಕೆಚ್: ಬದುಕ್ಕಿದ್ದೇ ರೋಚಕ*

ಪ್ರಗತಿವಾಹಿನಿ ಸುದ್ದಿ: ಪ್ರಿಯಕರನೊಂದಿಗೆ ಸೇರಿ ರಾತ್ರಿ ಮಲಗಿದ್ದ ತನ್ನ ಗಂಡನನ್ನ ಹೆಂಡತಿಯೇ ಕತ್ತು ಹಿಸುಕಿ ಕೊಲೆಗೆ ಯತ್ನಿಸಿ ವಿಫಲವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಕ್ಕಮಹಾದೇವಿ ನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ತನ್ನ ಗಂಡ ಬೀರಪ್ಪ ಮಾಯಪ್ಪ ಪೂಜಾರಿ (36)ಯ ಜೀವ ತೆಗೆಯಲು ಯತ್ನಿಸಿದ ಹೆಂಡತಿ ಸುನಂದ ಹಾಗೂ ಪ್ರಿಯಕರ ಸಿದ್ದಪ್ಪ ಕ್ಯಾತಕೇರಿ ದುಷ್ಕೃತ್ಯಕ್ಕೆ ಕೈ ಹಾಕಿದವರು. ಸಿದ್ದಪ್ಪ ಕ್ಯಾತಕೇರಿ ಎಂಬಾತನೊಂದಿಗೆ ಸುನಂದ ಅನೈತಿಕ ಸಂಬಂಧ ಹೊಂದಿದ್ದಳು. ಹೀಗಾಗಿ ಮಲಗಿದಾಗ ಗಂಡನ ಜೀವ ತೆಗೆಯಲು ಸುನಂದ ಪ್ಲಾನ್ ಮಾಡಿದ್ದಳು. 

ಸುನಂದಾಳ ಪ್ರಿಯಕರ ಮತ್ತು ಆತನ ಸ್ನೇಹಿತ ಮನೆಗೆ ಬಂದು ಮಲಗಿದ್ದ ಬೀರಪ್ಪ ಎದೆಯ ಮೇಲೆ ಕುಳಿತು ಕತ್ತು ಮತ್ತು ಮರ್ಮಾಂಗವನ್ನು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಸುನಂದಾ, ಸಿದ್ದು ಬಿಡಬೇಡ, ಖಲಾಸ್ ಮಾಡು’ ಎಂದು ಪ್ರಿಯಕರನಿಗೆ ಪ್ರೋತ್ಸಾಹಿಸಿದ್ದಾಳೆ.

ಆಗ ಬೀರಪ್ಪ ಎಚ್ಚರಗೊಂಡು ಕಾಲಿನಿಂದ ಕೂಲರ್ ಒದ್ದು ಶಬ್ದವಾದಾಗ ಮನೆಯ ಮಾಲೀಕರು ಎಚ್ಚರಗೊಂಡಿದ್ದಾರೆ. ಈ ಶಬ್ದಕ್ಕೆ ತಕ್ಷಣವೇ ಬಾಗಿಲು ಬಡಿದಾಗ ಬೀರಪ್ಪನ 8 ವರ್ಷದ ಮಗ ಎದ್ದು ಬಾಗಿಲು ತೆರೆದಿದ್ದಾನೆ ಬಳಿಕ ಸಿದ್ದಪ್ಪ ಮತ್ತು ಇನ್ನೊಬ್ಬ ಸಹಾಯಕ ಮನೆಯಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. 

Home add -Advt

ಸದ್ಯ ಬೀರಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭೀರಪ್ಪ ನೀಡಿದ್ದ ದೂರಿನ ಅನ್ವಯ ಸುನಂದಾಳನ್ನು ಇಂಡಿ ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ಆದರೆ, ಪ್ರೀಯಕರ ಪರಾರಿಯಾಗಿದ್ದಾನೆ.

ಪರಾರಿಯಾಗಿರುವ ಸುನಂದಾ ಪ್ರಿಯಕರ ಸಿದ್ಧಪ್ಪ ಅಜ್ಞಾತ ಸ್ಥಳದಿಂದ ವಿಡಿಯೋವೊಂದನ್ನು ಹರಿಬಿಟ್ಟಿದ್ದು ಗಂಡನ ಹತ್ಯೆಗೆ ಸುನಂದಾ ಮಾಡಿದ್ದ ಪ್ಯಾನ್ ಅನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಭೀರಪ್ಪನ ಹತ್ಯೆಗೆ ಸ್ಕೆಚ್ ಹಾಕಿದ್ದೇ ಸ್ವತಃ ಪತ್ನಿ ಸುನಂದಾ. 

ಆಕೆಯೇ ಹತ್ಯೆಗೆ ದಿನ ಹಾಗೂ ಟೈಂ ಫಿಕ್ಸ್ ಮಾಡಿದ್ದಳಂತೆ. ಆದರೀಗ ಪ್ರಕರಣದಲ್ಲಿ ತನ್ನನ್ನು ಮಾತ್ರ ಸಿಕ್ಕಿ ಹಾಕಿಸಲು ಪ್ಲಾನ್ ಸಹ ಮಾಡಿದ್ದಳು ಎಂದು ಪ್ರಿಯಕರ ವಿಡಿಯೋದಲ್ಲಿ ಹೇಳಿದ್ದಾನೆ.

ಇಬ್ಬರು ಸೇರಿಯೇ ಕೊಲೆಗೆ ಯತ್ನಿಸಿದ್ದೇವೆ. ಆದರೆ ಸುನಂದಾ ಹಾಗೂ ಆಕೆ ಅಣ್ಣ, ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯ ಸೇರಿ ನನ್ನೊಬ್ಬನನ್ನೆ ಕೊಲೆ ಕೇಸ್‌ನಲ್ಲಿ ಫಿಟ್ ಮಾಡಲು ಪ್ಲಾನ್ ಮಾಡಿದ್ದಾರೆ ಪೊಲೀಸರು ಇಬ್ಬರನ್ನು ಆರೋಪಿಗಳನ್ನಾಗಿ ಮಾಡಲಿ ಎಂದು ಆಗ್ರಹಿಸಿದ್ದಾನೆ.

ಈ ಸಂಬಂಧ ಇಂಡಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರೀಯಕರನಿಗಾಗಿ ಪತಿಯ ಕೊಲೆಗೆ ಸ್ಕೆಚ್ ಹಾಕಿ ಸಿಕ್ಕಿಬಿದ್ದವಳು ಜೈಲು ಸೇರಿದಾಳೆ

Related Articles

Back to top button