Karnataka News

*ವಿಜಯಪುರದಲ್ಲಿ ಭೂಕಂಪ: ಮನೆಯಿಂದ ಹೊರಗೋಡಿಬಂದ ಜನರು*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಒಂದೆಡೆ ಗುಡುಗು ಸಹಿತ ಭಾರಿ ಮಳೆ ಮುಂದುವರೆದಿದೆ. ಇನ್ನೊಂದೆಡೆ ವರುಣಾರ್ಭಟಕ್ಕೆ ರಾಜ್ಯ ರಾಜಧಾನಿ ಬೆಂಗಳೂರಿನ ಬಹುತೇಕ ಪ್ರದೇಶಗಳೇ ಮುಳುಗಡೆಗಾದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮತ್ತೊಂದೆಡೆ ವಿವಿಧ ಜಿಲ್ಲೆಗಳಲ್ಲಿಯೂ ಮಳೆ ಅವಾಂತರಕ್ಕೆ ಜನರು ನಲುಗಿ ಹೋಗಿದ್ದಾರೆ. ಈ ಮಧ್ಯೆ ವಿಜಯಪುರ ಜಿಲ್ಲೆಯಲ್ಲಿ ಭೂಕಂಪ ಸಂಭವಿಸಿದೆ.

ಭೂಕಂಪದ ತೀವ್ರತೆಗೆ ಮನೆಗಳಲ್ಲಿನ ಪಾತ್ರೆಗಳು, ವಸ್ತುಗಳು ನೆಲಕ್ಕೆ ಬಿದ್ದಿದ್ದು, ಭಾರಿ ಶಬ್ಧ ಕೇಳಿ ಜನರು ಪ್ರಾಣ ಭಯದಲ್ಲಿ ಹೊರಗೋಡಿಬಂದಿದ್ದಾರೆ.

ತಿಕೋಟಾ ತಾಲೂಕಿನ ಟಕ್ಕಳಕಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ, ಕಳ್ಳಕವಟಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭೂಕಂಪದ ಅನುಭವವಾಗಿದೆ.

ಮಹಾರಾಷ್ಟ್ರ ಗಡಿ ಭಾಗದ ಮೊರಬಗಿ, ತಿಕ್ಕುಂಡಿ, ಆಸಂಗಿ ಗ್ರಾಮಗಳಲ್ಲಿಯೂ ಭೂಮಿ ಕಂಪಿಸಿದ್ದು, ಜನರು ಆತಂಕಕ್ಕೀಡಾಗಿದ್ದಾರೆ.

Home add -Advt


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button