Kannada NewsKarnataka NewsLatest
*ಸಿಗರೇಟ್ ಕಿಡಿಯಿಂದ ಅನಾಹುತ: ಸಿಲಿಂಡರ್ ಸ್ಫೋಟಗೊಂಡು ಗೂಡಂಗಡಿಗಳಿಗೆ ಹೊತ್ತಿದ ಬೆಂಕಿ*

ಪ್ರಗತಿವಾಹಿನಿ ಸುದ್ದಿ: ಸಿಗರೇಟ್ ಕಿಡಿಯಿಂದಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸಿಲಿಂಡರ್ ಸ್ಫೋಟಗೊಂಡಿದ್ದು, ಏಳು ಗೂಡಂಗಡಿಗಳು ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆಯ ಚಾಲುಕ್ಯ ನಗರದ ಎಸ್ ಬಿ ಐ ಬ್ಯಾಂಕ್ ಬಳಿ ನಡೆದಿದೆ. ಬೆಂಕಿ ಅವಘಾಡದಲ್ಲಿ ಟೀ-ಕಾಫಿ ಟೀ ಸ್ಟಾಲ್, ಪುಡ್ ಸ್ಟಾಲ್, ವಡಾಪಾವ್ ಶಾಅಪ್ ಗಳು ಬೆಂಕಿಗಾಹುತಿಯಾಗಿವೆ.
ಸಿಗರೇಟ್ ಕಿಡಿಯಿಂದ ಗೂಡಂಗಡಿಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡಿದ್ದು, ಗೂಡಂಗಡಿಗಳಿಗೆ ಹೊತ್ತಿದ ಬೆಂಕಿ ಅಕ್ಕ-ಪಕ್ಕದ ಮನೆಗಳಿಗೂ ವ್ಯಾಪಿಸಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಏಳು ಗೂಡಂಗಡಿಗಳು ಸುಟ್ಟು ಬಸ್ಮವಾಗಿವೆ.



