
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ತಾಲೂಕಿನ ಹುನ್ನರಗಿ ಗ್ರಾಮದ ಇತರ ಪಕ್ಷದ ಕಾರ್ಯಕರ್ತರು ಗುರುವಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ತಾಲೂಕಿನ ಭಿವಶಿ ಗ್ರಾಮದ ತಮ್ಮ ಕಾರ್ಯಾಲಯದಲ್ಲಿ ಹುನ್ನರಗಿಯ ಕಾರ್ಯಕರ್ತರನ್ನು ಬಿಜೆಪಿ ಶಾಲು ಹಾಕಿ ಸ್ವಾಗತಿಸಿಕೊಂಡರು.
ಹುನ್ನರಗಿ ಗ್ರಾಮದ ಡಾ. ರಾಜೇಂದ್ರ ಪಾಟೀಲ, ಡಾ. ನಯನೇಶ ಪಾಟೀಲ, ಅಶೋಕ ಮುರ್ದಂಡೆ, ಸಾತಗೊಂಡಾ ಬಾಗೇವಾಡಿ, ವಿಶಾಲ ಶೆಟ್ಟಿ, ರಂಗರಾವ ಜಾಧವ, ಕಲ್ಲಪ್ಪ ತಹಶೀಲ್ದಾರ, ಸುಭಾಷ ಪಾಟೀಲ, ಬಾಳು ಧನಗರ, ಬಾಳು ಬೋತೆ, ರಾಜು ಗೋರಡೆ, ಗಜಾನನ ಪಾಟೀಲ, ಮೊದಲಾದವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ