Kannada NewsKarnataka NewsLatest

ಕುಪ್ಪಟಗಿರಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ ಎಚ್ಚರಿಕೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಮ್ಮೂರಿನಲ್ಲಿ ಕಳೆದ ಹಲವು ತಿಂಗಳಿನಿಂದ ನಡೆಯುತ್ತಿರುವ ಜಲ ನಿರ್ಮಲ್ ಯೋಜನೆಯ ಕಾಮಗಾರಿಯಲ್ಲಿ ವಿಳಂಬ ನೀತಿಯನ್ನು ಖಂಡಿಸಿ ಮೇ 10ರಂದು ಜರುಗಲಿರುವ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಬಹಿಷ್ಕಾರ ಹಾಕುವುದಾಗಿ ತಾಲ್ಲೂಕಿನ ಕುಪ್ಪಟಗಿರಿ ಗ್ರಾಮಸ್ಥರು ಮಂಗಳವಾರ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.


ಚುನಾವಣೆ ಬಹಿಷ್ಕಾರಕ್ಕೆ ಗ್ರಾಮದ 400ಕ್ಕೂ ಹೆಚ್ಚು ಜನರ ಸಹಮತ ಇರುವ ಮನವಿಯನ್ನು
ಚುನಾವಣಾಧಿಕಾರಿಗಳಿಗೆ ಸಲ್ಲಿಸಿ ಮಾತನಾಡಿದ ಕುಪ್ಪಟಗಿರಿ ಗ್ರಾಮದ ನಿವಾಸಿ ಪದ್ಮಶ್ರೀ
ಪಾಟೀಲ, ತಮ್ಮೂರಿನಲ್ಲಿ ಕಳೆದ ಹಲವು ತಿಂಗಳಿನಿಂದ ಜಲ ನಿರ್ಮಲ್ ಯೋಜನೆಯ ಕಾಮಗಾರಿ
ನಡೆಯುತ್ತಿದೆ. ಈ ಕಾಮಗಾರಿಯ ಗುತ್ತಿಗೆದಾರರಾದ ಬಸವರಾಜ ಹುಂದ್ರಿ ಕಾಮಗಾರಿಗಾಗಿ ಇಡೀ
ಊರಿನ ಎಲ್ಲ ರಸ್ತೆಗಳನ್ನು ಅಗೆಯಿಸಿದ್ದಾರೆ. ಬಳಿಕ ಮುಂದಿನ ಕಾಮಗಾರಿ ಕೈಗೊಳ್ಳದೇ
ಅರ್ಧಕ್ಕೆ ಕೆಲಸ ಬಿಟ್ಟು ಹೋಗಿದ್ದಾರೆ. ಇದರಿಂದಾಗಿ ಗ್ರಾಮದ ಜನರು ಊರಿನಲ್ಲಿ ಸಮಸ್ಯೆ
ಎದುರಿಸುವಂತಾಗಿದೆ. ಈ ಸಮಸ್ಯೆಯನ್ನು ಈಗಾಗಲೇ ಹಲವು ಬಾರಿ ಗ್ರಾಮ ಪಂಚಾಯ್ತಿ,
ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಸಂಬಂಧಿಸಿದ ಗುತ್ತಿಗೆದಾರರ ಗಮನಕ್ಕೆ
ತಂದು ಬೇಗ ಕಾಮಗಾರಿ ಮುಗಿಸಲು ವಿನಂತಿಸಲಾಗಿತ್ತು. ಆದರೆ ಇತ್ತ ಯಾರೊಬ್ಬರೂ ಗಮನ
ಹರಿಸಿಲ್ಲ. ಗುತ್ತಿಗೆದಾರರ ವಿಳಂಬ ನೀತಿ ಮತ್ತು ಅಧಿಕಾರಿಗಳ ನಿರ್ಲಕ್ಷ ಮನೋಭಾವವನ್ನು
ಖಂಡಿಸಿರುವ ಇಡೀ ಗ್ರಾಮಸ್ಥರು ಚುನಾವಣೆಯಲ್ಲಿ ಮತದಾನ ಬಹಿಷ್ಕಾರದ ನಿರ್ಧಾರ
ಕೈಗೊಂಡಿದ್ದೇವೆ ಎಂದರು.

ಖಾನಾಪುರ ತಾಲ್ಲೂಕು ಕುಪ್ಪಟಗಿರಿ ಗ್ರಾಮಸ್ಥರ ಮತದಾನ ಬಹಿಷ್ಕಾರದ ಮನವಿಯನ್ನು ಗ್ರಾಮದ ನಿವಾಸಿ ಪದ್ಮಶ್ರೀ ಪಾಟೀಲ ಚುನಾವಣಾಧಿಕಾರಿ ಅನುರಾಧಾ ವಸ್ತ್ರದ ಮತ್ತು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ವೀರನಗೌಡ ಏಗನಗೌಡರ್ ಅವರಿಗೆ ಸಲ್ಲಿಸಿದರು.


ಮನವಿ ಸ್ವೀಕರಿಸಿದ ಚುನಾವಣಾಧಿಕಾರಿ ಅನುರಾಧಾ ವಸ್ತ್ರದ ಮತ್ತು ತಾಲ್ಲೂಕು ಸ್ವೀಪ್
ಸಮಿತಿ ಅಧ್ಯಕ್ಷ ವೀರನಗೌಡ ಏಗನಗೌಡರ್, “ಕುಪ್ಪಟಗಿರಿ ಗ್ರಾಮಸ್ಥರ ಸಮಸ್ಯೆಯನ್ನು
ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಆದಷ್ಟು ಬೇಗ ಅವರ ಸಮಸ್ಯೆ ಪರಿಹರಿಸಲು
ಯತ್ನಿಸಲಾಗುವುದು ಮತ್ತು ಮತದಾನ ಬಹಿಷ್ಕರಿಸದಂತೆ ಮನವೊಲಿಸಲಾಗುವುದು” ಎಂದು
ಹೇಳಿದರು.


https://pragati.taskdun.com/worlds-first-human-death-from-h3n8-bird-flu/
https://pragati.taskdun.com/cash-transactions-it-is-mandatory-to-enter-in-keem-app-dc-nitesh-patil/
https://pragati.taskdun.com/d-k-shivakumarbjp-leader-padmarajcongress-join/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button