Kannada NewsKarnataka NewsNationalPolitics

*ವಿನಯ್ ಕುಲಕರ್ಣಿ ಪ್ರಕರಣ ಸಿಐಡಿಗೆ*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧದ ಅತ್ಯಾಚಾರ ಆರೋಪ ಕೇಸ್ ಹಾಗೂ ವಿನಯ್ ಈ ಬಗ್ಗೆ ನೀಡಿದ್ದ ಪ್ರತಿದೂರುಗಳ ತನಿಖೆಯನ್ನೂ ಮಾಡಲು ಇದೀಗ ಸಿಐಡಿಗೆ ಒಪ್ಪಿಸಲಾಗಿದೆ. 

ರೈತ ಮುಖಂಡ ಮಹಿಳೆ ವಿನಯ್ ಕುಲಕರ್ಣಿ ವಿರುದ್ಧ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಆರೋಪದಡಿ ದೂರು ನೀಡಿದ್ದರು. ಇನ್ನು ತಮ್ಮನ್ನು 2 ಕೋಟಿ ರೂಪಾಯಿ ನೀಡುವಂತೆ ಬ್ಲಾಕ್ ಮಾಡಿದ್ದಾರೆಂದು ಮಹಿಳೆ ಮತ್ತು ಖಾಸಗಿ ನ್ಯೂಸ್ ಚಾನಲ್ ಮುಖ್ಯಸ್ಥರ ವಿರುದ್ಧ ವಿನಯ್ ಕೂಡ ಪ್ರತಿದೂರನ್ನು ನೀಡಿದ್ದಾರೆ.

ಈ ಎರಡೂ ದೂರುಗಳ ತನಿಖೆಯನ್ನು ಸರ್ಕಾರವು ಸಿಐಡಿಗೆ ವಹಿಸಿ ಆದೇಶ ನೀಡಿದ್ದು, ಇದೀಗ ಸಿಐಡಿ ಪೊಲೀಸರು ದೂರು- ಪ್ರತಿದೂರಗಳ ಸಂಬಂಧ ತನಿಖೆ ಮುಂದುವರಿಸಿದ್ದಾರೆ. ರೈತಪರ ಹೋರಾಟಗಳ ಮೂಲಕ ಮಹಿಳೆಯು ವಿನಯ್ ಕುಲಕರ್ಣಿಗೆ ಪರಿಚಯವಾಗಿದ್ದರು. ತಮ್ಮ ಕೆಲಸದ ನಿಮಿತ್ತ 2022ರಲ್ಲಿ ಬೆಂಗಳೂರಿಗೆ ಬಂದಿದ್ದೆ. ಹೆಬ್ಬಾಳದ ಮನೆಗೆ ಕರೆಸಿಕೊಂಡಿದ್ದಲ್ಲದೆ, ದೇವನಹಳ್ಳಿ ಸಮೀಪ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆಂದು ಆರೋಪಿಸಿ ಮಹಿಳೆಯು ಮೊನ್ನೆಯಷ್ಟೇ ದೂರು ನೀಡಿದ್ದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button