Kannada NewsLatest

ಊಟವೂ ಇಲ್ಲ, ನಿದ್ದೆಯೂ ಇಲ್ಲ; ಸಾಮಾನ್ಯ ಕೈದಿಯಂತೆ ರಾತ್ರಿ ಕಳೆದ ವಿನಯ್ ಕುಲ್ಕರ್ಣಿ

ನಾಳೆ 55ನೇ ಹುಟ್ಟು ಹಬ್ಬ

 

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮಾಜಿ ಸಚಿವ ವಿನಯ್ ಕುಲ್ಕರ್ಣಿ, ಬೆಳಗಾವಿ ಹಿಂಡಲಗಾ ಜೈಲು ಸೇರಿದ್ದು, ರಾತ್ರಿ ನಿದ್ದೆ, ಊಟವಿಲ್ಲದೇ ಕಳೆದಿದ್ದಾರೆ.

ಹಿಂಡಲಗಾ ಜೈಲಿನ ರೆಡ್ ಝೋನ್ ಸೆಲ್‍ನಲ್ಲಿ ಇರುವ ವಿನಯ್ ಕುಲಕರ್ಣಿ, ಸಾಮಾನ್ಯ ಕೈದಿಯಂತೆ ಒಂದು ರಾತ್ರಿ ಕಳೆದಿದ್ದಾರೆ. ಸೊಳ್ಳೆ ಕಾಟದ ಜೊತೆ ಊಟವೂ ಇಲ್ಲದೇ, ರಾತ್ರಿಯಿಡೀ ನಿದ್ದೆ ಮಾಡದೆ ಯೋಚನೆಯಲ್ಲೇ ಕಳೆದಿದ್ದಾರೆ ಎನ್ನಲಾಗಿದೆ.

ನಾಳೆ ವಿನಯ್ ಕುಲ್ಕರ್ಣಿಯವರ 55ನೇ ವರ್ಷದ ಹುಟ್ಟುಹಬ್ಬವಿದ್ದು, ಅಭಿಮಾನಿಗಳು ಸೇರುವ ಸಾಧ್ಯತೆಯಿರುವುದರಿಂದ ಹಿಂಡಲಗಾ ಜೈಲಿನ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಇನ್ನು ಧಾರವಾಡದಲ್ಲಿ ಹಾಕಲಾಗಿದ್ದ ಕಟೌಟ್, ಬ್ಯಾನರ್ ಗಳನ್ನು ತೆರವುಗೊಳಿಸಲಾಗಿದೆ.

Home add -Advt

ಇಂದು ಕೂಡ ಸಿಬಿಐ ಜೈಲು ಕೊಠಡಿಯಲ್ಲಿಯೇ ವಿನಯ್ ಕುಲ್ಕರ್ಣಿಯವರ ವಿಚಾರಣೆ ನಡೆಸಲಿದ್ದು, ಸಿಬಿಐ ಮತ್ತೆ ತನ್ನ ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಮತ್ತೆ ವಶಕ್ಕೆ ಪಡೆದರೆ ನಾಳೆ ಜೈಲಿನಲ್ಲಿಯೇ ಮಾಜಿ ಸಚಿವರು ಹುಟ್ಟುಹಬ್ಬ.

ವಿನಯ ಕುಲಕರ್ಣಿ ಹಿಂಡಲಗಾ ಜೈಲಿಗೆ – ವಿಡೀಯೋ ಸಹಿತ ವರದಿ – Updated

ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರರು ಸಿಬಿಐ ವಶಕ್ಕೆ

2 ವರ್ಷದಲ್ಲಿ ಧಾರವಾಡದಲ್ಲಿ ನಡೆದಿದ್ದು 96 ಕೊಲೆ?

ಬಿಜೆಪಿಯಿಂದ ಜಿಲ್ಲಾ ಕಾರ್ಯದರ್ಶಿ, ಮುನವಳ್ಳಿ ಪುರಸಭೆ ಸದಸ್ಯನ ಉಚ್ಛಾಟನೆ

ನ.18ರಿಂದ ವರ್ಗಾವಣೆ ಆರಂಭ: ತಕ್ಷಣ ಇವುಗಳನ್ನು ಸಿದ್ಧಪಡಿಸಿಕೊಳ್ಳಿ

ಆಂದ್ರಪ್ರದೇಶದಲ್ಲಿ ಶಾಲೆ ಆರಂಭಿಸಿದವರಿಗೆ ಬಿಗ್ ಶಾಕ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button