ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ 2D ಮೀಸಲಾತಿ ಘೋಷಣೆ ಮಾಡುವ ಮೂಲಕ ಚುನಾವಣೆಯಲ್ಲಿ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡಿದೆ ಎಂದು ಮಾಜಿ ಸಚಿವ ವಿನಯ್ ಕುಲ್ಕರ್ಣಿ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿನಯ್ ಕುಲ್ಕರ್ಣಿ, ಪಂಚಮಸಾಲಿ ಸಮುದಾಯಕ್ಕೆ 2D ಮೀಸಲಾತಿ ಘೋಷಿಸಲಾಗಿದೆ. ಇದರಿಂದ ಕೇವಲ 2% ಮೀಸಲಾತಿ ಹೆಚ್ಚಾಗಿದೆ ಇದರಿಂದ ಏನು ಅನುಕೂಲಗಳಾಗುತ್ತವೆ? ಇದು ಸರ್ಕಾರ ಮಾಡಿರುವ ಚುನಾವಣೆ ಗಿಮಿಕ್ ಎಂದರು.
ನಾವ್ಯಾರೂ 2ಡಿ ಮೀಸಲಾತಿಬೇಕು ಎಂದು ಕೇಳಿರಲಿಲ್ಲ. ಪಂಚಮಸಾಲಿ ಸಮೂದಾಯಕ್ಕೆ 17%ರಷ್ಟು ಮೀಸಲಾತಿ ಕೊಡಬೇಕು ಎಂದು ಕೇಳಿದ್ದವು. 2D ಎಂದು 2% ಮೀಸಲಾತಿ ಪಡೆದು ಏನು ಮಾಡಲು ಸಾಧ್ಯ? ಇನ್ನೊಬ್ಬರ ಮೀಸಲಾತಿ ತೆಗೆದುಕೊಡುವ ಅವಶ್ಯಕತೆ ಇರಲಿಲ್ಲ. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆಯಾಗುತ್ತಿದೆ.ಕೇವಲ 2% ಮೀಸಲಾತಿಯಿಂದ ನಮಗೆ ಏನೂ ಸಿಗುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ