ಕವಯಿತ್ರಿ ವಿನೋದಾ ಕರಣಂ ಇನ್ನಿಲ್ಲ

ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ : ಕವಯಿತ್ರಿ,ಬರೆಹಗಾರ್ತಿ ವಿನೋದಾ ಕರಣಂ (53) ಇಂದು ನಿಧನರಾದರು..ಕಡಿಮೆ ರಕ್ತದೊತ್ತಡದಿಂದ ಆಗಾಗ ಆಸ್ಪತ್ರೆ ಸೇರುತ್ತಿದ್ದರು. ನಿನ್ನೆ ರಾತ್ರಿ ಮಲಗಿದವರು ಬೆಳಗಾಗುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ.

ಚಿನ್ಮಯ, ಕರುನಾಡ ಸಿರಿ,ತಾಯಿ ಪ್ರೀತಿ, ಭಾವತರಂಗ,ಶ್ರಾವಣ ಸಂಜೆ,ಪ್ರೇಮ ದೀಪ ಕವನ ಸಂಕಲನಗಳನ್ನು ಕನ್ನಡ ವ್ಯಾಕರಣ,ವಚನ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆಗಳು, ಮುಂತಾದ ಕೃತಿಗಳನ್ನು ಬರೆದಿದ್ದರು. ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಕಳೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಕಳೆದ ವರ್ಷ ಮಗಳ ಅಗಲಿಕೆಯಿಂದ ಖಿನ್ನತೆಗೂ ಒಳಗಾಗಿದ್ದರು. ಅಂತ್ಯಕ್ರಿಯೆ ಇಂದು ಬಳ್ಳಾರಿಯಲ್ಲಿ ನೆರವೇರಿತು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button