ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪತ್ರಿಕಾಗೋಷ್ಠಿ ನಡೆಸಿರುವ ವಿಡೀಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಇದು ಕಳೆದ ವರ್ಷದ್ದು.
ಮಾಳೆಯಿಂದ ಒಂದು ವಾರ ಕಾಲ ಲಾಕ್ ಡೌನ್ ಎನ್ನುವ ಅರ್ಥದಲ್ಲಿ ಯಡಿಯೂರಪ್ಪ ಮಾತನಾಡಿರುವ ಸುಮಾರು 4 ನಿಮಿಷದ ವಿಡೀಯೋ ಇದಾಗಿದ್ದು, ಖಾಸಗಿ ಚಾನೆಲ್ ಒಂದರಲ್ಲಿ ಕಳೆದ ವರ್ಷ ಪ್ರಸಾರವಾದ ವಿಡೀಯೋ ಆಗಿದೆ.
ಕಳೆದ ವರ್ಷ ಕೊರೋನಾ ಅಪ್ಪಳಿಸಿದ ಸಂದರ್ಭದಲ್ಲಿ ಯಡಿಯೂರಪ್ಪ ಪತ್ರಿಕಾಗೋಷ್ಠಿ ನಡೆಸಿದ್ದರು. ಅವರ ಅಕ್ಕ ಪಕ್ಕದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮತ್ತು ಅಂದಿನ ಆರೋಗ್ಯ ಸಚಿವ ಶ್ರೀರಾಮುಲು ಕುಳಿತಿದ್ದಾರೆ. ಅದೇ ವಿಡೀಯೋವನ್ನು ಈಗ ಕೆಲವರು ಹರಿಬಿಟ್ಟಿದ್ದು ವೈರಲ್ ಆಗಿದೆ. ಜನರು ಮತ್ತೆ ಲಾಕ್ ಡೌನ್ ಬಂದೇ ಎಂದು ಭಯಪಡುವಂತಾಗಿದೆ.
ಇದೇ ವಿಡೀಯೋವನ್ನು ಹಲವಾರು ಜನರು ಪ್ರಗತಿವಾಹಿನಿಗೂ ಕಳಿಸಿ ವಿಚಾರಿಸಿದರು. ಸಧ್ಯಕ್ಕೆ ರಾಜ್ಯದಲ್ಲಿ ಲಾಕ್ ಡೌನ್ ಕುರಿತು ಸರಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಮಾಸ್ಕ್ ಧರಿಸುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಹಲವಾರು ಕಟ್ಟುನಿಟ್ಟಿನ ನಿಯಮಗಳನ್ನು ಮಾತ್ರ ರೂಪಿಸಿದೆ.
ಕೊರೋನಾ ನಿಯಂತ್ರಣಕ್ಕೆ ಮೈಕ್ರೋ ಕಂಟೈನ್ಮೆಂಟ್ ಝೋನ್ : ಸಿಎಂ ಸೂಚನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ