Latest

ಲೇವಡಿಗೆ ಕಾರಣವಾದ ವಿರಾಟ್ ಕೋಹ್ಲಿ ಪೋಸ್ಟ್

ಪ್ರಗತಿವಾಹಿನಿ ಸುದ್ದಿ, ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಚಿತ್ರವೊಂದು ನೆಟ್ಟಿಗರ  ಭಾರೀ ಲೇವಡಿಗೆ ಕಾರಣವಾಗಿದೆ.

ಕಲಾಕೃತಿಯೊಂದರ ಕೆಳಗೆ ಕುಳಿತು ಕ್ಲಿಕ್ಕಿಸಿಕೊಂಡ ಫೋಟೊವೊಂದನ್ನು ಪೋಸ್ಟ್ ಮಾಡಿರುವ ಕೋಹ್ಲಿ, ‘What if I fall…Oh but my darling, what if you fly’.  (ನಾನು ಬಿದ್ದರೇನು?.. ಓಹ್ ನನ್ನ ಪ್ರಿಯತಮೆ ನೀನು ಹಾರಿದರೇನು?) ಎಂದು ಬರೆದುಕೊಂಡಿದ್ದಾರೆ.

ಕ್ರಿಕೆಟ್ ನಲ್ಲಿ ಹಲವು ವೈಫಲ್ಯಗಳ ನಂತರದ ಕೋಹ್ಲಿ ಅವರ ಈ ಬರಹ ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದ್ದು ಅವರನ್ನು ಕಾಮೆಂಟ್ ಗಳಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.

“ನೀವು ಕ್ರಿಕೆಟ್ ನಲ್ಲಿ ಏನು ಸಾಧಿಸಿದ್ದೀರೆಂಬುದನ್ನಷ್ಟೇ ಜನ ನೋಡುವುದು” ಎಂದು ಕೆವಿನ್ ಪೀಟರ್ ಸನ್ ಎಂಬುವವರು ಜರಿದಿದ್ದಾರೆ.

Home add -Advt

ಇಂಡಿಗೋ ವಿಮಾನ ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ

Related Articles

Back to top button