ಪ್ರಗತಿವಾಹಿನಿ ಸುದ್ದಿ, ಮಾಂಜರಿ:- ಕರ್ನಾಟಕ, ಮಹಾರಾಷ್ರ್ಟ ರಾಜ್ಯದ ಅಪಾರ ಭಕ್ತಾದಿಗಳ ಆರಾಧ್ಯ ದೈವವಾಗಿರುವ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ವೀರಭದ್ರ ದೇವರ ವಿಶಾಳಿ ಜಾತ್ರೆಯ ನಿಮಿತ್ಯ ಆಯೋಜಿಸಲಾದ ಮಹಾರಥೋತ್ಸವ ಶನಿವಾರ ಸಂಜೆ ವಿಜೃಂಭಣೆಯಿಂದ ಜರುಗಿತು, ಇದಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು.
ಸಂಜೆ ರಥೋತ್ಸವ ಬೀದಿಯಲ್ಲಿ ಸುಮಾರು ೫ ಲಕ್ಷಕ್ಕೂ ಹೆಚ್ಚು ಜನ ಭಕ್ತರು ನೆರೆದಿದ್ದ ಭಕ್ತ ಸಮೂಹದ ಮಧ್ಯೆ ಸರಿಯಾಗಿ ೬.೩೦ ಕ್ಕೆ ಶ್ರೀಶೈಲ ಜಗದ್ಗುರುಗಳಾದ ಡಾ|| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯಸಾನಿಧ್ದದಲ್ಲಿ ಬೃಹನಮಠ ಹುಟಗಿಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳು ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.
ಮಹಾರಥೋತ್ಸವ ಸಾಗುತ್ತಿರುವ ವೇಳೆ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು. ನೆರೆದಿದ್ದ ಜನಸ್ತೋಮ ಜಯ ಹರ ಹರ ಶಂಭೋ ಮಹಾದೇವ ವಿರುಪಾಕ್ಷಲಿಂಗ ಮಹಾರಾಜಕೀ ಜಯ ಎಂದು ಸ್ವಾಮಿ ಹೆಸರಿನಲ್ಲಿ ಜಯಘೋಷಣೆ ಕೂಗುವುದರೊಂದಿಗೆ ಸಾಂಪ್ರದಾಯಿಕವಾಗಿ ಉತ್ತತ್ತಿ, ಬಾಳೆಹಣ್ಣು, ಖೊಬ್ಬರಿ, ಖಾರಿಕ, ರಥೋತ್ಸವಕ್ಕೆ ಎಸೆದು ತಮ್ಮ ಭಕ್ತಿಭಾವ ಮೆರೆದರು.
ವರ್ಷದಿಂದ ವರ್ಷಕ್ಕೆ ಜಾತ್ರೆಗೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗುತ್ತದೆ. ಈ ವರ್ಷವು ಜಾತ್ರೆಗೆ ಬರುವ ಭಕ್ತರಲ್ಲಿ ಗಣನೀಯ ಹೆಚ್ಚಳ ಕಂಡು ಬಂತು. ಜಾತಿ ಮತಗಳ ಭೇದಭಾವವಿಲ್ಲದೆ ಎಲ್ಲ ವರ್ಗದವರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಜಾತ್ರೆಯ ಸಂದರ್ಭದಲ್ಲಿ ಸದಲಗಾ ಪೋಲಿಸ್ ಠಾಣೆಯ ಪಿ ಎಸ್ ಐ ಅನಿಲ ಕುಂಬಾರ ಇವರ ನೇತೃತ್ವದಲ್ಲಿ ಭಾರಿ ಬಿಗಿ ಬಂದೋಬಸ್ತ್ ಒದಗಿಸಿದ್ದರು. ಸಂಜೆ ರಥೋತ್ಸವ ವೇಳೆಯಲ್ಲಿ ಎಲ್ಲ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿತ್ತು.
ಈ ಮಹಾರಥೋತ್ಸವಕ್ಕೆ ಹಿರೇಮಠ ಮುಂದ್ರೂಪದ ರೇಣುಕಾ ಶಿವಾಚಾರ್ಯ ಸ್ವಾಮೀಜಿಗಳು, ಹಿರೇಮಠ ಬೆಳ್ಳಂಕಿಯ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಗಳು, ಹಿರೇಮಠ ಹೂಲಿಯ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿಗಳು, ಭಾಗೋಜಿಕೊಪ್ಪದ ಶಿವಲಿಂಗ ಮುರುಗರಾಜೇಂದ್ರ ಶಿವಾಚಾರ್ಯ ಸ್ವಾಮೀಜಿಗಳು, ಮುತ್ತತ್ತಿಯ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿಗಳು, ಕಬ್ಬೂರದ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿಗಳು, ಪಾಶ್ಚಾಪುರದ ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು, ಕಲ್ಯಾಣಮಠ ಜಮಖಂಡಿಯ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿಗಳು, ಮಾಂಜರಿಯ ಗುರುಶಾಂತಲಿಂಗ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಗಳು, ಬನಹಟ್ಟಿಯ ಶಿವಶರಣ ಶಿವಾಚಾರ್ಯ ಸ್ವಾಮೀಜಿಗಳು, ಅಂಬಿಖಾನಗರದ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು, ಜೈನಾಪೂರದ ರೇಣುಕಾ ಶಿವಾಚಾರ್ಯ ಸ್ವಾಮೀಜಿಗಳು, ಹಿರೇಮಠ ಶಹಾಫೂರದ ಸೂರಗೂರೇಶ್ವರ ಶಿವಾಚಾರ್ಯ ಸ್ವಾಮೀಜಿಗಳು, ಮುತ್ತಿನ ಕಂತಿಮಠ ಜಮಖಂಡಿಯ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಗಳು, ಕರಬಂಟನಾಳ ಶಿವಕುಮಾರ ಸ್ವಾಮೀಜಿ, ಬಂಡಿಗಣಿಯ ಚಕ್ರವರ್ತಿ ದಾನೇಶ್ವರ ಸ್ವಾಮೀಜಿಗಳು ವಿರುಪಾಕ್ಷನಯ್ಯಾ ದೇವರು, ಎನಗಿ ಸಿದ್ದರಾಮ ಶಾಸ್ತ್ರಿಗಳು ವಿಜಾಪೂರ, ಸಿದ್ದೆಶ್ವರ ಶಿವಾಚಾರ್ಯ ಸ್ವಾಮಿಜಿಗಳು ಖಾನಾಪೂರ ಹಾಗೂ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ