Latest

ವೈರಲ್ ಆಯ್ತು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿಡೀಯೋ

 

https://youtube.com/shorts/Z7Q0AuH9kXM?feature=share

 

ಪ್ರಗತಿ ವಾಹಿನಿ ಸುದ್ದಿ, ಶಿರಸಿ – ಸರಳತೆ ಮತ್ತು ಸೌಜನ್ಯದ ನಡುವಳಿಕೆಗೆ ಹೆಸರಾಗಿರುವ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮ್ಮ ಅಡಕೆ ತೋಟದಲ್ಲಿ ಕೃಷಿ ಕೆಲಸದಲ್ಲಿ ನಿರತರಾಗಿರುವ ವಿಡಿಯೋ ಒಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ.

ಉನ್ನತ ಹುದ್ದೆಗೇರಿದರೂ ಗ್ರಾಮೀಣ ಬದುಕಿನ ಕೆಲಸ ಕಾರ್ಯಗಳನ್ನು ಕಾಗೇರಿ ಬಿಟ್ಟವರಲ್ಲ. ಆರು ಬಾರಿ ಶಾಸಕರಾಗಿ, ಶಿಕ್ಷಣ ಸಚಿವರಾಗಿ, ಪ್ರಸ್ತುತ ರಾಜ್ಯ ವಿಧಾನ ಸಭೆಯ ಸ್ಪೀಕರ್ ಹುದ್ದೆಗೇರಿದ್ದರೂ ಬಿಡುವಿದ್ದಾಗ ಶಿರಸಿ ತಾಲೂಕಿನ ಕಾಗೇರಿಯ ತಮ್ಮ ಹಳ್ಳಿಯ ಮನೆಯಲ್ಲಿ ಕೃಷಿ ಕೆಲಸದಲ್ಲಿ ಅವರು ತೊಡಗಿಕೊಳ್ಳುತ್ತಾರೆ. ಸಾಮಾನ್ಯ ಕೃಷಿಕರಂತೆ ಪಂಚೆಯುಟ್ಟು, ಗದ್ದೆ, ತೋಟ, ದನದ ಕೊಟ್ಟಿಗೆಯಲ್ಲಿ ವಿವಿಧ ಕೃಷಿ ಕೆಲಸಗಳಲ್ಲಿ ಪಾಲ್ಗೊಳ್ಳುತ್ತಾರೆ. ಗ್ರಾಮ ಪಂಚಾಯ್ತಿಯ ಮೆಟ್ಟಿಲು ಹತ್ತಿದ ಕೂಡಲೇ ಆಡಂಭರದ ಜೀವನಕ್ಕೆ ಶರಣಾಗುವ ಕೆಲ ಜನಪ್ರತಿಗಳ ಮುಂದೆ ಸ್ವತಃ ಇಡೀ ರಾಜ್ಯದ ಅತ್ಯಂತ ಉನ್ನತ ಹುದ್ದೆಯಲ್ಲಿದ್ದರೂ ಸರಳ ಬದುಕನ್ನು ಆಸ್ವಾದಿಸುವ ಕಾಗೇರಿ ಮಾದರಿಯಾಗಿ ನಿಲ್ಲುತ್ತಾರೆ.

ಪ್ರಸ್ತುತ ಅವರು ಕಾಗೇರಿಯ ತಮ್ಮ ಅಡಕೆ ತೋಟದಲ್ಲಿ ಅಡಕೆ ಗೊನೆಯನ್ನು ಇಳಿಸುವ ವಿಡಿಯೋ ವೈರಲ್ ಆಗಿದೆ. ಈ ಕೆಲಸ ಬರೀ ಶ್ರಮದ್ದೊಂದೇ ಅಲ್ಲದೇ ಇದಕ್ಕೆ ಕೌಶಲ್ಯವೂ ಬೇಕು. ಕಳೆದ ಸುಮಾರು ಮೂರು ದಶಕಕ್ಕೂ ಹೆಚ್ಚಿನ ಕಾಲದಿಂದ ರಾಜಕಾರಣದಲ್ಲಿ ಸಕ್ರೀಯವಾಗಿದ್ದು ಒತ್ತಡದಲ್ಲಿದ್ದರೂ ೨೦-೩೦ ಅಡಿ ಎತ್ತರದಿಂದ ಹಗ್ಗದ ಮೇಲೆ ಜಾರಿಸಿ ಬಿಡುವ ಅಡಕೆ ಗೊನೆಯನ್ನು ನೆಲಕ್ಕೆ ಬೀಳದಂತೆ ಹಗ್ಗದಲ್ಲೇ ಹಿಡಿದು ಇಳಿಸುವ ಕೃಷಿ ಕೆಲಸದ ಕೌಶಲ್ಯವನ್ನೂ ಸಹ ವಿಶ್ವೇಶ ಹೆಗಡೆ ಕಾಗೇರಿ ಮರೆತಿಲ್ಲ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

 

ಧರ್ಮಸ್ಥಳದ ಹೆಸರಿನಲ್ಲಿ ದತ್ತಿ ಸ್ಥಾಪನೆಗೆ ‌ಹೆಗ್ಗಡೆ ಸ್ಪಂದನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button