ಪ್ರಗತಿವಾಹಿನಿ ಸುದ್ದಿ, ಶಿವಮೊಗ್ಗ – ಹೋರಾಟಗಾರ, ಸಾಹಿತಿ, ಉಪನ್ಯಾಸಕ ವಿಠ್ಠಲ ಭಂಡಾರಿ (50) ನಿಧನರಾಗಿದ್ದಾರೆ.
ಕೊರೋನಾದಿಂದ ಬಳಲುತ್ತಿದ್ದ ಅವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಖ್ಯಾತ ಸಾಹಿತಿ ಆರ್.ವಿ.ಭಂಡಾರಿ ಅವರ ಪುತ್ರ, ಹೋರಾಟಗಾರ್ತಿ ಯಮುನಾ ಗಾಂವ್ಕರ್ ಅವರ ಪತಿ ವಿಠ್ಠಲ ಭಂಡಾರಿ ಸಿದ್ದಾಪುರ ಎಂಜಿಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಸಂವಿಧಾನ ಓದು ಚಳುವಳಿ ಮೂಲಕ ಪ್ರಸಿದ್ಧರಾಗಿದ್ದರು.
ಚಿಂತನ ಉತ್ತರ ಕನ್ನಡ, ಸಹಯಾನ ಮೊದಲಾದ ಸಂಘಟನೆಗಳಲ್ಲಿ ಕೆಲಸ ಮಾಡುತ್ತಿದ್ದರು. ಮೂಲತಃ ಹೊನ್ನಾವರದ ಕೆರೆಕೋಣದವರಾಗಿದ್ದರು.
ಹಿರಿಯ ನಟ ಶಂಖನಾದ ಅರವಿಂದ್ ಕೊರೊನಾಗೆ ಬಲಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ