ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ; ಅಧ್ಯಾತ್ಮದ ತಳಹದಿಯ ಮೇಲೆ ದೇಶದ ಸಂಸ್ಕೃತಿ ಎತ್ತಿ ಹಿಡಿದು ಯುವಕರಿಗೆ ಸ್ಪೂರ್ತಿಯಾಗಿದ್ದ ಸ್ವಾಮಿ ವಿವೇಕಾನಂದರ ಆದರ್ಶ ತತ್ವಗಳು ಸರ್ವಕಾಲಿಕವೆಂದು ನಿಡಸೋಸಿ ಸಿದ್ದ ಸಂಸ್ಥಾನ ಮಠದ ಪಂಚಮಶಿವಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ತಾಲೂಕಿನ ಸಂಕೇಶ್ವದ ಪಟ್ಟಣದ ನೇಸರಿ ಗಾರ್ಡನ್ ನಲ್ಲಿ, ಸ್ವಾಮಿ ವಿವೇಕಾನಂದರು ಬೆಳಗಾವಿಗೆ ಆಗಮಿಸಿದ ಸಂಭ್ರಮಾಚರಣೆ ಮತ್ತು ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಭಕ್ತಸಮ್ಮೆಳನ ಕಾರ್ಯಕ್ರಮ ಸಾನಿದ್ಯ ವಹಿಸಿ ಮಾತನಾಡಿದರು
ಬೆಳಗಾವಿ ಶ್ರೀರಾಮಕೃಷ್ಣ ಆಶ್ರಮದ ಸ್ವಾಮಿ ಮೋಕ್ಷತ್ಮಾನಂದಜೀ ಮಹಾರಾಜರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಮುಖ್ಯವಾಗಿ ಶ್ರದ್ದೆ ಸಮಯ ಪ್ರಜ್ಷೆ, ಕಲಿಯಬೇಕು ಸತತ ಅಭ್ಯಾಸ ಇಲ್ಲದಿದ್ದರೆ ಯಶ್ಸಸ್ಸು ಸಾಧ್ಯವಿಲ್ಲ. ಇಚ್ಚಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿಗಳನ್ನು ಜೀವನದಲ್ಲಿ ಕಾರ್ಯರೂಪಕ್ಕೆ ತರುವವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ.
ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ಉನ್ನತ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳವುದರ ಜತೆಗೆ ವಿದ್ಯಾರ್ಥಿಗಳು ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಏಕಾಗ್ರತೆ ಬೆಳೆಸಿಕೊಳ್ಳಬೇಕು ಆಗ ಮಾತ್ರ ಸಾಧನೆಯತ್ತ ದೃಷ್ಟಿ ಹರಿಸಬಹುದಾಗಿದೆ. ವಿದ್ಯಾರ್ಥಿ ಜೀವನ ಬಹುಮುಖ್ಯವಾಗಿದೆ ಎಂದರು.
ಬೆಳಗಾವಿ ಶ್ರೀ ರಾಮಕೃಷ್ಣ ಆಶ್ರಮದ ನವದುರ್ಗಾನಂದಜೀ ಮಹಾರಾಜ ಆರ್ಶಿವಚನ ನೀಡಿ ಮಾತನಾಡಿ ನಾವು ಪ್ರಬಲವಾಗಿ ಬೆಳೆಸುತ್ತೇವೆಯೋ ಅದೇ ನಮ್ಮ ವ್ಯಕ್ತಿವಾಗುತ್ತಿದೆ ವಿವೇಕಾನಂದರ ಸಾಹಿತ್ಯವನ್ನು ಹೆಚ್ಚು ಓದಬೇಕು ಇದು ಜೀವನದಲ್ಲಿ ಗುರಿ ತಲುಪಲು ಆತ್ಮ ಸ್ಥೈರ್ಯ ತುಂಬುತ್ತದೆ. ಶಾರೀರಕ, ಮಾನಸಿಕ ಮತ್ತು ಬೌದ್ದಿಕ ಬೆಳವಣಿಗೆಯಿಂದ ಯಶಸ್ಸುಕಾಣಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಸ್ವಾಮಿ ವಿವೇಕಾನಂದ ಆಸ್ಪತ್ರೆಯ ವ್ಯಧ್ಯಾಧಿಕಾರಿ ಹಾಗೂ ಸಂಘಟಕ ಡಾ. ರಮೇಶ ದೊಡಭಂಗಿ ಪ್ರಸ್ತಾವಿಕವಾಗಿ ಮಾತನಾಡಿದರು
ಎಸ್‌ಎಲ್‌ಸಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಪರಿಕ್ಷೇಯಲ್ಲಿ ಬರುವಂತ ಭಯದದ ಬಗ್ಗೆ ಪೂಜ್ಯರು ಪ್ರಶ್ನೆಗಳನ್ನು ನ್ನು ಕೇಳಿ ಉತ್ತರಿಸಿದರು.
ಕಾರ್ಯಕ್ರಮ ಸಂಘಟಕರು ವಿದ್ಯಾರ್ಥಿಗಳು ಶಿಕ್ಷಕರು ಗಣ್ಯರು ಇನ್ನಿತರರು ಉಪಸ್ಥಿತರಿದ್ದರು ಶಿಕ್ಷಕ ಎಮ್,ಬಿ ಕುಂಬಾರ ನಿರೂಪಿಸಿದರು. ಕಿರಣ ಕಿವಂಡಾ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ