ರಮೇಶ ಜಾರಕಿಹೊಳಿ ವಿರುದ್ಧ ಅಶ್ಲೀಲ ವಾಟ್ಸಪ್ -ಸಿಆರ್ ಪಿಎಫ್ ಯೋಧನ ವಿರುದ್ಧ ದೂರು

ರಮೇಶ ಜಾರಕಿಹೊಳಿ ವಿರುದ್ಧ ಅಶ್ಲೀಲ ವಾಟ್ಸಪ್ -ಸಿಆರ್ ಪಿಎಫ್ ಯೋಧನ ವಿರುದ್ಧ ದೂರು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಶಾಸಕ, ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ಅಶ್ಲೀಲ ಶಬ್ಧ ಬಳಸಿ ಪೊಸ್ಟ್ ಮಾಡಿದ ಆರೋಪದ ಮೇಲೆ ಸಿಆರ್ ಪಿಎಫ್ ಕಾನಸ್ಟೆಬಲ್ ವಿರುದ್ಧ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಕಾಕ ತಾಲೂಕಿನ ಖಾನಾಪುರ (ಸಾವಳಗಿ ಹತ್ತಿರ) ನಿವಾಸಿ ಸತ್ತಿಗೌಡ ಭೀಮಗೌಡ ಪಾಟೀಲ ಎನ್ನುವವರು ದೂರು ದಾಖಲಿಸಿದ್ದಾರೆ.
ಸಾವಳಗಿ ಪ್ರೀಮಿಯರ್ ಗ್ರುಪ್ ಎನ್ನುವ ವಾಟ್ಸಪ್ ಗ್ರುಪ್ ನಲ್ಲಿ ಸತ್ತಿಗೌಡ ಪಾಟೀಲ ಅವರ ಮಗ ವಿವೇಕ ಪಾಟೀಲ 23ರಂದು ರಾತ್ರಿ ಒಂದು ಪೋಸ್ಟ್ ಹಾಕಿದ್ದರು. ರಮೇಶ ಜಾರಕಿಹೊಳಿ ಫೋಟೋ ಹಾಕಿ, ಅದರ ಕೆಳಗಡೆ ಪವರ್ ಆಫ್ ಅಣ್ಣಾಜಿ ಎಂದು ಬರೆದಿದ್ದರು.
ಅಂದು ವಿಶ್ವಾಸಮತದಲ್ಲಿ ಮೈತ್ರಿ ಸರಕಾರ ಪರಾಭವಗೊಂಡಿತ್ತು. ಸರಕಾರ ಬೀಳಲು ರಮೇಶ ಜಾರಕಿಹೊಳಿ ಅವರು ಕಾರಣ. ಅವರ ಪವರ್ ಇದು ಎನ್ನುವ ಅರ್ಥದಲ್ಲಿ ವಿವೇಕ ಪೋಸ್ಟ್ ಮಾಡಿದ್ದರು.
ಅದೇ ಗ್ರುಪ್ ನಲ್ಲಿ ಚರಣ್ ಸಿದ್ದರಾಮ ಮಂಗೋಳಿ ಎನ್ನುವ ಸಿಆರ್ ಪಿಎಫ್ ಕಾನಸ್ಟೆಬಲ್ ಆ ಪೋಸ್ಟನ್ನು ರೀ ಪೋಸ್ಟ್ ಮಾಡಿದ್ದಾರೆ. ಆದರೆ ಅದರಲ್ಲಿ ಅಶ್ಲೀಲ ಭಾಷೆಯನ್ನು ಬಳಸಿದ್ದಾರೆ. ಹಾಗಾಗಿ ಚರಣ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ.
ಘಟಪ್ರಭಾ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ