Kannada NewsKarnataka NewsPolitics

ಸ್ವಯಂ ನಿರ್ಧಾರದಿಂದ ರಾಜಿನಾಮೆ – ಸಚಿವ ನಾಗೇಂದ್ರ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಸ್ವಯಂ ನಿರ್ಧಾರದಿಂದ ರಾಜಿನಾಮೆ ನಿರ್ಧಾರ ಮಾಡಿರುವುದಾಗಿಯೂ, ಇಂದು ಸಂಜೆ 7.30ಕ್ಕೆ ರಾಜಿನಾಮೆ ಸಲ್ಲಿಸುವುದಾಗಿ ಸಚಿವ ನಾಗೇಂದ್ರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಿನಾಮೆಗೆ ಯಾರಿಂದಲೂ ಒತ್ತಡವಿಲ್ಲ. ನಾನೇ ಸ್ವಯಂ ಪ್ರೇರಣೆಯಿಂದ ರಾಜಿನಾಮೆ ನೀಡುತ್ತಿದ್ದೇನೆ. ವಿರೋಧ ಪಕ್ಷದವರು ಕಾಂಗ್ರೆಸ್ ಪಕ್ಷದ ಮೇಲೆ ಕೆಸರೆರಚುವ ಕೆಲಸ ಮಾಡುತ್ತಿದ್ದಾರೆ. ಯಾರಿಗೂ ಮುಜುಗರವಾಗಬಾರದೆನ್ನುವ ಕಾರಣದಿಂದ ರಾಜಿನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದರು.

Home add -Advt

ವಾಲ್ಮೀಕಿ ನಿಗಮದ ಯಾವುದೇ ಘಟನೆ ನನ್ನ ಗಮನಕ್ಕೆ ಬಂದಿಲ್ಲ. ಇದರಲ್ಲಿ ನನ್ನ ಪಾತ್ರ ಏನೇನೂ ಇಲ್ಲ. ತನಿಖೆಗೆ ಯಾವುದೇ ಅಡ್ಡಿಯಾಗಬಾರದನ್ನುವ ಕಾರಣಕ್ಕೆ ರಾಜಿನಾಮೆ ನೀಡುತ್ತಿದ್ದೇನೆ. ಹಾಗಾಗಿ ತನಿಖೆ ಮುಕ್ತಾಯಗೊಂಡ ಬಳಿಕ ನಾನು ಮರಳಿ ಸಂಪುಟಕ್ಕೆ ಬರುತ್ತೇನೆ ಎಂದೂ ಅವರು ಹೇಳಿದರು.

Related Articles

Back to top button