ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿನ ಕೆಎಲ್‌ಎಸ್ ಜಿಐಟಿ ಎನ್‌ಎಸ್‌ಎಸ್ ಘಟಕದಿಂದ ಮತದಾನದ ಮಹತ್ವದ ಅರಿವು ಮತ್ತು ನಾಗರಿಕರ ಜವಾಬ್ದಾರಿಗಳ ಅರಿವು ಮೂಡಿಸಲು ಮತದಾರರ ನೋಂದಣಿ ರ‍್ಯಾಲಿ ನಡೆಸಲಾಯಿತು.
ಜಿಲ್ಲಾಪಂಚಾಯಿತಿ ಕಚೇರಿಯಿಂದ ನೇಮಕಗೊಂಡಿರುವ ರಾಜ್ಯಮಟ್ಟದ ಮಾಸ್ಟರ್ ಟ್ರೈನರ್ ಜಿ.ಎಂ.ಸಯೀದ್ ಅವರು ಯುವ ಮತದಾರರನ್ನು ಉದ್ದೇಶಿಸಿ ಮಾತನಾಡಿ, ಯುವ ಮತದಾರರಿಗೆ ಕಡ್ಡಾಯ ಮತದಾನಕ್ಕೆ ಹಾಗೂ ಹೊಸ ಮತದಾರರ ನೋಂದಣಿಗೆ ಮನವಿ ಮಾಡಿದರು.
ರ‍್ಯಾಲಿಯಲ್ಲಿ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದೇ ವೇಳೆ ಜಿಐಟಿ ಕ್ಯಾಂಪಸ್‌ನಲ್ಲಿರುವ ಸಿಲ್ವರ್ ಜುಬಿಲಿ ಆಡಿಟೋರಿಯಂನಲ್ಲಿ ಆನ್‌ಲೈನ್ ನೋಂದಣಿ ಪ್ರಾತ್ಯಕ್ಷಿಕೆ ಅಭಿಯಾನ ನಡೆಸಲಾಯಿತು. ಈ ಕಾರ್ಯಾಗಾರದ ಅಧ್ಯಕ್ಷತೆಯನ್ನು ಕೆಎಲ್‌ಎಸ್ ಜಿಐಟಿ ಮತ್ತು ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ.ಜೆ.ಕೆ.ಕಿತ್ತೂರು ವಹಿಸಿದ್ದರು.
ಗಡಿ ಕಿಚ್ಚು: ತಟಸ್ಥ ಸಮಿತಿ ರಚಿಸಲು ಉಭಯ ರಾಜ್ಯಗಳಿಗೆ ಅಮಿತ್ ಶಾ ಸೂಚನೆ
https://pragati.taskdun.com/border-dispute-karnataka-maharashtra-cms-meeting-begins-under-the-mediation-of-amit-shah/
*ನಿಮ್ಮ ಹಣೆ ಬರಹವನ್ನು ನೀವೇ ಬರೆಯಬೇಕು: ವಿದ್ಯಾರ್ಥಿಗಳಿಗೆ ಸಿಎಂ ಬೊಮ್ಮಾಯಿ ಸಲಹೆ*
https://pragati.taskdun.com/chowgule-education-societycm-basavaraj-bommaihubli/
https://pragati.taskdun.com/acid-attack-on-school-girl-by-two-bike-riders/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ